ರಾಷ್ಟ್ರೀಯ

ಈ ಪೇದೆ ಗುಂಡಿಕ್ಕಿ ಆತ್ಮಹತ್ಯೆ ಮಾಡಿಕೊಂಡಿದ್ದೇಕೆ ಗೊತ್ತಾ?

Pinterest LinkedIn Tumblr

pistol_imageವಿಜಯವಾಡ: ಕೃಷ್ಣ ಜಿಲ್ಲೆಯ ಗನ್ನಾವರಂ ಪೊಲೀಸ್ ಠಾಣೆಯಲ್ಲಿ ರೈಟರ್ ಆಗಿದ್ದ ಪೊಲೀಸ್ ಪೇದೆಯೊಬ್ಬರು ಕೆಲಸದ ಒತ್ತಡದಿಂದ ನೊಂದು ತಮ್ಮ ಸರ್ವಿಸ್ ರಿವಾಲ್ವರ್ ನಿಂದ ಹಣೆಗೆ ಗುಂಡಿಕ್ಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಮೂಲಗಳ ಪ್ರಕಾರ, 55 ವರ್ಷದ ತಂಗಳ ದೇವಕೃಪ ಡೇವಿಡ್ ರಾಜು ಎಂಬುವವರು ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆದರೆ ಅವರು ಬರೆದು ಡೆತ್ ನೋಟ್ ಮಾತ್ರ ಇನ್ನೂ ಪತ್ತೆಯಾಗಿಲ್ಲ.
ರಾಜು ಅವರು ಡೆತ್ ನೋಟ್ ನಲ್ಲಿ ತಮಗೆ ಕಿರುಕುಳ ನೀಡಿದ ಅಧಿಕಾರಿಗಳು ಹೆಸರು ಬರೆದಿರುವ ಶಂಕೆ ವ್ಯಕ್ತವಾಗಿದೆ.
ನನ್ನ ಪತಿ ಡೆತ್ ನೋಟ್ ಬರೆದಿದ್ದು, ತನಿಖಾ ಅಧಿಕಾರಿಗಳು ಅದನ್ನು ಬಹಿರಂಗಪಡಿಸುತ್ತಿಲ್ಲ ಎಂದಿರುವ ರಾಜು ಅವರ ಪತ್ನಿ ಎಲಿಜಬೆತ್ ರಾಣಿ ಅವರು, ಪೊಲೀಸರು ಅದನ್ನು ಏಕೆ ಬಹಿರಂಗಪಡಿಸುತ್ತಿಲ್ಲ ಎಂದು ಪ್ರಶ್ನಿಸಿದ್ದಾರೆ.

Comments are closed.