ಕರ್ನಾಟಕ

ಮಾದಕ ವಸ್ತು ಹೆರಾಯಿನ್ ಮಾರಾಟ: ಮಹಿಳೆ ಸೇರಿ ನಾಲ್ವರ ಸೆರೆ

Pinterest LinkedIn Tumblr

heraಬೆಂಗಳೂರು, ಅ. ೨೮ – ಮಾದಕ ವಸ್ತು ಹೆರಾಯಿನ್ ಮಾರಾಟ ಮಾ‌ಡುತ್ತಿದ್ದ ಓರ್ವ ಮಹಿಳೆ ಸೇರಿ ನಾಲ್ವರನ್ನು ಬಂಧಿಸಿರುವ ಆಗ್ನೇಯ ವಿಭಾಗದ ಪೊಲೀಸರು 10 ಲಕ್ಷ ಮೌಲ್ಯದ ಹೆರಾಯಿನ್‌ನ್ನು ವಶಪಡಿಸಿಕೊಂಡಿದ್ದಾರೆ.
ಪಶ್ಚಿಮ ಬಂಗಾಳದ ಮುರ್ಷಿದಾಬಾದ್‌ನ ಮುರ್ಷಿದ್ (32), ನುದಿಯಾ ಜಿಲ್ಲೆಯ ಡಬ್ಲುಶೇಖ್ (35), ಮುನಿರಾ ಶೇಖ್ (35), ಮುಜಾಬರ್ ಸಾಹು (40) ಬಂಧಿತ ಆರೋಪಿಗಳಾಗಿದ್ದಾರೆ. ಬಂಧಿತರಿಂದ 10 ಲಕ್ಷ ಮೌಲ್ಯದ 335 ಗ್ರಾಂ ಹೆರಾಯಿನ್‌ನ್ನು ವಶಪಡಿಸಿಕೊಂಡಿದ್ದಾರೆ.
ಬಂಧಿತ ಆರೋಪಿಗಳು ಕೊಲ್ಕತ್ತಾದ ಪರಿಚಿತ ದುಷ್ಕರ್ಮಿಯೊಬ್ಬನಿಂದ ಹೆರಾಯಿನ್‌ನ್ನು ತಂದು ಮಾರತ್‌ಹಳ್ಳಿ ಸುತ್ತಮುತ್ತಲ ಕಾರ್ಮಿಕರ ಶೆಡ್‌ಗಳ ಬಳಿ ಜೋಪ‌ಡಿ ಹಾಕಿಕೊಂಡು ವಾಸ ಮಾಡುತ್ತ ಐಟಿಬಿಟಿ ಕಂಪನಿಗಳ ಉದ್ಯೋಗಿಗಳು ಪ್ರತಿಷ್ಠಿತ ಕಾಲೇಜುಗಳ ವಿದ್ಯಾರ್ಥಿಗಳಿಗೆ ಹೆರಾಯಿನ್ ಮಾರಾಟ ಮಾಡುತ್ತಿದ್ದರು.
ಕಚಿತ ಮಾಹಿತಿ ಮೇರೆಗೆ ಕಾರ್ಯಾಚರಣೆ ನಡೆಸಿದ ಎಚ್‌ಎಎಲ್ ಪೊಲೀಸರು ಆರೋಪಿಗಳನ್ನು ಬಂಧಿಸಿ ತನಿಖೆ ಕೈಗೊಂಡಿದ್ದಾರೆ ಎಂದು ಡಿಸಿಪಿ ಡಾ. ಬೋರಲಿಂಗಯ್ಯ ಅವರು ತಿಳಿಸಿದ್ದಾರೆ.

Comments are closed.