ರಾಷ್ಟ್ರೀಯ

ನೋಟ್ ನಿಷೇಧದ ಬಿಸಿ; ಜನಸಾಮಾನ್ಯರಂತೆ ಬ್ಯಾಂಕ್ ಮುಂದೆ ಕ್ಯೂನಲ್ಲಿ ನಿಂತುಕೊಂಡ ರಾಹುಲ್ ಗಾಂಧಿ

Pinterest LinkedIn Tumblr

rahul

ನವದೆಹಲಿ: ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರಿಗೂ 500 ಹಾಗೂ 1000 ರುಪಾಯಿ ನೋಟ್ ನಿಷೇಧದ ಬಿಸಿ ತಟ್ಟಿದ್ದು, ನೋಟ್ ಬದಲಾವಣೆಗಾಗಿ ಶುಕ್ರವಾರ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾಗೆ ತೆರಳಿ ಜನಸಾಮಾನ್ಯರಂತೆ ಕ್ಯೂನಲ್ಲಿ ನಿಂತುಕೊಂಡಿದ್ದರು.

ಇಂದು ಬೆಳಗ್ಗೆ ಸಂಸತ್ ರಸ್ತೆಯಲ್ಲಿರುವ ಎಸ್ ಬಿಐ ಬ್ಯಾಂಕ್ ಗೆ ಭೇಟಿ ನೀಡಿದ ರಾಹುಲ್ ಗಾಂಧಿ 4000 ರುಪಾಯಿ ಬದಲಾವಣೆಗಾಗಿ ಕ್ಯೂನಲ್ಲಿ ನಿಂತಿದ್ದರು.

ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ರಾಹುಲ್ ಗಾಂಧಿ, ನಾನು ನಾಲ್ಕು ಸಾವಿರ ರುಪಾಯಿ ವಿನಿಮಯ ಮಾಡಿಕೊಳ್ಳಲು ಬಂದಿದ್ದೇನೆ. ಪ್ರಧಾನಿ ನರೇಂದ್ರ ಮೋದಿ ಅವರಿಗೆ ಜನ ಸಾಮಾನ್ಯರ ಕಷ್ಟ ಅರ್ಥವಾಗುವುದಿಲ್ಲ. ಕೇಂದ್ರದ ಈ ನಿರ್ಧಾರದಿಂದಾಗಿ ಬಡವರು ಪರದಾಡುವಂತಾಗಿದೆ. ಸೂಟ್, ಬೂಟ್ ಧರಿಸಿದ ಕೋಟ್ಯಾಧೀಶರು ಯಾರಾದರೂ ಕ್ಯೂನಲ್ಲಿದ್ದಾರೆಯೇ? ಹಾಗಾದರೆ ಸರ್ಕಾರ ಯಾರಿಗಾಗಿ ಹೊಸ ಕಾನೂನು ತಂದಿದೆ? ಎಂದು ಪ್ರಶ್ನಿಸಿದ ರಾಹುಲ್ ಗಾಂಧಿ, ಮೋದಿ ಸರ್ಕಾರ ಕೇವರ 15-20 ಮಂದಿಗಾಗಿ ಕೆಲಸ ಮಾಡುತ್ತಿದೆ ಎಂದು ವಾಗ್ದಾಳಿ ನಡೆಸಿದರು.

Comments are closed.