ಕರ್ನಾಟಕ

ಪತ್ನಿಯು ಗರ್ಭದರಿಸಿದ ಸಂಧರ್ಭ ಗಂಡ ಮಾಡಬೇಕಾದ ಕರ್ತವ್ಯಗಳ ಬಗ್ಗೆ ಕೆಲವು ಸಲಹೆ.

Pinterest LinkedIn Tumblr

pregnancy_myths_a

ಮಂಗಳೂರು: ಆರೋಗ್ಯವಂತ ಮಗುವನ್ನು ಪಡೆಯುವುದು ಪ್ರತಿಯೊಬ್ಬ ದಂಪತಿಯ ಪ್ರಥಮ ಆದ್ಯತೆ. ಗರ್ಭ ಧರಿಸಿದ ಸಂದರ್ಭದಲ್ಲಿ ಮಾತ್ರವಲ್ಲ, ಗರ್ಭಧಾರಣೆಗೆ ಮುನ್ನವೇ ದೇಹ ಮತ್ತು ಮನಸ್ಸು ಸಿದ್ಧಗೊಳಿಸಿಕೊಂಡಿದ್ದಲ್ಲಿ ಸ್ವಸ್ಥ ಮಗುವಿನ ಜನನವಾಗುವುದರಲ್ಲಿ ಯಾವ ಸಂದೇಹವೂ ಇರಲಾರದು.

ಅಂದಹಾಗೆ ಹೆಂಡತಿ ಗರ್ಭಧರಿಸಿದಾಗ ಪತಿಯ ನಡವಳಿಕೆ ಬಹುಮುಖ್ಯವಾಗಿದ್ದು, ಪತ್ನಿಯನ್ನು ಸುಖ ಹಾಗೂ ಸಂತೋಷದಿಂದಿಡಲು ಬಯಸುವ ಪತಿಯರಿಗೆ ತಜ್ಞ ವೈದ್ಯರು ನೀಡಿರುವ ಕೆಲವು ಸಲಹೆಗಳು ಇಲ್ಲಿವೆ ನೋಡಿ.

*ಗರ್ಭಧಾರಣೆಯ ನಂತರ ಪತ್ನಿಯನ್ನು ವೈದ್ಯರ ತಪಾಸಣೆಗೆ ಕರೆದೊಯ್ಯುವುದು, ಮಾತ್ರೆ ಔಷಧಿ ಮರೆತಿದ್ದಲ್ಲಿ ನೀಡುವುದು, ಪರೀಕ್ಷೆಗಳ ವರದಿಗಳನ್ನು ಸಂಗ್ರಹಿಸಿಡುವುದು ಮುಂತಾದವುಗಳನ್ನು ಮಾಡಬೇಕು.
*ಗರ್ಭಧಾರಣೆಯ ದಿನದಿಂದ ಹೆರಿಗೆಯಾಗುವವರೆಗೆ ಆಕೆಯ ಮನಸ್ಸು ಸಂತೋಷವಾಗಿರುವಂತೆ, ಸಮಾಧಾನದಿಂದಿರುವಂತೆ ನೋಡಿಕೊಳ್ಳಬೇಕು.ಆಕೆಗೆ ಯಾವುದೇ ಬಗೆಯ ಆತಂಕ, ಭಯ, ಉದ್ವೇಗಗಳುಂಟಾಗದಂತೆ ನೋಡಿಕೊಳ್ಳಬೇಕು.
*ಪತ್ನಿ ನೌಕರಿ ಮಾಡುತ್ತಿದ್ದಲ್ಲಿ ಮನೆಗೆಲಸದಲ್ಲಿ ನೆರವು ನೀಡಿ, ವೈಯಕ್ತಿಕ ಕೆಲಸಗಳನ್ನು ಪತಿಯೇ ಮಾಡಿಕೊಳ್ಳಬೇಕು.
*ಆಕೆ ಇಷ್ಟಪಡುವ ಆಹಾರ, ತಿಂಡಿ ಕೊಡಿಸಿ.
*ಪ್ರತಿದಿನ ಬೆಳಗ್ಗೆ ಅಥವಾ ಸಂಜೆ ವಾಕಿಂಗ್ ಗೆ ಕರೆದೊಯ್ಯಿರಿ.
*ಆಕೆ ತೆಗೆದುಕೊಳ್ಳುವ ಆಹಾರದತ್ತ ಗಮನಹರಿಸಿ.
*ಆಕೆ ಇಷ್ಟಪಟ್ಟಲ್ಲಿ ಸಿನಿಮಾ, ಪಾರ್ಕ್, ಇಲ್ಲವೇ ಸಂಗೀತ, ಸಾಹಿತ್ಯದ ಕಾರ್ಯಕ್ರಮಗಳಿಗೆ ಕರೆದೊಯ್ಯಿರಿ.
*ಕುಟುಂಬದ ಯಾವುದೇ ಸಣ್ಣ-ಪುಟ್ಟ ಸಂಗತಿಗಳಿರಲಿ ಎಲ್ಲವನ್ನೂ ಆಕೆಯ ಗಮನಕ್ಕೆ ತಂದು ಸಮಸ್ಯೆಯುಂಟಾಗದಂತೆ ನೋಡಿಕೊಳ್ಳಿ.
*ಗರ್ಭಿಣಿಯರ ಮನಸ್ಸು ಸೂಕ್ಷ್ಮವಾಗಿರುವುದರಿಂದ ಜಗಳವಾಡುವುದಾಗಲೀ, ಬೈದಾಡುವುದಾಗಲೀ ಮಾಡಬೇಡಿ.
*ನಿಮ್ಮ ಪತ್ನಿ ನಿಮ್ಮದೇ ಪ್ರತಿರೂಪವನ್ನು ಉದರದಲ್ಲಿ ಧರಿಸಿರುವುದರಿಂದ ನೀವು ಏನೇ ಮಾಡಿದರೂ ಅದು ನಿಮ್ಮ ಮುಂದೆ ಬರುವ ಆರೋಗ್ಯವಂತ ಮಗುವಿಗಾಗಿ ಎಂಬುದು ನೆನಪಿರಲಿ.
ಹೆಣ್ಣಿನ ಜೀವನದಲ್ಲಿ ಗರ್ಭಧರಿಸಿದ ಕಾಲ ಅತ್ಯಂತ ಮಹತ್ವದ್ದು. ಹೊಸ ಜೀವನದ ಸೃಷ್ಟಿಯ ಹೊಣೆ ಆಕೆಯ ಮೇಲಿರುತ್ತದೆ. ಗರ್ಭಧರಿಸಿದಾಗಿನಿಂದ ಆರಂಭಿಸಿ ಇಡೀ ಒಂಭತ್ತು ತಿಂಗಳು ಮುಂದೆ ಬರಲಿರುವ ಕಂದನಿಗಾಗಿ ಮೀಸಲಿಡಬೇಕು. ಈ ಯೋಚನೆಯೇ ಮನಸ್ಸಿಗೆ ಮುದನೀಡುವಂತಹುದು. ಗರ್ಭಿಣಿಯಾದಾಗಿನಿಂದ ಒಂಭತ್ತು ತಿಂಗಳು ತುಂಬಿ ಹೆರುವವರೆಗೆ ಕೆಲವು ತೊಂದರೆಗಳು ಕಾಡುವುದೂ ಸಹಜ, ಅವುಗಳನ್ನೆಲ್ಲ ನಿಭಾಯಿಸಬೇಕಾದುದು ಅತ್ಯಂತ ಅವಶ್ಯಕ.

Comments are closed.