ರಾಷ್ಟ್ರೀಯ

ಭಾರತದಲ್ಲಿ 16 ಮೆಗಾಪಿಕ್ಸೆಲ್‌ ಫ್ರಂಟ್‌ ಕ್ಯಾಮೆರಾದ ಒಪ್ಪೊ ಎ57 ಮೊಬೈಲ್‌ ಇಂದಿನಿಂದ ಮಾರಾಟ

Pinterest LinkedIn Tumblr

ನವದೆಹಲಿ: ಸೆಲ್ಫಿಪ್ರಿಯರಿಗೆ ಇಲ್ಲಿದೆ ಸಿಹಿಸುದ್ದಿ. ಅತಿ ಹೆಚ್ಚು ಮೆಗಾಪಿಕ್ಸೆಲ್‌ನ ಫ್ರಂಟ್‌ ಕ್ಯಾಮೆರಾ ಹೊಂದಿರುವ ಸ್ಮಾರ್ಟ್‌ಫೋನ್‌ ಇದೀಗ ಭಾರತದಲ್ಲಿ ಮಾರಾಟಕ್ಕೆ ಲಭ್ಯವಿದೆ.

16 ಮೆಗಾಪಿಕ್ಸೆಲ್‌ ಸೆಲ್ಫಿ ಕ್ಯಾಮೆರಾ ಹೊಂದಿರುವ ಒಪ್ಪೊ ಎ57 4ಜಿ ಸ್ಮಾರ್ಟ್‌ಫೋನ್‌ ಶುಕ್ರವಾರದಿಂದ ಭಾರತೀಯ ಮಾರುಕಟ್ಟೆಯಲ್ಲಿ ಲಭ್ಯವಿದೆ.

ಪ್ರಮುಖ ಮೊಬೈಲ್‌ ಮಾರಾಟ ಮಳಿಗೆಗಳ ಜತೆಗೆ ಫ್ಲಿಪ್‌ಕಾರ್ಟ್‌, ಅಮೆಜಾನ್‌, ಸ್ನಾಪ್‌ಡೀಲ್‌ನಂಥ ಆನ್‌ಲೈನ್‌ ಮಾರಾಟಜಾಲಗಳಲ್ಲೂ ಮೊಬೈಲ್‌ ಲಭ್ಯವಿದೆ. ಸದ್ಯ ಈ ಮೊಬೈಲ್‌ನ ಬೆಲೆ ₹14,990.

ಆಂಡ್ರಾಯ್ಡ್‌ 6.0 ಮಾರ್ಷ್‌ಮೆಲ್ಲೊ ವರ್ಷನ್‌ನ ಚಿನ್ನದ ಬಣ್ಣದ ಮೊಬೈಲ್‌ ಇದಾಗಿದ್ದು 2.5ಡಿ ಕರ್ವ್‌ ಗ್ಲಾಸ್‌ ಜತೆಗೆ 5.2 ಇಂಚಿನ ಎಚ್‌ಡಿ ಎಲ್‌ಸಿಡಿ ಡಿಸ್ಪ್ಲೇ ಹೊಂದಿದೆ.

3ಜಿ ರ್ಯಾಮ್‌, 32 ಜಿಬಿ ಇನ್‌ಬಿಲ್ಟ್‌ ಸ್ಟೋರೇಜ್‌ ಹೊಂದಿರುವ ಈ ಮೊಬೈಲ್‌ 128 ಜಿಬಿ ಎಕ್ಸ್‌ಪ್ಯಾಂಡಬಲ್‌ ಮೆಮರಿ ಕಾರ್ಡ್‌ಗೆ ಸಪೋರ್ಟ್‌ ಮಾಡಲಿದೆ.

Comments are closed.