ರಾಷ್ಟ್ರೀಯ

ಸುದ್ದಿ ಮಾಧ್ಯಮಗಳಿಗೆ ಕಟ್ಟುಪಾಡು ಬೇಡ: ವೆಂಕಯ್ಯ ನಾಯ್ಡು

Pinterest LinkedIn Tumblr

Venkayya-2ನವದೆಹಲಿ: ಪ್ರಜಾಪ್ರಭುತ್ವ ರಾಷ್ಟ್ರದಲ್ಲಿ ಮಾಧ್ಯಮಗಳಿಗೆ ಕಟ್ಟುಪಾಡುಗಳನ್ನು ಹೇರಲಾಗುವುದಿಲ್ಲ, ಇದರ ಬದಲು ಮಾಧ್ಯಮಗಳೇ ಸ್ವಯಂ ಕಟ್ಟುಪಾಡುಗಳಿಗೆ ಬದ್ಧವಾಗುವುದೊಳಿತು ಎಂದು ಕೇಂದ್ರ ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವ ವೆಂಕಯ್ಯ ನಾಯ್ಡು ಅಭಿಪ್ರಾಯಪಟ್ಟಿದ್ದಾರೆ.

ಅದೇ ವೇಳೆ ಸಾಮಾಜಿಕ ತಾಣಗಳು ನಿಯಂತ್ರಣ ರಹಿತವಾಗಿದೆ ಎಂದು ಅವರು ಹೇಳಿದ್ದಾರೆ.

ಪ್ರಜಾಪ್ರಭುತ್ವ ರಾಷ್ಟ್ರದಲ್ಲಿ, ಭಾವನೆಗಳನ್ನು ವ್ಯಕ್ತಪಡಿಸುವುದಕ್ಕೆ ಸ್ವಾತಂತ್ರ್ಯವಿದೆ. ಹೀಗಿರುವಾಗ ಸುದ್ದಿ ಮಾಧ್ಯಮಗಳಿಗೆ ಕಡಿವಾಣ ಹಾಕಲಾಗುವುದಿಲ್ಲ, ಇದು ನನ್ನ ನಂಬಿಕೆ ಎಂದು ಪಿಟಿಐ ಸಂದರ್ಶನದಲ್ಲಿ ಮಾತನಾಡಿದ ನಾಯ್ಡು ಹೇಳಿದ್ದಾರೆ.

ಸುದ್ದಿ ಮಾಧ್ಯಮಗಳಿಗೆ ಸ್ವ ನಿಯಂತ್ರಣ ಒಳ್ಳೆಯದು. ಇದೀಗ ಅಗತ್ಯವಿರುವುದು ಹೊಸ ಮಸೂದೆಯಲ್ಲ, ಬೇಕಾಗಿರುವುದು ಧ್ಯೇಯೋದ್ದೇಶ ಮತ್ತು ಆಡಳಿತಾತ್ಮಕ ಕುಶಲತೆ. ಕೆಲವೊಂದು ಕಡೆ ಇದು ಇಲ್ಲದಾಗುತ್ತಿದೆ ಎಂದು ಸಚಿವರು ನುಡಿದಿದ್ದಾರೆ.

Comments are closed.