
ನವದೆಹಲಿ: ಕಪ್ಪು ಹಣವನ್ನು ಬಿಳಿ ಮಾಡಲು ಚಿನ್ನದ ಬಿಸ್ಕತ್ ಲಂಚವಾಗಿ ಪಡೆದಿದ್ದ ಇಬ್ಬರು ಬ್ಯಾಂಕ್ ಮ್ಯಾನೇಜರ್‍ಗಳನ್ನು ಜಾರಿ ನಿರ್ದೇಶನಾಲಯ(ಇಡಿ) ಬಂಧಿಸಿದೆ.
ದೆಹಲಿಯ ಆಕ್ಸಿಸ್ ಬ್ಯಾಂಕ್ ಮ್ಯಾನೇಜರ್‍ಗಳಾದ ಶಶಾಂಕ್ ಸಿನ್ಹಾ ಹಾಗೂ ವಿನೀತ್ ಗುಪ್ತಾರನ್ನು ಅಕ್ರಮ ಹಣ ವರ್ಗಾವಣೆ ಕಾಯ್ದೆ(ಪಿಎಂಎಲ್‍ಎ)ಅಡಿ ಜಾರಿ ನಿರ್ದೇಶನಾಲಯ ಬಂಧಿಸಿದೆ.
ಈ ಇಬ್ಬರು ಸುಮಾರು 40 ಕೋಟಿ ರೂ. ಕಪ್ಪುಹಣವನ್ನು ಬಿಳಿ ಮಾಡಲು ಚಿನ್ನದ ಬಿಸ್ಕತ್ ಲಂಚವಾಗಿ ಪಡೆದಿದ್ದು, ಒಂದು ಚಿನ್ನದ ಬಿಸ್ಕತ್ ಲಕ್ನೋದಲ್ಲಿ ವಶಪಡಿಸಿಕೊಳ್ಳಲಾಗಿದೆ. ಬ್ಯಾಂಕ್ ಮ್ಯಾನೇಜರ್‍ಗಳನ್ನು ಇಂದು ತಿಸ್ ಹಜಾರಿ ಕೋರ್ಟ್‍ಗೆ ಹಾಜರುಪಡಿಸಲಾಗುತ್ತದೆ ಎಂದು ವರದಿಯಾಗಿದೆ.
ಬ್ಯಾಂಕಿನ ಮೂರು ಖಾತೆಗಳಿಂದ ಆರ್‍ಟಿಜಿಎಸ್ ಪಾವತಿ ಮೂಲಕ ಆಭರಣ ವ್ಯಾಪಾರಿಗಳಿಗೆ ಹಣ ವರ್ಗಾವಣೆ ಮಾಡಲಾಗಿತ್ತು. ಆ ವ್ಯಾಪಾರಿ ಒಂದು ತೊಲ ಬಂಗಾರವನ್ನ 45 ಸಾವಿರ ರೂ. ಮೊತ್ತಕ್ಕೆ ಮಾರಾಟ ಮಾಡಿದ್ದಾರೆ. ಆದರೆ ಮಾರುಕಟ್ಟೆ ಬೆಲೆ ಇದಕ್ಕಿಂತ ಕಡಿಮೆ ಇದ್ದು, ಇದೀಗ ಬ್ಯಾಂಕ್ ಮ್ಯಾನೇಜರ್‍ಗಳು ಸಿಕ್ಕಿಬಿದ್ದಿದ್ದಾರೆ.
Comments are closed.