
Photo: Ashok Belman
ಇತ್ತೀಚಿಗೆ ಬಿಡುಗಡೆಗೊಳ್ಳುವ ಮೂಲಕ ಎಲ್ಲ ಕಡೆ ಜನರ ಮೆಚ್ಚುಗೆಗೆ ಗಳಿಸುತ್ತಿರುವ ಕನ್ನಡ ಸಿನೆಮಾ ‘ಕಿರಿಕ್ ಪಾರ್ಟಿ’ ದುಬೈಯ ಬಟುಟ ಮಾಲ್’ನ ನೋವಾ ಸಿನೆಮಾ ಮಂದಿರದಲ್ಲಿ ಶುಕ್ರವಾರದಂದು ಪ್ರಥಮ ಪ್ರದರ್ಶನವನ್ನು ಆಯೋಜಿಸಲಾಗಿತ್ತು.






ಚಿತ್ರದ ಕಥೆಗಾರ, ನಿರ್ಮಾಪಕ ಮತ್ತು ನಾಯಕ ನಟ ರಕ್ಷಿತ್ ಶೆಟ್ಟಿ ಹಾಗು ನಿರ್ದೇಶಕ ರಿಷಭ್ ಶೆಟ್ಟಿ ಪ್ರಥಮ ಪ್ರದರ್ಶನದ ವೇಳೆ ಸಿನೆಮಾ ಮಂದಿರದಲ್ಲಿ ಹಾಜರಿದ್ದು, ಸಿನೆಮಾ ಬಗ್ಗೆ ತಮ್ಮ ಅನುಭವ ಹಾಗು ಸಿನೆಮಾ ಕುರಿತು ಮಾತನಾಡಿದರು.ಈ ವೇಳೆ ದುಬೈ(ಯುಎಇ) ಸಿನೆಮಾ ವಿತರಕ ದೀಪಕ್ ಹಾಜರಿದ್ದರು.











ಸಿನೆಮಾ ಬಹಳ ಉತ್ತಮವಾಗಿ ಮೂಡಿಬಂದಿದ್ದು, ಜನ ಬಹಳಷ್ಟು ಇಷ್ಟಪಟ್ಟಿದ್ದು, ಗಳಿಕೆಯಲ್ಲಿಯೂ ಮಿಂಚಿನ ಓಟವನ್ನು ಮುಂದುವರಿಸಿದೆ. ಸಿನೆಮಾದಲ್ಲಿ ಕರ್ಣ (ರಕ್ಷಿತ್ ಶೆಟ್ಟಿ) ಕೊನೆಯ ಬೆಂಚಿನ ಎಂಜಿನಿಯರಿಂಗ್ ವಿದ್ಯಾರ್ಥಿ. ಕಾಲೇಜಿನಲ್ಲಿ ಕರ್ಣನ ತರ್ಲೆ ಆಟಗಳು ಒಂದೆರೆಡಲ್ಲ. ಇಡೀ ಕ್ಲಾಸ್ ನೇ ಮಾಸ್ ಬಂಕ್ ಮಾಡಿಸಿ ಸಿನಿಮಾ ತೋರಿಸುತ್ತಾನೆ. ಲೆಕ್ಚರರ್ ಗೆ ಯಾಮಾರಿಸಿ ಪರೀಕ್ಷೆ ಬರೆಯುತ್ತಾನೆ. ತನ್ನ ‘ಕಿರಿಕ್’ ಸ್ನೇಹಿತರ ಜೊತೆ ಸೇರಿ ಸಿಕ್ಕಾಪಟ್ಟೆ ಕಪಿಚೇಷ್ಟೆ ಮಾಡುತ್ತಾನೆ. ಈ ಮಧ್ಯೆ ತಮ್ಮ ಸೀನಿಯರ್ ಗೆಳತಿ ಸಾನ್ವಿ ಜೋಸೆಫ್ (ರಶ್ಮಿಕಾ ಮಂದಣ್ಣ) ಜತೆ ಪ್ರೀತಿಯ ಅಂಕುರ. ಇನ್ನೇನೂ ಕರ್ಣನ ಪ್ರೇಮ ಫಲಿಸಿತು ಎನ್ನುವಷ್ಟರಲ್ಲಿ ಸಾನ್ವಿಯ ಅಕಾಲಿಕ ಸಾವು. ಹುಡುಗಾಟವಾಗಿದ್ದ ಕರ್ಣನ ಜೀವನದಲ್ಲಿ ಗಂಭೀರತೆಯ ಗಾಳಿ ಬೀಸುತ್ತೆ. ಮುಂದೆ ಕತೆ ಯಾವ ತಿರುವ ಪಡೆಯುತ್ತೆ ಎಂಬುದನ್ನು ಬಹಳ ಇಂಟ್ರಸ್ಟಿಂಗ್ ಆಗಿ ತೋರಿಸಲಾಗಿದೆ.
ದುಬೈಯ ಬಟುಟ ಮಾಲ್’ನ ನೋವಾ ಸಿನೆಮಾ ಮಂದಿರದಲ್ಲಿ ‘ಕಿರಿಕ್ ಪಾರ್ಟಿ’ ನೋಡಲು ಬಂದ ಸ್ಯಾಂಡಲ್ ವುಡ್ ಪ್ರೇಕ್ಷಕರು ಹೋಗುವಾಗ ಸಿನೆಮಾ ಬಗ್ಗೆ ಒಳ್ಳೆಯ ಅಭಿಪ್ರಾಯವನ್ನು ವ್ಯಕ್ತಪಡಿಸಿದರು.





ಚಿತ್ರ : ಕಿರಿಕ್ ಪಾರ್ಟಿ
ನಿರ್ದೇಶಕ : ರಿಷಬ್ ಶೆಟ್ಟಿ
ನಿರ್ಮಾಪಕ : ರಕ್ಷಿತ್ ಶೆಟ್ಟಿ, ಜಿ.ಎಸ್. ಗುಪ್ತಾ
ಸಂಗೀತ ನಿರ್ದೇಶನ : ಅಜನೀಶ್ ಲೋಕನಾಥ್
ಕಥೆ: ರಕ್ಷಿತ್ ಶೆಟ್ಟಿ
ಛಾಯಗ್ರಹಣ: ಕರಮ್ ಚಾವ್ಲಾ
ತಾರಾಗಣ : ರಕ್ಷಿತ್ ಶೆಟ್ಟಿ, ರಶ್ಮಿಕಾ ಮಂದಣ್ಣ, ಸಂಯುಕ್ತ ಹೆಗ್ಡೆ, ಅಚ್ಯುತ್ ಕುಮಾರ್, ಪ್ರಮೋದ್ ಶೆಟ್ಟಿ ಮತ್ತು ಇತರರು.
Comments are closed.