ಬೆಂಗಳೂರು, ಡಿ. ೫- ನಗರದ ಹಾಪ್ಕಾಪ್ ಸಂಸ್ಥೆಯ ಮಾರಾಟ ಮಳಿಗೆಗಳಲ್ಲಿ ಇನ್ನು ಮುಂದೆ ಡೆಬಿಟ್ ಮತ್ತು ಕ್ರೆಡಿಟ್ ಕಾರ್ಡ್ಗಳನ್ನು ಬಳಸಿ ಹಣ್ಣು ಮತ್ತು ತರಕಾರಿಗಳನ್ನು ಖರೀದಿಸಬಹುದು. ಈ ಸಂಬಂಧ ಹಾಪ್ಕಾಮ್ಸ್ ಸಂಸ್ಥೆ ಮತ್ತು ಭಾರತೀಯ ಸ್ಟೇಟ್ ಬ್ಯಾಂಕ್ ಪರಸ್ಪರ ಒಪ್ಪಂದ ಮಾಡಿಕೊಂಡಿವೆ.
ಲಾಲ್ಬಾಗ್ ರಸ್ತೆಯಲ್ಲಿರುವ ಹಾಪ್ಕಾಮ್ಸ್ನ ಕೇಂದ್ರ ಕಛೇರಿಯಲ್ಲಿಂದು ಹಾಪ್ಕಾಮ್ಸ್ನ ವ್ಯವಸ್ಥಾಪಕ ನಿರ್ದೇಶಕ ಡಾ. ಬಿ. ಕೃಷ್ಣ, ಎಸ್ಬಿಐನ ಅಧ್ಯಕ್ಷೆ ಮತ್ತು ವ್ಯವಸ್ಥಾಪಕ ನಿರ್ದೇಶಕಿ ರಜನಿಮಿಶ್ರಾ ಅವರು ಈ ಒಪ್ಪಂದಕ್ಕೆ ಸಹಿ ಹಾಕಿದರು.
ಒಪ್ಪಂದದ ಅನ್ವಯ ಮೊದಲ ಹಂತವಾಗಿ ನಾಳೆಯಿಂದ ಹಾಪ್ಕಾಮ್ಸ್ನ 40 ಮಳಿಗೆಗಳಲ್ಲಿ ಡೆಬಿಟ್ ಮತ್ತು ಕ್ರೆಡಿಟ್ ಕಾರ್ಡ್ಗಳನ್ನು ಬಳಸಿ ಹಣ್ಣು ಮತ್ತು ತರಕಾರಿಗಳನ್ನು ಕೊಳ್ಳಬಹುದು ಎಂದು ಹಾಪ್ಕಾಮ್ಸ್ನ ವ್ಯವಸ್ಥಾಪಕ ನಿರ್ದೇಶಕ ಡಾ. ಬಿ. ಕೃಷ್ಣ ತಿಳಿಸಿದರು.
ನಗರದಲ್ಲಿ 300 ಹಾಪ್ಕಾಮ್ಸ್ ಮಳಿಗೆಗಳಿದ್ದು ಮುಂದಿನ 1 ವಾರದೊಳಗೆ ಎಲ್ಲ ಮಳಿಗೆಗಳಲ್ಲೂ ಡೆಬಿಟ್ ಮತ್ತು ಕ್ರೆಡಿಟ್ ಕಾರ್ಡ್ಗಳನ್ನು ಬಳಸಲು ಅನುಕೂಲ ಕಲ್ಪಿಸಲಾಗುವುದು ಎಂದರು.
ಎಸ್ಬಿಐ 300 ಸ್ಪೈಪ್ ಉಪಕರಣವನ್ನು ಉಚಿತವಾಗಿ ನೀಡಲಿದೆ. ಇದರಿಂದ ಗ್ರಾಹಕರು ನಗದು ಇಲ್ಲದಿದ್ದರೂ ಡೆಬಿಟ್ ಮತ್ತು ಕ್ರೆಡಿಟ್ ಕಾರ್ಡ್ ಬಳಿಸಿ ಸ್ವೈಪ್ ಮಾಡಿ ಖರೀದಿಸಬಹುದಾಗಿದೆ ಎಂದು ತಿಳಿಸಿದರು
ಎಸ್ಬಿಐನ ವ್ಯಸವ್ಥಾಪಕ ನಿರ್ದೇಶಕಿ ರಜನಿಮಿಶ್ರಾ ಮಾತನಾಡಿ, ಹಾಪ್ಕಾಮ್ಸ್ನೊಂದಿಗೆ ಒಪ್ಪಂದ ಮಾಡಿಕೊಂಡಿರುವುದು ಸಂತಸ ತಂದಿದೆ. ಗ್ರಾಹಕರು 10 ರೂ. ತರಕಾರಿ ಖರೀದಿಸಿದರು ಕಾರ್ಡ್ಗಳನ್ನು ಬಳಸಬಹುದು ಎಂದರು.
ನಗರದಲ್ಲಿ 260 ಎಸ್ಬಿಐ ಬ್ರಾಂಚ್ಗಳಿವೆ. ಶೇ. 35 ರಷ್ಟು ಮೊಬೈಲ್ ಬ್ಯಾಂಕಿಂಗ್ ಮಾರುಕಟ್ಟೆ ಪಾಲನ್ನು ಹೊಂದಿದೆ ಎಂದು ಹೇಳಿದರು
ಕರ್ನಾಟಕ
Comments are closed.