ರಾಷ್ಟ್ರೀಯ

11 ವರ್ಷದ ಬಾಲಕಿಯ ಮೇಲೆ ಏಳು ಬಾಲಕರಿಂದ ಎರಡು ಬಾರಿ ಸಾಮೂಹಿಕ ಅತ್ಯಾಚಾರ

Pinterest LinkedIn Tumblr


ಶಿಲಾಂಗ್(ಜ. 22): ಅಪ್ರಾಪ್ತ ಬಾಲಕಿಯ ಮೇಲೆ ಎರಡು ಬಾರಿ ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆನ್ನಲಾದ ಏಳು ಬಾಲಕರನ್ನು ಪೊಲೀಸರು ಬಂಧಿಸಿ, ಬಾಲಾಪರಾಧಿಗಳ ಜೈಲಿಗೆ ಕಳುಹಿಸಿದ್ದಾರೆ. ಮೇಘಾಲಯದ ಮಾವ್ತೆನ್ ಗ್ರಾಮದಲ್ಲಿ ಈ ಘಟನೆ ನಡೆದಿರುವುದು ಬೆಳಕಿಗೆ ಬಂದಿದೆ. 14ರಿಂದ 16 ವರ್ಷ ವಯಸ್ಸಿನ ಏಳು ಬಾಲಕರು ಅವರ ಊರಿನವನೇ ಆದ ಬಾಲಕಿಯನ್ನು ಒಂದೇ ತಿಂಗಳಲ್ಲಿ ಎರಡು ಬಾರಿ ಗ್ಯಾಂಗ್’ರೇಪ್ ಮಾಡಿದ್ದಾರೆನ್ನಲಾಗಿದೆ.
ಬಾಲಕಿಯ ಪೋಷಕರು ದಾಖಲಿರುವ ಎಫ್’ಐಆರ್ ಪ್ರಕಾರ, ಕ್ರಿಸ್ಮಸ್ ಹಬ್ಬಕ್ಕೆ ಮುನ್ನ ಬತ್ತದ ಗದ್ದೆಯಲ್ಲಿ ಮೊದಲ ಬಾರಿ ಅತ್ಯಾಚಾರ ಎಸಗಿದ್ದಾರೆ. ಬಳಿಕ, ಜನವರಿ 13ರಂದು ಬಾಲಕಿಯ ಮನೆಗೆ ನುಗ್ಗಿ ಅಲ್ಲಿ ರೇಪ್ ಮಾಡಿದ್ದಾರೆ.
ಎಲ್ಲಾ ಆರೋಪಿಗಳು ತಮ್ಮ ಅಪರಾಧವನ್ನು ಒಪ್ಪಿಕೊಂಡಿದ್ದಾರೆ. ಐಪಿಸಿ ಸೆಕ್ಷನ್ 376(ಜಿ) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದ್ದು, ಎಲ್ಲಾ 7 ಹುಡುಗರನ್ನು ಬಾಲಾಪರಾಧ ಗೃಹಕ್ಕೆ ಕಳುಹಿಸಲಾಗಿದೆ.

Comments are closed.