ಬೆಂಗಳೂರು(ನ.25): ಇಡೀ ದೇಶಕ್ಕೆ ದೇಶವೇ ನಿಬ್ಬೆರಗಾಗಿ ನೋಡುವಂತೆ ಮಗಳ ಮದುವೆ ಮಾಡಿದ ಜನಾರ್ದನರೆಡ್ಡಿ ಮನೆ ಮೇಲೆ ಐಟಿ ದಾಳಿ ನಡೆದಿತ್ತು. ರೆಡ್ಡಿ ಮನೆ ಮತ್ತು ಕಚೇರಿಗಳ ಮೇಲೆ ದಾಳಿ ನಡೆಸಿದ್ದ ಅಧಿಕಾರಿಗಳು 16 ಪ್ರಶ್ನೆಗಳಿಗೆ ಉತ್ತರಿಸುವಂತೆ ನೋಟಿಸ್ ನೀಡಿದ್ದರು. ನವೆಂಬರ್ 25ರವರೆಗೆ ಗಡುವು ನೀಡಿದ್ದರು.
ಐಟಿ ಅಧಿಕಾರಿಗಳ ನೋಟಿಸ್`ಗೆ ಪ್ರತಿಕ್ರಿಯಿಸಿರುವ ರೆಡ್ಡಿ, 16 ಪ್ರಶ್ನೆಗಳಿಗೂ ಉತ್ತರ ನೀಡಿದ್ದಾರೆ. ನಿನ್ನೆಯೇ ಐಟಿ ಅಧಿಕಾರಿಗಳಿಗೆ ಮದುವೆಯ ಖರ್ಚು ವೆಚ್ಚದ ಮಾಹಿತಿ ನೀಡಿದ್ದಾರೆ. ನೋಟಿಸ್ನ ಎಲ್ಲ ಪ್ರಶ್ನೆಗಳಿಗೂ ಉತ್ತರಿಸಿರುವ ರೆಡ್ಡಿ, ಖರ್ಚು ವೆಚ್ಚಕ್ಕೆ ಸಂಬಂಧಿಸಿದಂತೆ ದಾಖಲೆಗಳನ್ನು ಸಲ್ಲಿಸಿದ್ದಾರೆ.ನಗದು, ಬ್ಯಾಂಕ್ ಖಾತೆ, ಕಾರ್ಡ್ಗಳ ಮೂಲಕ ಖರ್ಚಾದ ಹಣದ ವಿವರ ಸಲ್ಲಿಕೆಯಾಗಿದೆ. ರೆಡ್ಡಿ ಸಲ್ಲಿಸಿರುವ ದಾಖಲೆಗಳ ಸತ್ಯಾಸತ್ಯತೆ ಬಗ್ಗೆ ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ.
ಕರ್ನಾಟಕ
Comments are closed.