ಕರ್ನಾಟಕ

ಆಯ್ಯಪ್ಪನ ದರ್ಶನ ಪಡೆಯಲು ಎರುವ 18 ಮೆಟ್ಟಿಲುಗಳ ವಿಶಿಷ್ಟತೆ.

Pinterest LinkedIn Tumblr

ayyappa_steps_1

 ಅಯ್ಯಪ್ಪನ ಭಕ್ತರು ಸನ್ನಿಧಾನವನ್ನು ಸೇರಿ, ಅಯ್ಯಪ್ಪ ಸ್ವಾಮಿಯ ದರ್ಶನ ಪಡೆಯಲು 18 ಮೆಟ್ಟಿಲುಗಳನ್ನು ಏರುತ್ತಾರೆ. ಅದರೆ ಈ ಮೆಟ್ಟಲುಗಳಿಗೆ ಅದರದೆ ಅದ ಕೆಲವು ವಿಶಿಷ್ಟತೆ ಇದೆ.

ಆ 18 ಮೆಟ್ಟಿಲುಗಳಲ್ಲಿ ಮೊದಲ ಐದು ಮೆಟ್ಟಿಲುಗಳು, ಮನುಷ್ಯನ ಪಂಚೇಂದ್ರಿಯಗಳ ಪಂಚತತ್ವಗಳಾದ, ಶಬ್ದ, ಸ್ಪರ್ಶ, ರೂಪ, ರಸ, ಗಂಧಗಳನ್ನು ಪ್ರತಿನಿಧಿಸುತ್ತಾ, ನಮ್ಮ ಈ ದೇಹದ ‘ ನಶ್ವರ’ತೆಯನ್ನು ಬಿಂಬಿಸುತ್ತದೆ.

ಮುಂದಿನ ಎಂಟು ಮೆಟ್ಟಿಲುಗಳು ಮನುಷ್ಯನ ‘ ಅಷ್ಟರಾಗ’ ಗಳಾದ, ಕಾಮ, ಖ್ರೋಧ, ಲೋಭ, ಮೋಹ, ಮದ, ಮಾತ್ಸರ್ಯ, ಅಸೂಯೆ,ಮತ್ತು ( ಪ್ರೀತಿ, ಕೋಪ, ದುರಾಸೆ, ಕಾಮುಕತೆ, ಅಹಂಕಾರ, ಅನಾರೋಗ್ಯಕರವಾದ ಪೈಪೋಟಿ, ಅಸೂಯೆ ಮತ್ತು ಸ್ವಪ್ರಶಂಸೆಗಳಿಂದ ತುಂಬಿದ)ಮೂರ್ಖತ್ವವನ್ನು ಪ್ರತಿಬಿಂಬಿಸುತ್ತವೆ.

ಮುಂದಿನ ಮೂರು ಮೆಟ್ಟಿಲುಗಳು, ಸತ್ವ, ರಜ ಮತ್ತು ತಮೋಗುಣಗಳೆಂಬ ತ್ರಿಗುಣಗಳ ದ್ಯೋತಕವಾಗಿವೆ ಮತ್ತು ಕೊನೆಯ ಎರಡು ಮೆಟ್ಟಿಲುಗಳು ವಿದ್ಯೆ ಎಂದರೆ ಜ್ಞಾನ ಮತ್ತು ಅವಿದ್ಯ, ಎಂದರೆ ಅಜ್ಞಾನವನ್ನು ಸೂಚಿಸುತ್ತವೆ.

ಸ್ವಾಮೀ ಅಯ್ಯಪ್ಪ 18 ರೀತಿಯ ಆಯುಧಗಳ ಪ್ರಯೋಗದಲ್ಲಿ ಪ್ರವೀಣನೆಂದು ಹೇಳಲು ಈ ಹದಿನೆಂಟು ಮೆಟ್ಟಿಲುಗಳು ಎಂದೂ ಉಲ್ಲೇಖಿಸಲಾಗಿದೆ. ಸ್ವಾಮೀ ಅಯ್ಯಪ್ಪ ವಿಗ್ರಹದೊಳಕ್ಕೆ ಲೀನವಾಗುವ ಮುಂಚೆ ಮೆಟ್ಟಲಿಗೆ ಒಂದರಂತೆ ಆ ಹದಿನೆಂಟು ಆಯುಧಗಳನ್ನು ಹದಿನೆಂಟು ಮೆಟ್ಟಿಲುಗಳಿಗೆ ಸಮರ್ಪಿಸಿಬಿಟ್ಟನಂತೆ.

ಈ ಹದಿನೆಂಟು ಮೆಟ್ಟಿಲುಗಳು, ಶಬರಿಮಲೆಯ ಸುತ್ತೂ ಇರುವ 18 ಬೆಟ್ಟಗಳ ಪ್ರತೀಕವೆಂದೂ ಹೇಳಲಾಗಿದೆ. ಆ ಬೆಟ್ಟಗಳಾವುದು ಎಂದರೆ, ಪೊನ್ನಂಬಾಲಮೇಡು, ಗೌಡೆನ್ಮಲೆ, ನಾಗಮಲೆ, ಸುಂದರಮಲೆ, ಚಿತ್ತಂಬಾಲಮಲೆ, ಕಲ್ಕಿಮಲೆ, ಮತಂಗಮಲೆ, ಮೈಲಾಡುಮಲೆ, ಶ್ರೀಪಾದಮಲೆ, ದೇವರಮಲೆ, ನೀಲಕ್ಕಲಮಲೆ, ತಲಪ್ಪಾರಮಲೆ, ನೀಲಿಮಲೆ, ಕರಿಮಲೆ, ಪುದುಚೆರ್ರಿಮಲೆ, ಕಾಲಕೆಟ್ಟಿಮಲೆ, ಇಂಚಿಪ್ಪರಮಲೆ, ಮತ್ತು ಶಬರಿಮಲೆ.

18 ಶಕ್ತಿ ಪೀಠಗಳು, ಭಗವದ್ಗೀತೆಯ 18 ಅಧ್ಯಾಯಗಳು, 18 ಪುರಾಣಗಳು ಈ 18 ಸಂಖ್ಯೆಯನ್ನು ಪುಷ್ಥೀಕರಿಸುತ್ತದೆ

Comments are closed.