
ಬೆಂಗಳೂರು(ಜ.13): ಖತರ್ನಾಕ್ ಸಚಿನ್ ನಾಯಕ್ ಬಣ್ಣ ಇದೀಗ ಬಯಲಾಗಿದ್ದು, ಈತ ಇಬ್ಬರು ಪತ್ನಿಯರನ್ನು ಬಳಸಿಕೊಂಡು ಈತ ವಂಚನೆ ನಡೆಸಿರುವ ವಿಚಾರ ತಿಳಿದು ಬಂದಿದೆ.
ದಿಶಾ ಚೌಧರಿ ಮತ್ತು ಮನ್ ದೀಪ್ ಕೌರ್ ಹೆಸರಿನಲ್ಲಿ ಸಚಿನ್ ನಾಯಕ್ ವಂಚನೆ ಮಾಡಿರುವುದು ಬಯಲಾಗಿದೆ. ತನ್ನ ಇಬ್ಬರೂ ಪತ್ನಿಯರಿಗೂ ಡ್ರೀಮ್ಸ್, TGS ಕಂಪೆನಿಗಳನ್ನು ಮಾಡಿಕೊಟ್ಟಿದ್ದ ಈ ಡೇಂಜರಸ್ ವಂಚಕ. ಡ್ರೀಮ್ಸ್ ಕಂಪೆನಿಗೆ ತನ್ನ ದಿಶಾ ಪತ್ನಿಯನ್ನು MDಯಾಗಿ ನೇಮಿಸಿದ್ದು, ಪತ್ನಿ ಇಶಾಳ ಹೆಸರನ್ನು ದಿಶಾ ಚೌಧರಿ ಎಂದೂ ಈತ ಬದಲಾಯಿಸಿಕೊಂಡಿದ್ದಾನೆ.
ದಿಶಾ ಚೌಧರಿ ಕೆಲ ಬಾಲಿವುಡ್ ಸಿನಿಮಾಗಳಲ್ಲೂ ನಟಿಸಿದ್ದು, ಹಿಂದಿಯ ಅನುರಾಧಾ ಸಿನಿಮಾದಲ್ಲಿ ಈಕೆ ನಾಯಕಿಯಾಗಿ ನಟಿಸಿದ್ದಾಳೆ. ಆದರೆ ಈಕೆಯ ಯಾವುದೇ ಸಿನಿಮಾ ಯಶಸ್ವಿಯಾಗಿಲ್ಲ. ಬಳಿಕ ಮನ್ ದೀಪ್ ಕೌರ್’ನೊಂದಿಗೆ ಎರಡನೇ ಮದುವೆ ಮಾಡಿಕೊಂಡಿದ್ದ ಸಚಿನ್ ನಾಯಕ್ TGS ಕಂಪೆನಿಯನ್ನು ಆಕೆಯ ಹೆಸರಿನಲ್ಲಿ ಬರೆದಿದ್ದ.
ಇನ್ನೂ ಬಿಚ್ಚಿ ಬೀಳಿಸುವ ವಿಚಾರವೆಂದರೆ ಈತನ ಪತ್ನಿಯರ ಹೆಸರು ಮನ್ ದೀಪ್ ಕೌರ್ ಹಾಗೂ ದಿಶಾ ಚೌಧರಿ ನಕಲಿ ಹೆಸರಾಗಿದ್ದು, ಮೂಲ ಹೆಸರು ಬೇರೆಯೇ ಇದೆ ಎಂಬ ವಿಚಾರ ತಿಳಿದು ಬಂದಿದೆ. ದಾಖಲೆಗಳಲ್ಲೂ ಇವರ ಹೆಸರುಗಳನ್ನು ಎಲ್ಲೂ ನಮೂದಿಸಿಲ್ಲ. ಸಚಿನ್ ನಾಯಕ್ ಹೆಸರು ಕೂಡಾ ನಕಲಿಯಾಗಿದ್ದು, ಆತನ ಅಸಲಿ ಹೆಸರು ಸುಮಂತ್ ಕುಮಾರ್ ಆಗಿದೆ. ಈತ ವಂಚನೆ ಮಾಡುವ ಉದ್ದೇಶದಿಂದಲೇ ನಕಲಿ ಹೆಸರು ಬದಲಿಸಿಕೊಂಡು ಜನರಿಗೆ ಮೋಸ ಮಾಡುತ್ತಿದ್ದ.
ಕರ್ನಾಟಕ
Comments are closed.