ಮನೋರಂಜನೆ

ಉಡೇ ದಿಲ್ ಬೇಫಿಕ್ರೆ ಸಾಂಗ್‍ಗೆ ಫಿದಾ ಆದ ಅಭಿಮಾನಿಗಳು

Pinterest LinkedIn Tumblr

ranveer-singh-vaani-kapoorಮುಂಬೈ: ರಣ್‍ವೀರ್ ಸಿಂಗ್ ಮತ್ತು ವಾಣಿ ಕಪೂರ್ ಅಭಿನಯದ ಬೇಫಿಕ್ರೆ ಸಿನಿಮಾದ ಉಡೇ ದಿಲ್ ಬೇಫಿಕ್ರೆ ಹಾಡಿನ ಮೇಕಿಂಗ್ ವಿಡಿಯೋ ಯುಟ್ಯೂಬ್‍ನಲ್ಲಿ ಹರಿದಾಡುತ್ತಿದೆ. ಬೇಫಿಕ್ರೆ ಸಿನಿಮಾ ಟ್ರೇಲರ್‍ನಿಂದ ಬಾಲಿವುಡ್‍ನಲ್ಲಿ ಸದ್ದು ಮಾಡಿದ್ದು ಮತ್ತು ಹಾಡುಗಳು ಎಲ್ಲರನ್ನೂ ತಮ್ಮತ್ತ ಆಕರ್ಷಿಸಿಕೊಳ್ಳುವಲ್ಲಿ ಯಶಸ್ವಿಗೊಂಡಿವೆ.

ನವೆಂಬರ್ 3 ರಂದು ಬೇಫಿಕ್ರೆ ಚಿತ್ರ ತಂಡ ಸಿನಿಮಾದ ಟೈಟಲ್ ಸಾಂಗ್‍ನ್ನು ರಿಲೀಸ್ ಮಾಡಿತ್ತು. ಬಿಡುಗಡೆಗೊಂಡ ಕೇವಲ 5 ದಿನಗಳಲ್ಲಿ ಯೂಟ್ಯೂಬ್ ನಲ್ಲಿ 90ಲಕ್ಷ ಜನರು ವೀಕ್ಷಿಸಿದ್ದಾರೆ. ಈ ಹಾಡು ಕಾಮಿಡಿ ಮತ್ತು ರೋಮ್ಯಾಂಟಿಕಾಗಿ ಮೂಡಿ ಬಂದಿದೆ. ಬೇಫಿಕ್ರೆ ಟ್ರೇಲರ್‍ನಲ್ಲಿಯ ರಣ್‍ವೀರ್‍ಸಿಂಗ್ ಮತ್ತು ವಾಣಿ ಕಪೂರ್ ಅವರ ಕೆಮಿಸ್ಟ್ರಿ ಪಡ್ಡೆ ಹುಡುಗರ ನಿದ್ದೆಗೆಡಿಸಿದೆ. ಉಡೇ ದಿಲ್ ಬೇಫಿಕ್ರೆ ಹಾಡು ಬೆನ್ನಿ ದಯಾಳ್ ಅವರ ಕಂಠದಲ್ಲಿ ಮೂಡಿ ಬಂದಿದೆ.

ಹಾಡು ಜನಪ್ರಿಯತೆ ಪಡೆದಂತೆ ಚಿತ್ರ ತಂಡ ಹಾಡಿನ ಮೇಕಿಂಗ್ ವಿಡಿಯೋನ್ನು ಸೋಮವಾರ ಯುಟ್ಯೂಬ್‍ನಲ್ಲಿ ಅಪ್‍ಲೋಡ್ ಮಾಡಿದ್ದಾರೆ. ಈ ವಿಡಿಯೋ ಸಖತ್ ಕ್ರೇಜ್ ಹುಟ್ಟುಹಾಕಿದೆ. ಕೇವಲ ಒಂದು ದಿನದಲ್ಲಿ 6.40 ಲಕ್ಷ ವ್ಯೂವ್‍ಗಳನ್ನು ಪಡೆದಿದೆ.

ಬೇಫಿಕ್ರೆ ಸಿನಿಮಾವು ಯಶ್ ಚೋಪ್ರಾ ಬ್ಯಾನರ್ ಅಡಿಯಲ್ಲಿ ಆದಿತ್ಯ ಚೋಪ್ರಾರ ನಿರ್ದೇಶನದಲ್ಲಿ ಮೂಡಿ ಬುರುತ್ತಿದೆ. ಡಿಸೆಂಬರ್ 9ರಂದು ಬೇಫಿಕ್ರೆ ಜಗತ್ತಿನಾದ್ಯಂತ ಬಿಡುಗಡೆ ಆಗಲಿದೆ.

Comments are closed.