ಕರ್ನಾಟಕ

ಸ್ವಾಮೀಜಿ ಆಸನದಲ್ಲಿ ಕುಳಿತು ಫೋಟೋ ತೆಗೆದು ಫೇಸ್​ಬುಕ್​ನಲ್ಲಿ ಅಪಲೋಡ್ ಮಾಡಿದ ಯುವಕ !

Pinterest LinkedIn Tumblr

ha

ದಾವಣಗೆರೆ: ದಾವಣಗೆರೆ ಜಗಳೂರು ತಾಲೂಕಿನ ಕಣ್ವಕುಪ್ಪೆ ಗವಿಮಠದಲ್ಲಿ ಯುವಕನೊಬ್ಬ ಸ್ವಾಮೀಜಿ ಕುಳಿತುಕೊಳ್ಳುವ ಆಸನದ ಮೇಲೆ ಕೂತು ಉದ್ದಟತನ ಮೆರೆದಿದ್ದಾನೆ.

ಬಿಳಿಚೋಡು ಗ್ರಾಮದಲ್ಲಿ ಹಾರಿಸ್ ಖಾನ್ ಕಣ್ವಕುಪ್ಪೆ ಗವಿಮಠದಲ್ಲಿ ಯಾರು ಇಲ್ಲದ ವೇಳೆ ಸ್ವಾಮೀಜಿ ಕೂರುವ ಆಸನದ ಮೇಲೆ ಕೂತು ಸೆಲ್ಫಿ ತೆಗೆದುಕೊಂಡಿದ್ದಾನೆ. ಅಲ್ಲದೇ ಈ ಫೋಟೋವನ್ನು ಫೇಸ್ಬುಕ್ನಲ್ಲಿ ಅಪಲೋಡ್ ಮಾಡಿ ಉದ್ಧಟತನ ಮೆರೆದಿದ್ದಾನೆ. ಸ್ಟೇಟಸ್’ನಲ್ಲಿ ಆಯುಧಗಳು ಶೋಕಿಗಾಗಿ ಅಷ್ಟೇ, ಹೆದರಿಸಲು ನನ್ನ ಹೆಸರು ಸಾಕು ಎಂದು ಬರೆದುಕೊಂಡಿದ್ದಾನೆ.

ನಾಲ್ವಡಿ ಶಾಂತಲಿಂಗ ಸ್ವಾಮೀಜಿಗಳು ಉತ್ತರಾಖಖಂಡ್ನ ಕೇದಾರನಾಥ ಕ್ಷೇತ್ರಕ್ಕೆ ತೆರಳಿದ ಸಂದರ್ಭದಲ್ಲಿ ಈ ಘಟನೆ ನಡೆದಿದೆ. ಘಟನೆಯಿಂದ ಆಕ್ರೋಶಗೊಂಡ ಭಕ್ತರು ಹಾರಿಸ್ ಖಾನ್ನನ್ನು ಹಿಗ್ಗಾಮುಗ್ಗಾ ಥಳಿಸಿದ್ದಾರೆ. ಗಾಯಗೊಂಡ ಹಾರಿಸ್ ಖಾನ್ ಜಗಳೂರು ತಾಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.

ಘಟನೆಗೆ ಜಗಳೂರು ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಡಿಸಿದ್ದು ಈ ಸಂಬಂಧ ಜಗಳೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಜಗಳೂರು ಪಟ್ಟಣ ಇದೀಗ ಬೂದಿಮುಚ್ಚಿದ ಕೆಂಡದಂತಿದ್ದು ಬಿಗಿಪೊಲೀಸ್ ಬಂದೋಬಸ್ತ್ ಹಾಕಲಾಗಿದೆ

Comments are closed.