
ಮುಂಬೈ(ಜ.21): 500 ರೂಪಾಯಿಯ ಹೊಸ ನೋಟೊಂದನ್ನು ಮುದ್ರಿಸಲು ಆರ್’ಬಿಐಗೆ ತಗಲುವ ವೆಚ್ಚ 3 ರೂಪಾಯಿ 90 ಪೈಸೆ. ಮಾಹಿತಿ ಹಕ್ಕು ಕಾಯ್ದೆ ಅಡಿ ಕೇಳಲಾದ ಪ್ರಶ್ನೆಗೆ ಆರ್ಬಿಐ ಈ ಮಾಹಿತಿ ನೀಡಿದೆ.
ಭಾರತೀಯ ರಿಸರ್ವ್ ಬ್ಯಾಂಕ್ ನೋಟು ಮುದ್ರಣ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯು ಹೊಸ ನೋಟುಗಳನ್ನು ಮುದ್ರಣ ಮಾಡುತ್ತಿದೆ. ಮಾಹಿತಿ ಹಕ್ಕು ಕಾರ್ಯಕರ್ತ ಅನಿಲ್ ಗಲಗಲಿ ಅವರು ಆರ್ಬಿಐಗೆ ಹಲವು ಪ್ರಶ್ನೆಗಳು ಕೇಳಿದ್ದರು. ಆಗ ಆರ್ಬಿಐ ಕೇವಲ 500 ಮುಖಬೆಲೆಯ ಪ್ರತಿ ನೋಟಿಗೆ 3 ರೂಪಾಯಿ 90 ಪೈಸೆ ವೆಚ್ಚವಾಗುತ್ತದೆ ಎಂದು ಮಾಹಿತಿ ನೀಡಿದೆ ಇನ್ನುಳಿದ ಪ್ರಶ್ನೆಗಳಿಗೆ ಮಾಹಿತಿ ನೀಡಲು ಆರ್ಬಿಐ ನಿರಾಕರಿಸಿದೆ.
ಮುಂಬೈ
Comments are closed.