ಮನೋರಂಜನೆ

ಗೃಹಿಣಿಯಾಗಿರುವುದು ವಿಶ್ವದಲ್ಲಿಯೇ ಅತ್ಯಂತ ಕಠಿಣವಾದ ಕೆಲಸ: ಪ್ರೀತಿ ಜಿಂಟಾ

Pinterest LinkedIn Tumblr

ಮುಂಬೈ: ಉದ್ಯೋಗಸ್ಥ ಮಹಿಳೆಯರು ಮನೆಯಲ್ಲಿ ಗೃಹಿಣಿಯಾಗಿರುವುದು ಸುಲಭ ಕೆಲಸವಲ್ಲ ಎಂದು ಬಾಲಿವುಡ್ ನಟಿ ಪ್ರೀತಿ ಜಿಂಟಾ ಅವರು ಹೇಳಿದ್ದಾರೆ.

ಲ್ಯಾಕ್ಮೆ ಫ್ಯಾಶನ್ ವೀಕ್ ಅಂಗವಾಗಿ ಮುಂಬೈನಲ್ಲಿ ನಡೆದ ಫ್ಯಾಶನ್ ಶೋನಲ್ಲಿ ಭಾಗಿಯಾಗಿ ಮಾತನಾಡಿರುವ ಅವರು, ಮನೆಯಲ್ಲಿ 24*7 ಕೆಲಸ ಮಾಡಿದರೂ ನಮಗೆ ಯಾವುದೇ ಮೆಚ್ಚುಗೆಗಳು ವ್ಯಕ್ತವಾಗುವುದಿಲ್ಲ. ಉದ್ಯೋಗಸ್ಥ ಮಹಿಳೆಯರು ಗೃಹಿಣಿಯಾಗಿ ಮನೆಯಲ್ಲಿ ಕೆಲಸ ಮಾಡಿಕೊಂಡು ಇರುವುದು ನಿಜಕ್ಕೂ ವಿಶ್ವದಲ್ಲಿಯೇ ಅತ್ಯಂತ ಕಠಿಣ ಕೆಲಸವಾಗಿದೆ ಎಂದು ಹೇಳಿದ್ದಾರೆ.

ಮನೆಯಲ್ಲಿ 24*7 ಗಂಟೆಗಳ ಕಾಲ ಕೆಲಸ ಮಾಡಿದರೂ ನಮಗೆ ಮೆಚ್ಚುಗೆಗಳು ಸಿಗುವುದಿಲ್ಲ. ವಿಶ್ರಾಂತಿ ಇಲ್ಲದೆಯೇ ಕೆಲಸ ಮಾಡುತ್ತೇವೆ. ನಮ್ಮಂತೆಯೇ ವೃತ್ತಿಪರರಾಗಿರುವ ಮಹಿಳೆಯರು, ಉದ್ಯೋಗ ಮಾಡುವ ಸಂಸ್ಥೆಗಳಿಂದ ಮೆಚ್ಚುಗೆಗಳನ್ನು ಗಳಿಸುತ್ತೇವೆ. ಹೊರಗೆ ಕೆಲಸ ಮಾಡಿ, ಮನೆಯೊಳಗೆ ಕೆಲಸ ಮಾಡುವ ಮಹಿಳೆಯರು ಅದ್ಭುತವೆಂದೇ ಹೇಳಬಹುದು. ಅಂತಹ ಮಹಿಳೆಯರು ಮನೆಯನ್ನು ನಿಭಾಯಿಸುವುದೂ ಅಲ್ಲದೆ, ಹೊರ ಕೆಲಸವನ್ನೂ ನಿಭಾಯಿಸುತ್ತಾರೆ ಎಂದು ತಿಳಿಸಿದ್ದಾರೆ.

ಇದೇ ವೇಳೆ ಮಹಿಳಾ ಪ್ರಧಾನಿತ ಚಿತ್ರಗಳ ಕುರಿತ ಪ್ರಶ್ನೆಯೊಂದಕ್ಕೆ ಉತ್ತರಿಸಿರುವ ಅವರು, ಮಹಿಳಾ ಪ್ರಧಾನಿತ ಚಿತ್ರಿಗಳಿವೆ ಎಂಬುದು ನನ್ನ ಗಮನಕ್ಕೆ ಬಂದಿಲ್ಲ. ಉತ್ತಮವಾದ ಕತೆಗಳು ಉತ್ತಮ ಚಿತ್ರಗಳನ್ನಾಗಿಸುತ್ತವೆ. ನನ್ನ ಮೊದಲ ಚಿತ್ರ ಕ್ಯಾ ಕೆಹ್ನಾ ಚಿತ್ರವನ್ನು ನೋಡಿದರೆ, ಅದನ್ನು ಮಹಿಳಾ ಪ್ರಧಾನಿತ ಚಿತ್ರವೆಂದು ಹೇಳುತ್ತಾರೆ. ಆದರೆ, ಅದು ಮಹಿಳಾ ಪ್ರಧಾನಿತ ಚಿತ್ರವೆಂದು ನಾನು ಹೇಳುವುದಿಲ್ಲ. ಉತ್ತಮವಾದ ಕಥೆಯೆಂದು ಹೇಳುತ್ತೇನೆ. ಏಕೆಂದರೆ, ಕಥೆ ಅತ್ಯಂತ ಪ್ರಮುಖವಾಗಿರುತ್ತದೆ ಎಂದು ಹೇಳಿದ್ದಾರೆ.

Comments are closed.