
ಈ ಬಾರಿಯ ಬಿಗ್‌ಬಾಸ್‌ನಲ್ಲಿ ವಿಜೇತರಾಗಿರುವ ಒಳ್ಳೆ ಹುಡುಗ ಪ್ರಥಮ್ ತನ್ನ ಒಳ್ಳೆತನವನ್ನು ಬಹಿರಂಗಪಡಿಸಿದ್ದಾರೆ. ಅದೇನು ಅಂದುಕೊಂಡಿರಾ …ಮುಂದೆ ಓದಿ….
114 ದಿನಗಳ ಕಾಲ ಬಿಗ್‌ಬಾಸ್ ಮನೆಯೊಳಗಿದ್ದು 14 ಬಾರಿ ಎಲಿಮಿನೇಶನ್‌ಗೆ ನಾಮಿನೇಟ್ ಆದ್ರೂ ಫೈನಲ್‌ಗೆ ಬಂದು ತಲುಪಿರೋ ಒಳ್ಳೆ ಹುಡುಗ ಪ್ರಥಮ್ ಕೊನೆಗೂ ಈ ಬಾರಿ ಬಿಗ್‌ಬಾಸ್ ಸೀಸನ್ 4 ರ ವಿನ್ನರ್ ಆಗಿದ್ದಾರೆ. ಇನ್ನು ಕಿರಿಕ್ ಕೀರ್ತಿ ರನ್ನರ್ ಅಪ್ ಆಗಿದ್ದಾರೆ.
ಕಲರ್ಸ್ ವಾಹಿನಿಯ ಬಹುದೊಡ್ಡ ರಿಯಾಲಿಟಿ ಶೋ ಬಿಗ್ ಬಾಸ್ ಕನ್ನಡದ 4ನೇ ಆವೃತ್ತಿಯ ವಿಜೇತರಾಗಿ ನಿರ್ದೇಶಕ ಪ್ರಥಮ್ ಹೊರಹೊಮ್ಮಿತ್ತಿದ್ದಂತೆ ತನ್ನ ಸಂತೋಷವನ್ನು ವ್ಯಕ್ತಪಡಿಸಿದರು. ಪ್ರಶಸ್ತಿ ಗೆದ್ದ ಬೆನ್ನಲ್ಲೇ ಪ್ರಶಸ್ತಿ ಮೊತ್ತವಾದ 50 ಲಕ್ಷ ರುಪಾಯಿಗಳನ್ನು ಸಾಮಾಜಿಕ ಕಾರ್ಯಗಳಿಗೆ ಬಳಸುವುದಾಗಿ ಘೋಷಿಸಿದ್ದಾರೆ. ಈ ಪ್ರಶಸ್ತಿ ಮೊತ್ತದಲ್ಲಿ ಒಂದೇ ಒಂದು ರೂಪಾಯಿ ಕೂಡಾ ನನಗೆ ಬೇಡ, ರೈತರಿಗೆ, ಸೈನಿಕರಿಗೆ, ಮಹಿಳೆಯರಿಗೆ, ನಮ್ಮ ತಂದೆ ಅವರ ಊರಿನ ಅಭಿವೃದ್ಧಿಗೆ ಪ್ರಶಸ್ತಿ ಮೊತ್ತವನ್ನು ನೀಡುವೆ ಎಂದು ನಿರ್ದೇಶಕ ಪ್ರಥಮ್ ಅವರು ಘೋಷಿಸಿದರು.
ಪ್ರಥಮ್ ಅವರು ತಮ್ಮ ತಂದೆಯ ಆಶಯದಂತೆ ಪ್ರಥಮ್ ತಾವು ಗೆದ್ದ 50 ಲಕ್ಷ ರೂ ಹಣವನ್ನು , ಹಳ್ಳಿಗಳ ಉದ್ದಾರಕ್ಕೆ, ಸೈನಿಕರಿಗೆ ಮತ್ತು ರೈತರಿಗೆ ನೀಡುವುದಾಗಿ ಘೋಷಿದರು.
* 5 ಲಕ್ಷ ಟಿ.ನರಸಿಪುರ, ಕೊಳ್ಳೆಗಾಲ ಬಳಿ ಇರುವ ಬಡ ಹೆಣ್ಣುಮಕ್ಕಳ ಮದುವೆ ಸಹಾಯಕ್ಕೆ.
* 5 ಲಕ್ಷ ಮಹದೇಶ್ವರ ಬೆಟ್ಟದ ಬಳಿ ಇರುವ ಮನೆಗಳಿಗೆ ವಿದ್ಯುತ್ ವ್ಯವಸ್ಥೆ
*20 ಲಕ್ಷ ಹುತಾತ್ಮ ಯೋಧರಿಗೆ
* 20 ಲಕ್ಷ ಮೃತಪಟ್ಟ ರೈತರ ಕುಟುಂಬಗಳಿಗೆ ಎಂದು ಪ್ರಥಮ್ ಹಾಗೂ ಅವರ ತಂದೆ ಮಲ್ಲಣ್ಣ ಅವರು ಬಿಗ್ ಬಾಸ್ ವೇದಿಕೆಯಲ್ಲಿ ಘೋಷಿಸುವ ಮೂಲಕ ಕನ್ನಡಿಗರ ಮನ ಗೆದ್ದರು.
ಈ ನಡುವೆ ಕಿರಿಕ್ ಕೀರ್ತಿಗೆ ಆಟದಲ್ಲಿ ಸಿಕ್ಕಿದ ಹಣದಲ್ಲಿ ಒಂದು ಪಾಲನ್ನು ಮುಚ್ಚುವ ಭೀತಿಯಲ್ಲಿರುವ ಕನ್ನಡ ಶಾಲೆಗಳಿಗೆ ನೀದುದಾಗಿ ಘೋಷಿಸಿದರು. ಅವರ ಆಟದ ವೈಖರಿ ಮೆಚ್ಚಿದ ನಟ, ನಿರೂಪಕ ಸುದೀಪ್ ಅವರು ತಮ್ಮ ಕಡೆಯಿಂದ 10 ಲಕ್ಷ ರು ಘೋಷಿಸಿದರು.
ಪ್ರಥಮ್ ಹಾಗೂ ಕೀರ್ತಿ ಮಧ್ಯೆ ವೋಟ್‌ಗಳಲ್ಲಿ ಬಹಳ ಪೈಫೋಟಿ ನಡೆದಿತ್ತು. ಕೀರ್ತಿಗೆ ಸಾಕಷ್ಟು ಮಂದಿ ಫ್ಯಾನ್ಸ್‌ಗಳಿದ್ದಾರೆ ಅನ್ನೋದು ಗೊತ್ತೆ ಇದೆ. ಆದ್ರೆ ಪ್ರಥಮ್ ಕೂಡಾ ಬಿಗ್‌ಬಾಸ್‌ಗೆ ಬಂದು ತಮ್ಮ ಫ್ಯಾನ್ಸ್ ಬಳಗವನ್ನು ಹೆಚ್ಚಿಸಿದ್ದಾರೆ ಅನ್ನೋದರಲ್ಲಿ ನೋ ಡೌಟ್. ತಮ್ಮ ಮಾತು, ಶೈಲಿಯಿಂದ ಪ್ರಥಮ್ ಜನರ ಮನ ಗೆದ್ದಿದ್ದಾರೆ.
ಪ್ರಥಮ್ ಗೆಲುವು ಅವರ ಅಭಿಮಾನಿಗಳ ಸಂತೋಷಕ್ಕೆ ಪಾರವೇ ಇಲ್ಲ. ಎಲ್ಲರ ಬಾಯಲ್ಲೂ ಲಾರ್ಡ್ ಪ್ರಥಮ್ ಸಾರ್‌ಗೆ ಜೈ ಅನ್ನೋದೇ ಕೇಳಿ ಬರ್ತಿದೆ. ಸಾಮಾಜಿಕ ಜಾಲತಾಣದಲ್ಲೂ ಪ್ರಥಮ್‌ದ್ದೇ ಗುಣಗಾನ. ಬಹುಶ ಈ ಹಿಂದಿನ ಮೂರು ಸೀಸನ್‌ನಲ್ಲೂ ಯಾವುದೇ ಸ್ಪರ್ಧಿ ಇಷ್ಟೊಂದು ಅಭಿಮಾನಿಗಳ ಮನ ಗೆದ್ದಿರಲಿಕ್ಕಿಲ್ಲ ಅನ್ನುವ ಮಾತುಗಳೂ ಕೇಳಿಬಂದಿವೆ. ಅಂತೂ ಎಲ್ಲೆಡೆ ಪ್ರಥಮ್‌ದ್ದೇ ಹವಾ ಎನ್ನವಂತಾಗಿದೆ.
Comments are closed.