ಮನೋರಂಜನೆ

ಹುಡುಗಿಯರ ‘ದಿಲ್ ಚಾಹ್ತಾ ಹೈ’ ಮಾಡುವಾಸೆ: ಫರ್ಹಾನ್ ಅಕ್ತರ್

Pinterest LinkedIn Tumblr

dil-chahta-haiಮುಂಬೈ: ಈ ಹಿಂದೆ ನಿರ್ದೇಶಿಸಿದ್ದ ‘ದಿಲ್ ಚಾಹ್ತಾ ಹೈ’ ಸಿನೆಮಾದ ಎರಡನೇ ಭಾಗವನ್ನು ಹುಡುಗಿಯರ ದೃಷ್ಟಿಕೋನದಲ್ಲಿ ನಿರ್ದೇಶಿಸುವಾಸೆ ಎಂದಿದ್ದಾರೆ ನಟ-ನಿರ್ದೇಶಕ ಫರ್ಹಾನ್ ಅಕ್ತರ್.
ಆಮೀರ್ ಖಾನ್, ಸೈಫ್ ಅಲಿ ಖಾನ್ ಮತ್ತು ಅಕ್ಷಯ್ ಖನ್ನಾ ಮುಖ್ಯ ಭೂಮಿಕೆಯಲ್ಲಿದ್ದು ೨೦೦೧ ರಲ್ಲಿ ಬಿಡುಗಡೆಯಾಗಿದ್ದ ‘ದಿಲ್ ಚಾಹ್ತಾ ಹೈ’ ಯಶಸ್ವಿಯಾಗಿ ಪ್ರದರ್ಶನ ಕಂಡಿತ್ತು.
“ನಾವು ಹುಡುಗಿಯರನ್ನು ಎಂದಿಗೂ ಉಪೇಕ್ಷಿಸಿಲ್ಲ. ನಮ್ಮ ಸಿನೆಮಾಗಳಲ್ಲಿ ಯಾವೊತ್ತು ದಿಟ್ಟ ಮಹಿಳಾ ಪಾತ್ರಗಳನ್ನೂ ಸೃಷ್ಟಿಸಿದ್ದೆವು…. ನಾನು ಹುಡುಗನಾಗಿರುವುದರಿಂದ, ಅವರ ದೃಷ್ಟಿಕೋನದಲ್ಲಿ ಚಿಂತೆ ಮಾಡುವುದು ಸುಲಭವಾಗಿತ್ತು. ಈಗ ಹುಡುಗಿಯರು ಮುಖ್ಯ ಭೂಮಿಕೆಯಲ್ಲಿರುವ ‘ದಿಲ್ ಚಾಹ್ತಾ ಹೈ’ ಎರಡನೇ ಭಾಗ ಮಾಡುವಾಸೆ ಇದೆ” ಎಂದು ಫರ್ಹಾನ್ ಹೇಳಿದ್ದಾರೆ.
ಇದು ನಟಿ ಆಲಿಯಾ ಭಟ್ ಅವರು ಸಂದರ್ಶನವೊಂದರಲ್ಲಿ ಹೇಳಿದ್ದರಿಂದ ಹೊಳೆದ ಐಡಿಯಾ ಎನ್ನುವ ಅವರು “ಇದು ಒಳ್ಳೆಯ ಐಡಿಯಾ” ಎಂದಿದ್ದಾರೆ.
ಸದ್ಯಕ್ಕೆ ಶುಕ್ರವಾರ ಬಿಡುಗಡೆಯಾಗಿರುವ ರಾಕ್ ಆನ್-೨ ಸಿನೆಮಾದ ಪ್ರಚಾರ ಕಾರ್ಯದಲ್ಲಿ ಫರ್ಹಾನ್ ಅಖರ್ ನಿರತರಾಗಿದ್ದಾರೆ.

Comments are closed.