ಗಲ್ಫ್

160 ಮಂದಿ ಪಾಕಿಸ್ತಾನಿಗರನ್ನು ಗಡಿಪಾರು ಮಾಡಿದ ಸೌದಿ ಅರೇಬಿಯಾ

Pinterest LinkedIn Tumblr

ಇಸ್ಲಾಮಾಬಾದ್: ಅಕ್ರಮವಾಗಿ ನೆಲೆಸಿದ್ದ 160 ಮಂದಿ ಪಾಕಿಸ್ತಾನಿಗರನ್ನು ಸೌದಿ ಅರೇಬಿಯಾ ಗಡಿಪಾರು ಮಾಡಿದೆ.

ವಿಶೇಷ ವಿಮಾನ ಮೂಲಕ 160 ಮಂದಿಯನ್ನು ಪಾಕಿಸ್ತಾನದ ಬೆನಜೀರ್ ಭುಟೋ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಕಳುಹಿಸಿಕೊಡಲಾಗಿದೆ ಎಂದು ದುನ್ಯಾ ನ್ಯೂಸ್ ವರದಿ ಮಾಡಿದೆ.

ಸೌದಿಯಿಂದ ಗಡಿಪಾರುಗೊಂಡಿರುವ ಪಾಕಿಸ್ತಾನಿಗರನ್ನು ವಿಮಾನ ನಿಲ್ದಾಣದಲ್ಲಿ ಪಾಕಿಸ್ತಾನದ ವಲಸೆ ಅಧಿಕಾರಿಗಳು ಪರಿಶೀಲನೆ ಬಳಿಕ ವಶಕ್ಕೆ ಪಡೆದರು.

2012-2015ರಲ್ಲಿ ಸುಮಾರು 2.50 ಲಕ್ಷ ಪಾಕಿಸ್ತಾನಿಗರನ್ನು ವಿವಿಧ ದೇಶಗಳು ಗಡಿ ಪಾರು ಮಾಡಿದೆ. ಸೌದಿ ಅರೇಬಿಯಾ 1.31.643 ಮಂದಿ, ಯುಎಇ 32,458 ಮಂದಿ, ಇರಾನ್ 28, 684, ಒಮನ್ 17,248, ಗ್ರೀಸ್ 14,145, ಯುಕೆ 9,778 ಮತ್ತು ಮಲೇಷ್ಯಾ 8,861 ಪಾಕಿಸ್ತಾನಿಗರನ್ನು ಗಡಿಪಾರು ಮಾಡಿದೆ.

Comments are closed.