ಕರಾವಳಿ

ಹಾಡಹಗಲೇ ನಡೆಯಿತು ರೌಡಿ ಶೀಟರ್‌ ಪ್ರವೀಣನ ಮರ್ಡರ್: ಜೊತೆಗಿದ್ದವರೇ ಹಾಕಿದರಾ ಸ್ಕೆಚ್..?

Pinterest LinkedIn Tumblr

ಉಡುಪಿ: ಕುಖ್ಯಾತ ರೌಡಿಯೊಬ್ಬನ ರಕ್ತಸಿಕ್ತ ಅಧ್ಯಾಯ ರಕ್ತದ ಮಡುವಿನಲ್ಲೇ ಕೊನೆಗೊಂಡಿದೆ. ರೌಡಿ ಶೀಟರನನ್ನು ಮಚ್ಚಿನಿಂದ ಕೊಚ್ಚಿ ಕೊಂದಿರುವ ಭೀಕರ ಘಟನೆ ಸೋಮವಾರ ಮಠಮಠ ಮಧ್ಯಾಹ್ನ ಉಡುಪಿಯ ಹಿರಿಯಡ್ಕದಲ್ಲಿ ನಡೆದುಹೋಗಿದೆ.

udupi_praveen-kulal_murder-1 udupi_praveen-kulal_murder-12 udupi_praveen-kulal_murder-6 udupi_praveen-kulal_murder-5 udupi_praveen-kulal_murder-9 udupi_praveen-kulal_murder-10 udupi_praveen-kulal_murder-8 udupi_praveen-kulal_murder-3 udupi_praveen-kulal_murder-4 udupi_praveen-kulal_murder-11 udupi_praveen-kulal_murder-2 udupi_praveen-kulal_murder-7

ಉಡುಪಿ ಭಾಗದಲ್ಲಿ ಕೊಲೆ, ಹಲ್ಲೆ, ಸುಲಿಗೆಯ ಆರೋಪಿಯಾಗಿದ್ದು ರೌಡಿಶೀಟರ್ ನನ್ನು ತಲಾವರಿನಿಂದು ಕೊಚ್ಚಿ ಕೊಂದ ಘಟನೆ ಉಡುಪಿಯ ಹಿರಿಯಡ್ಕ ಪೊಲೀಸ್ ಠಾಣಾ ವ್ಯಾಪ್ತಿಯ ಕೊಟ್ನಕಟ್ಟೆ ಎಂಬಲ್ಲಿ ನಡೆದಿದೆ. ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕು ಹಾಗೂ ಉಡುಪಿಯ ಹಲವೆಡೆ ತನ್ನ ರೌಡಿಸಂ ಗೆ ಕುಖ್ಯಾತಿ ಪಡೆದಿದ್ದ ರೌಡಿ ಶೀಟರ್, ಗೂಂಡಾ ಕಾಯ್ದೆ ಆರೋಪಿ ವರ್ವಾಡಿ ಪ್ರವೀಣ್ ಕುಲಾಲ್ ನ್ನು ತಲವಾರಿನಿಂದ ಕೊಚ್ಚಿ ಕೊಲೆ ಮಾಡಲಾಗಿದೆ. ಹಿರಿಯಡಕ ಪೊಲೀಸ್ ಠಾಣಾ ವ್ಯಾಪ್ತ್ತಿಯ ಕೋಟ್ನ ಕಟ್ಟೆ ಎಂಬಲ್ಲಿ ಮದ್ಯಾಹ್ನ ಒಂದು ಘಂಟೆಯ ಸಮಯಕ್ಕೆ ಈ ಕೊಲೆ ನಡೆದಿದೆ. ಕೋಟ್ನಕಟ್ಟೆಯ ಬಳಿ ಬಾರ್ ಒಂದರಲ್ಲಿ ಕುಡಿದು ಗಲಾಟೆ ಮಾಡುತ್ತಿದ್ದವರನ್ನು ಬಾರ್ ಮಾಲಕ ಹೊರಕ್ಕೆ ಕಳುಹಿಸಿದ್ದು ಬಳಿಕ ಟ್ರಾವೆಲ್ ಏಜೆನ್ಸಿ ಒಂದರ ಬಳಿ ಗಲಾಟೆ ನಡೆಯುತ್ತಿದ್ದ ಸಂದರ್ಬದಲ್ಲಿ ಬೈಕಿನಿಂದ ಬಂದ ಇಬ್ಬರು ಪ್ರವೀಣ್ ಮೇಲೆ ತಲಾವರಿನಿಂದ ಹಲ್ಲೆ ಮಾಡಿದ್ದಾರೆ. ಕುತ್ತಿಗೆ, ಕೈಗೆ ತೀವ್ರ ಗಾಯವಾಗಿದ್ದ ಪ್ರವೀಣ್ ಸ್ಥಳದಲ್ಲೇ ಮೃತಪಟ್ಟಿದ್ದು ಕೊಲೆ ಆರೋಪಿಗಳು ಪರಾರಿಯಾಗಿದ್ದಾರೆ.

ಸ್ಥಳಕ್ಕೆ ಎಸ್ಪಿ ಕೆ.ಟಿ ಬಾಲಕೃಷ್ಣ ಭೇಟಿ ಮಾಡಿದ್ದು ಆರೋಪಿಗಳ ಪತ್ತೆಗೆ ಬಲೆ ಬೀಸಲಾಗಿದೆ. ಪ್ರವೀಣ್ ಕುಲಾಲ್ ಮೇಲೆ ವಿವಿಧ ಪೊಲೀಸ್ ಠಾಣೆಯಲ್ಲಿ ೧೬ ಕೇಸ್ ಗಳಿವೆ. ಇದರಲ್ಲಿ ಬಶೀರ್ ಹಾಗೂ ಬಂಗ್ಲಗುಡ್ಡೆಯ ಸುಲೈಮಾನ್ ಕೊಲೆ ಪ್ರಮುಖವಾಗಿದ್ದು ಇದು ಪೂರ್ವ ದ್ವೇಷದ ಕೃತ್ಯ ಎಂದು ಮೇಲ್ನೋಟಕ್ಕೆ ಬಹಿರಂಗವಾಗಿದೆ. ಇತ್ತೀಚಿಗೆ ಬಿಜೆಪಿ ಜಿಲ್ಲಾಪಂಚಾಯತ್ ಸದಸ್ಯ ಸುಮಿತ್ ಶೆಟ್ಟಿ ಎಂಬವರ ಕೊಲೆಗೆ ಪ್ರಯತ್ನಿಸಿದ್ದ. ಈ ಪ್ರಕರಣ ಕೂಡಾ ದಾಖಲಾಗಿದ್ದು ಪ್ರವೀಣ್ ಕೊಲೆಗೆ ಆತನ ಗೆಳೆಯರೇ ಸ್ಕೆಚ್ ಹಾಕಿದ್ರಾ ಎನ್ನುವ ಬಗ್ಗೆ ಅನುಮಾನ ಮೂಡಿದ್ದು ಈ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಒಟ್ಟಿನಲ್ಲಿ ರೌಡಿ ವರ್ವಾಡಿ ಪ್ರವೀಣ್ ಕುಲಾಲ್ ರಕ್ತಸಿಕ್ತ ಅದ್ಯಾಯ ಕೊನೆಗೊಂಡಿದೆ. ಉಡುಪಿ ಹಾಗೂ ಕಾರ್ಕಳದಲ್ಲಿ ಒಂದು ಕಾಲದಲ್ಲಿ ರೌಡಿಸಂಗೆ ಹೆಸರುಗಳಿಸಿದ್ದ ಪ್ರವೀಣ್ ಈಗ ರಕ್ತದ ಮಡುವಿನಲ್ಲೇ ಹೆಣವಾಗಿದ್ದಾನೆ.

Comments are closed.