ರಾಷ್ಟ್ರೀಯ

ಮಾಧ್ಯಮದ ಕೆಲಸದಲ್ಲಿ ಸರ್ಕಾರ ಹಸ್ತಕ್ಷೇಪ ಮಾಡಬಾರದು: ಮೋದಿ

Pinterest LinkedIn Tumblr

modhiiನವದೆಹಲಿ (ನ.16): ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಎತ್ತಿ ಹಿಡಿಯುವುದು ಮಾಧ್ಯಮದ ಕರ್ತವ್ಯ. ಇದರಲ್ಲಿ ಸರ್ಕಾರವು ಹಸ್ತಕ್ಷೇಪ ಮಾಡಬಾರದು ಎಂದು ಪ್ರಧಾನಿ ಮೋದಿ ವಿಜ್ಞಾನ ಭವನದಲ್ಲಿ ನಡೆದ ಪತ್ರಿಕಾ ಮಂಡಳಿಯ ಸುವರ್ಣ ಮಹೋತ್ಸವದಲ್ಲಿ ಹೇಳಿದ್ದಾರೆ.
ಮಾಧ್ಯಮಕ್ಕೆ ಅಭಿವ್ಯಕ್ತಿ ಸ್ವಾತಂತ್ರ್ಯ ಇರಬೇಕು. ಆದರೆ ಅದು ಮಿತಿ ಮೀರಬಾ ತಾಯಿ ಮಗುವಿಗೆ ಊಟ ಮಾಡಿಸುವಾಗ ಮಿತಿಮೀರಿ ತಿನ್ನಲು ಹೇಗೆ ಬಿಡುವುದಿಲ್ಲವೋ ಹಾಗೆ ಮಾಧ್ಯಮವು ಅಗತ್ಯಕ್ಕಿಂತ ಜಾಸ್ತಿ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಪ್ರದರ್ಶಿಸಬಾರದು ಎಂದು ಸಲಹೆ ನೀಡಿದ್ದಾರೆ.
ಮಾಧ್ಯಮವು ಸಮಾಜಕ್ಕೆ ನೀಡಿದ ಸಕಾರಾತ್ಮಕ ಕೊಡುಗೆಯನ್ನು ಶ್ಲಾಘಿಸುತ್ತಾ, ಸಮಯಕ್ಕೆ ಸರಿಯಾಗಿ ಬದಲಾವಣೆಯನ್ನು ಮಾಡಿಕೊಳ್ಳುವುದು ಸಹ ಅವರ ಜವಾಬ್ದಾರಿಯಾಗಿದೆ ಎಂದು ಹೇಳಿದ್ದಾರೆ.
ಇದೇ ಸಂದರ್ಭದಲ್ಲಿ ಇಂದಿರಾ ಗಾಂಧಿಯವರ ತುರ್ತು ಪರಿಸ್ಥಿತಿಯನ್ನು ನೆನೆಪಿಸಿಕೊಂಡು ಆ ಸಂದರ್ಭದಲ್ಲಿ ಪತ್ರಿಕಾ ಸ್ವಾತಂತ್ರ್ಯವನ್ನು ಹತ್ತಿಕ್ಕಲಾಗಿತ್ತು. ಮೊರಾರ್ಜಿ ದೇಸಾಯಿ ಪ್ರಧಾನಿಯಾದ ಬಳಿಕ ಇದು ಸಹಜ ಸ್ಥಿತಿಗೆ ಬಂತು ಎಂದು ಮೋದಿ ಹೇಳಿದರು.

Comments are closed.