ನವದೆಹಹಲಿ (ನ.16): ಸರ್ಕಾರದ ನೋಟುಗಳ ಅಪಮೌಲ್ಯೀಕರಣ ಕ್ರಮದಿಂದ ಸಮಸ್ಯೆಗಳನ್ನು ಎದುರಿಸುತ್ತಿರುವ ಜನರ ಹಕ್ಕಿಗಾಗಿ ಹೋರಾಡುವಂತೆ ಕಾಂಗ್ರೆಸ್ ಅಧಕ್ಷೆ ಸೋನಿಯಾ ಗಾಂಧಿ ಸಂಸದರಿಗೆ ಕರೆಕೊಟ್ಟಿದ್ದಾರೆ.
10, ಜನಪಥದಲ್ಲಿ ಪಕ್ಷದ ಸಭೆಯ ಅಧ್ಯಕ್ಷತೆ ವಹಿಸಿದ್ದ ಸೋನಿಯಾ ಗಾಂಧಿ, ಚಳಿಗಾಲ ಅಧಿವೇಶನದಲ್ಲಿ ಪಕ್ಷದ ಕಾರ್ಯನೀತಿ ಏನಾಗಿರಬೇಕು ಎಂಬುವುದನ್ನು ತನ್ನ ಪಕ್ಷದ ಸಂಸದರೊಂದಿಗೆ ಚರ್ಚಿಸಿದರು.
ನೋಟುಗಳ ಅಪಮೌಲ್ಯೀಕರಣ ಮತ್ತು ಸರಕು ಹಾಗೂ ಸೇವಾ ತೆರಿಗೆ (ಜಿಎಸ್’ಟಿ)ಯ ಅಸಮರ್ಪಕ ತೆರಿಗೆ ದರವನ್ನು ಕೂಡಾ ಪಕ್ಷವು ವಿರೋಧಿಸಲಿದೆ.
ನೋಟುಗಳ ಅಪಮೌಲ್ಯೀಕರಣವನ್ನು ವಿರೋಧಿಸಿ ತೃಣಮೂಲ ಕಾಂಗ್ರೆಸ್ ನಾಯಕಿ ಮಮತಾ ಬ್ಯಾನರ್ಜಿ ಇಂದು ರಾಷ್ಟ್ರಪತಿ ಭವನಕ್ಕೆ ನಡೆಸಿರುವ ಪಾದಯಾತ್ರೆಯನ್ನು ಬೆಂಬಲಿಸದಿರಲು ಕಾಂಗ್ರೆಸ್ ನಿರ್ಧರಿಸಿತ್ತು. ಆ ವಿಷಯವನ್ನು ಮೊದಲು ಸಂಸತ್ತಿನಲ್ಲಿ ಚರ್ಚಿಸಲು ಕಾಂಗ್ರೆಸ್ ತೀರ್ಮಾನಿಸಿತ್ತು.
ರಾಷ್ಟ್ರೀಯ
Comments are closed.