
ಮಂಗಳೂರು, ಫೆಬ್ರವರಿ.2: ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಅನುವಂಶೀಯ ಮೊಕ್ತೇಸರ ಕೊಡೆತ್ತೂರು ಗುತ್ತು ಡಾ. ರವೀಂದ್ರನಾಥ ಪೂಂಜಾ ಅವರು ಗುರುವಾ ವಿಧಿವಶವಾಗಿದ್ದಾರೆ.
ಕಟೀಲು ದೇವಳದ ಅನುವಂಶೀಯ ಮೊಕ್ತೇಸರ ವಿಚಾರಕ್ಕೆ ಸಂಬಂಧಿಸಿದ ವ್ಯಾಜ್ಯದ ತೀರ್ಪು ಕಳೆದ ವರ್ಷ ಕೊಡೆತ್ತೂರು ಗುತ್ತಿನ ರವೀಂದ್ರನಾಥ ಪೂಂಜಾ ಅವರ ಪರವಾಗಿ ಬಂದಿತ್ತು. ಅದೇ ವರ್ಷ ಕೋರ್ಟು ತೀರ್ಪು ಬಳಿಕ ಆಡಳಿತ ಮೊಕ್ತೇಸರರಾಗಿ ಅವರು ಅಧಿಕಾರ ಸ್ವೀಕರಿಸಿದ್ದರು.
ವೃತ್ತಿಯಲ್ಲಿ ವೈದ್ಯರಾಗಿದ್ದ ರವೀಂದ್ರನಾಥ ಪೂಂಜಾ ಅವರು ಕಳೆದ ಕೆಲವು ದಿನಗಳಿಂದ ಅಸ್ವಸ್ಥರಾಗಿದ್ದು,ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಇಂದು ಅವರು ಚಿಕಿತ್ಸೆ ಫಲಕಾರಿಯಾಗದೆ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.
Comments are closed.