ಉಡುಪಿ: ಅಭಿವೃದ್ದಿ ಆಧಾರಿತ ಅಜೆಂಡಾದೊಂದಿಗೆ ಮುಂದಿನ ಚುನಾವಣೆ ಎದುರಿಸಲಾಗುವುದು. ಪಂಚರಾಜ್ಯಗಳ ಚುನಾವಣೆಯಲ್ಲಿ ಗೆಲ್ಲುವ ಸಂಪೂರ್ಣ ಭರವಸೆ ಇದೆ ಎಂದು ಕೇಂದ್ರ ಮಾನವ ಸಂಪನ್ಮೂಲ ವಿಕಾಸ ಮಂತ್ರಿ ಪ್ರಕಾಶ್ ಜಾವಡೇಕರ್ ಹೇಳಿದ್ದಾರೆ.

ಉಡುಪಿಯಲ್ಲಿ ಜರಗುತ್ತಿರುವ ಸಂಸ್ಕೃತ ಅಧಿವೇಶನದಲ್ಲಿ ಭಾಗವಹಿಸಲು ಬಂದ ಸಚಿವ ಪ್ರಕಾಶ್ ಜಾವಡೇಕರ್ ಕೃಷ್ಣ ದರ್ಶನವನ್ನು ಪಡೆದು ಪೇಜಾವರ ಶ್ರೀಗಳ ಆಶೀರ್ವಾದ ಪಡೆದರು. ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು ಮೋದಿ ನಿರ್ದಾರ ಎಲ್ಲವೂ ದೇಶ ಹಾಗೂ ಬಡವರ ಹಿತಕ್ಕಾಗಿ ತೆಗೆದುಕೊಳ್ಳಲಾಗಿದೆ. ಎಸ್.ಐಟಿ ಹಾಗೂ ಬೇನಮಿ ಪ್ರಾಪರ್ಟಿ ಆಕ್ಟ್ ಕಠಿನ ನಿರ್ದಾರವಾಗಿದ್ದು ಡಿಮೋನಿಟೈಸೇಶನ್ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ ಎಂದರು. ಅಭಿವೃದ್ದಿ ನೆಲೆಯಲ್ಲಿ ಸಬ್ ಕಾ ಸಾಥ್ ಸಬ್ ಕಾ ವಿಕಾಸ್ ಇಡೇರಿಕೆಗೆ ದೃಢ ಹೆಜ್ಜೆಯನ್ನು ಮೋದಿಯವರು ಇಟ್ಟುಕೊಂಡಿದ್ದು ನೂತನ ಶಿಕ್ಷಣ ನೀತಿಯ ಸಲಹೆ ಸರ್ಕಾರ ತೆಗೆದುಕೊಳ್ಳುತ್ತಿದೆ. ಶಿಕ್ಷಣ ತಜ್ಞರ ಸಮಿತಿ ರಚಿಸಿ ಕರುಡು ವಿಧೇಯಕ ರಚಿಸಲಾಗುವುದು ಎಂದರು.
Comments are closed.