ಮುಂಬೈ

ನಿನ್ನೆ ಮಧ್ಯಾಹ್ನದವರೆಗೆ ಎಸ್ ಬಿಐಗೆ 53,000 ಕೋಟಿ ರು. ಜಮೆ

Pinterest LinkedIn Tumblr

sbi-11ಮುಂಬೈ: ಕೇಂದ್ರ ಸರ್ಕಾರ 500 ಹಾಗೂ 1000 ರುಪಾಯಿ ನೋಟ್ ಗಳನ್ನು ನಿಷೇಧ ಮಾಡಿದ ನಂತರ ಶುಕ್ರವಾರ ಮಧ್ಯಾಹ್ನದವರೆಗೆ ನಮ್ಮ ಬ್ಯಾಂಕ್ 53 ಸಾವಿರ ಕೋಟಿ ರುಪಾಯಿ ಜಮೆಯಾಗಿದೆ ಎಂದು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಹೇಳಿದೆ.
1,500 ಕೋಟಿ ರುಪಾಯಿ ಮೌಲ್ಯದ ಹಳೆ ನೋಟ್ ಗಳನ್ನು ವಿನಿಮಯ ಮಾಡಲಾಗಿದ್ದು, ನಿನ್ನೆ ಒಟ್ಟು 31, 000 ಕೋಟಿ ರುಪಾಯಿ ಜಮೆಯಾಗಿದೆ. ನಿಷೇಧ ನಂತರ ಬ್ಯಾಂಕ್ ವ್ಯವಹಾರ ಸುಗಮವಾಗಿ ಸಾಗುತ್ತಿದ್ದು, ಗ್ರಾಹಕರಿಗೆ ಅನಾನುಕೂಲವಾಗಬಾರದು ಎಂಬ ಉದ್ದೇಶದಿಂದ ಹೆಚ್ಚುವರಿ ಕೌಂಟರ್ ಗಳನ್ನು ಆರಂಭಿಸಲಾಗಿದೆ ಎಂದು ಎಸ್ ಬಿಐ ಮುಖ್ಯಸ್ಥೆ ಅರುಂಧತಿ ಭಟ್ಯಾಚಾರ್ಯ ಅವರು ಹೇಳಿದ್ದಾರೆ.
ಎಸ್ ಬಿಐ ನಿನ್ನೆ 750 ಕೋಟಿ ರುಪಾಯಿ ಹಳೆ ನೋಟ್ ಗಳನ್ನು ವಿನಿಮಯ ಮಾಡಿದ್ದು, ಇಂದು ಸಹ 723 ಕೋಟಿ ರುಪಾಯಿ ಮೌಲ್ಯದ ನೋಟ್ ಗಳನ್ನು ವಿನಿಮಯ ಮಾಡಲಾಗಿದೆ ಎಂದು ಅವರು ತಿಳಿಸಿದ್ದಾರೆ. ಅಲ್ಲದೆ ಇಂದು 29 ಸಾವಿರ ಎಟಿಎಂಗಳಿಗೆ ಹಣ ತುಂಬಿಸಲಾಗುತ್ತಿದೆ ಎಂದು ಹೇಳಿದ್ದಾರೆ.

Comments are closed.