ಮನೋರಂಜನೆ

ಬಾಲಿವುಡ್ ನಟರಾದ ಜಾಕಿ ಶ್ರಾಫ್ ಮತ್ತು ಅರ್ಜುನ್ ರಾಮಪಾಲ್ ಬಿಜೆಪಿ ಸೇರ್ಪಡೆ

Pinterest LinkedIn Tumblr


ನವದೆಹಲಿ(ಜ. 10): ಮ್ಯೂಸಿಕ್ ಕಂಪೋಸರ್ಸ್ ಸಾಜಿದ್-ವಜೀದ್ ಬಳಿಕ ಈಗ ಇನ್ನಿಬ್ಬರು ಚಿತ್ರೋದ್ಯಮ ಸೆಲಬ್ರಿಟಿಗಳು ಬಿಜೆಪಿ ಸೇರ್ಪಡೆಯಾಗಿದ್ದಾರೆ. ಜನಪ್ರಿಯ ಚಿತ್ರನಟರಾದ ಜಾಕಿ ಶ್ರಾಫ್ ಮತ್ತು ಅರ್ಜುನ್ ರಾಮಪಾಲ್ ಅವರು ಕೇಸರಿಪಾಳಯವನ್ನು ಸೇರಿದ್ದಾರೆ. ಮುಂದಿನ ತಿಂಗಳು ಪಂಚರಾಜ್ಯಗಳ ಚುನಾವಣೆಗಳಿರುವುದರಿಂದ ಇವರಿಬ್ಬರು ಬಿಜೆಪಿಯ ಸ್ಟಾರ್’ಪ್ರಚಾರಕರಾಗಲಿದ್ದಾರೆ.
ಶ್ರಾಫ್ ಹೇಳುವುದೇನು?
“ನಾನೇನು ರಾಜಕಾರಣಿಯಲ್ಲ. ಇಲ್ಲಿ ರಾಜಕೀಯ ಮಾಡಲು ಬಂದಿಲ್ಲ. ಕೇಂದ್ರ ಸರಕಾರ ಒಳ್ಳೆಯ ಕೆಲಸ ಮಾಡುತ್ತಿದೆ. ಅದನ್ನು ಬೆಂಬಲಿಸಲು ಇಲ್ಲಿಗೆ ಬಂದಿದ್ದೇನೆ,” ಎಂದು ಜಾಕಿ ಶ್ರಾಫ್ ಅವರು ಮಾಧ್ಯಮಗಳಿಗೆ ತಿಳಿಸಿದ್ದಾರೆ. ಇಂದು ದಿಲ್ಲಿಗೆ ಆಗಮಿಸಿದ ಜಾಕಿ ಶ್ರಾಫ್ ಮತ್ತು ಅರ್ಜುನ್ ರಾಮಪಾಲ್ ಅವರು ಬಿಜೆಪಿ ಪ್ರಧಾನ ಕಾರ್ಯದರ್ಶಿ ಕೈಲಾಷ್ ವಿಜಯವರ್ಗೀವಾ ಅವರನ್ನು ಭೇಟಿ ಮಾಡಿದ್ದಾರೆನ್ನಲಾಗಿದೆ.
ಫೆಬ್ರವರಿ ಮತ್ತು ಮಾರ್ಚ್’ನಲ್ಲಿ ಉತ್ತರಪ್ರದೇಶ, ಮಣಿಪುರ, ಪಂಜಾಬ್, ಗೋವಾ ಮತ್ತು ಹಿಮಾಚಲಪ್ರದೇಶಗಳಲ್ಲಿ ಚುನಾವಣೆಗಳು ನಡೆಯುತ್ತಿವೆ.

Comments are closed.