
ಅಲಹಾಬಾದ್ : ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರ ಜನ್ಮ ಶತಮಾನೋತ್ಸವ ವಸ್ತು ಪ್ರದರ್ಶನದ ಉದ್ಘಾಟನಾ ಸಮಾರಂಭದಲ್ಲಿ ನಿನ್ನೆ ಸೋಮವಾರ ಭಾಷಣ ಮಾಡುತ್ತಿದ್ದ ವೇಳೆ ಹಿನ್ನೆಲೆಯಲ್ಲಿ ಇಸ್ಲಾಮಿಕ್ ಪ್ರಾರ್ಥನಾ ಕರೆ (ಅಝಾನ್) ಕೇಳಿ ಬಂದೊಡನೆಯೆ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ತಮ್ಮ ಹೆಗಲ ಮೇಲಿನ ಶಾಲಿನಿಂದ ತಲೆ ಮುಚ್ಚಿಕೊಂಡು ಗೌರವ ಸಲ್ಲಿಸಿದ ಫೋಟೋ ಇಂಟರ್‌ನೆಟ್‌ನಲ್ಲಿ ವೈರಲ್ ಆಗಿದೆ.
ಅಝಾನ್ ಕೇಳಿದೊಡನೆಯೇ ಸೋನಿಯಾ ಅವರು ತಮ್ಮ ಭಾಷಣವನ್ನು ತತ್‌ಕ್ಷಣವೇ ನಿಲ್ಲಿಸಿ, ಶಾಲಿನಿಂದ ತಲೆಯನ್ನು ಮುಚ್ಚಿಕೊಂಡರು. ಅಝಾನ್ ಮುಗಿದ ಬಳಿಕವೇ ಸೋನಿಯಾ ತಮ್ಮ ಭಾಷಣ ಮುಂದುವರಿಸಿದರು ಎಂದು ವರದಿ ತಿಳಿಸಿದೆ.
Comments are closed.