ಕರಾವಳಿ

ಅಪೂರ್ಣ ಕಾಮಗಾರಿ-ಬೇಕಾಬಿಟ್ಟಿ ಸುಂಕ ವಸೂಲಿ; ಸಾಸ್ತಾನಾ ಟೋಲ್ ವಿರುದ್ಧ ಸಿಡಿದು ನಿಂತ ಸಾರ್ವಜನಿಕರು

Pinterest LinkedIn Tumblr

ಉಡುಪಿ: ಚತುಷ್ಪದ ಹೆದ್ದಾರಿ ಕಾಮಗಾರಿ ಈ ಭಾಗದಲ್ಲಿ ಅಪೂರ್ಣವಾಗಿದ್ದರೂ ನಿನ್ನೆ (01-02-17)ಮಧ್ಯರಾತ್ರಿಯಿಂದ ಕಾರ್ಯಾಚರಿಸಬೇಕಾಗಿದ್ದ ಸಾಸ್ತಾನಾ ಗುಂಡ್ಮಿ ಸಮೀಪ ರಾ.ಹೆ.ಯಲ್ಲಿ ನಿರ್ಮಿಸಲಾಗಿರುವ ಹೆದ್ದಾರಿ ಸುಂಕ ವಸೂಲಿ ನಾಕಾದಿಂದ ವಾಹನಗಳಿಂದ ಬೇಕಾಬಿಟ್ಟಿ ಸುಂಕವಸೂಲಿಯ ದರಪಟ್ಟಿ ಹಾಗೂ ಸರ್ವಿಸ್ ರಸ್ತೆಗೆ ಆಗ್ರಹಿಸಿ ಸಾಸ್ತಾನ ಹಾಗೂ ಪರಿಸರದ ಸಾರ್ವಜನಿಕರು ಬೃಹತ್ ಸಂಖ್ಯೆಯಲ್ಲಿ ಹೆದ್ದಾರಿ ಜಾಗೃತಿ ಸಮಿತಿಯ ಮುಂದಾಳತ್ವದಲ್ಲಿ ಟೋಲ್ ಗೇಟ್ ನಾಕಾದ ಮುಂದೆ ಪ್ರತಿಭಟಿಸಿದ ವಿದ್ಯಮಾನ ಜರಗಿದೆ.

ಈ ಸಂದರ್ಭದಲ್ಲಿ ಸಾರ್ವಜನಿಕರ ಪ್ರತಿಭಟನೆಗೆ ಸಾತ್ ನೀಡಿದ ಮಾಜಿ ಸಂಸದ ಜೆಪಿ ಹೆಗ್ಡೆಯವರು ಈಗಾಗಲೇ ಜಿಲ್ಲಾಡಳಿತವು ಟೋಲ್ ಗೇಟ್ ವಸೂಲಿಗೆ ನಿಂತಿರುವ ನವಯುಗ್ ಕಂಪೆನಿಗೆ ತಕ್ಷಣ ಹೆದ್ದಾರಿ ಸುಂಕವಸೂಲಿಗೆ ಮುಂದಾಗದಂತೆ ಹೇಳಿದ್ದು,ಪೋಲಿಸರಿಗೂ ಮಾಹಿತಿ ರವಾನಿಸಿದೆ ಉಡುಪಿ ಜಿಲ್ಲಾಧಿಕಾರಿಗಳು ಬೆಂಗಳೂರಿಗೆ ತೆರಳಿರುವುದರಿಂದ ಅವರು ಬಂದ ಮೇಲೆ ಸಾರ್ವಜನಿಕ ಅಹವಾಲುಗಳನ್ನು ಚರ್ಚಿಸುವುದಾಗಿ ಹೇಳಿದರು.

ಈಗಾಗಲೇ ಇತರೆಡೆಗಳಲ್ಲಿ ಕಾರ್ಯಾಚರಿಸುತ್ತಿರುವ ಆದರೆ ಟೋಲ್ ನಾಕಾದ ಸರ್ವಾಧಿಕಾರದ ವಿರುದ್ಧ ಸಿಡಿದು ನಿಂತಿರುವ ಸಾರ್ವಜನಿಕರು ತಮ್ಮ ಬೇಡಿಕೆ ಹಾಗೂ ಅಹವಾಲುಗಳನ್ನು ಪೂರೈಸದೇ ಬೇಕಾಬಿಟ್ಟಿ ಹೆದ್ದಾರಿ ಸುಂಕವಸೂಲಿಗೆ ಮುಂದಾದರೆ ಅಹೋರಾತ್ರಿ ಧರಣಿ ನಡೆಸುವುದಾಗಿ ಎಚ್ಚರಿಸಿದ್ದಾರೆ.

Comments are closed.