
ಪಾಟ್ನಾ: ಬಿಹಾರ ಆಸ್ಪತ್ರೆಯ ಮರಣೋತ್ತರ ಪರೀಕ್ಷಾ ಕೊಠಡಿಯ ಹೊರಗಡೆ ಇಟ್ಟಿದ್ದ ವಿದೇಶಿ ಮಹಿಳೆಯ ಮೃತದೇಹವನ್ನು ಬೀದಿ ನಾಯಿಗಳು ತಿಂದು ಹಾಕಿವೆ ಎಂದು ಪೊಲೀಸರು ತಿಳಿಸಿದ್ದಾರೆ.
ಸೋಮವಾರ ಬೇಗುಸರೈನಲ್ಲಿ ಸಂಭವಿಸಿದ್ದ ರಸ್ತೆ ಅಪಘಾತದಲ್ಲಿ ಭೂತಾನ್ ಮಹಿಳೆ 53 ವರ್ಷದ ಪೇಮ ಚೂಡೆನ್ ಮೃತಪಟ್ಟಿದ್ದರು. ಆಕೆಯ ಮೃತದೇಹ ಮರಣೋತ್ತರ ಪರೀಕ್ಷೆಗಾಗಿ ಬಿಹಾರ ಆಸ್ಪತ್ರೆಗೆ ಕಳುಹಿಸಲಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.
ಗಯಾ ಜಿಲ್ಲೆಯ ಬುದ್ಧ ಗಯಾದಲ್ಲಿ ಟಿಬೇಟ್ ನ ಆಧ್ಯಾತ್ಮಿಕ ನಾಯಕ ದಲೈ ಲಾಮಾ ಜನವರಿಯಲ್ಲಿ ನಡೆಸಿಕೊಡಲಿದ್ದ ಕಾಲಚಕ್ರ ಪೂಜೆಗಾಗಿ ಇನ್ನಿತರ ಲಾಮಾ ಅನುಯಾಯಿಗಳ ಜತೆ ಭಾರತಕ್ಕೆ ಬಂದಿದ್ದರು. ಇವರೆಲ್ಲರು ಬಸ್ ನಲ್ಲಿ ಪ್ರಯಾಣಿಸುತ್ತಿದ್ದ ವೇಳೆ ಟ್ರಕ್ ಒಂದು ಡಿಕ್ಕಿ ಹೊಡೆದ ಪರಿಣಾಮ ಪೇಮ ಚೂಡೆನ್ ಅವರು ಮೃತಪಟ್ಟಿದ್ದರು.
ಮೃತ ಮಹಿಳೆಯ ದೇಹದ ಕೆಲ ಭಾಗಗಳನ್ನು ಬೀದಿ ನಾಯಿಗಳು ಭಕ್ಷಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ರಾಷ್ಟ್ರೀಯ
Comments are closed.