ಕ್ರೀಡೆ

ಟ್ವಿಟ್ಟರ್ ನಲ್ಲಿ ಪಾಕಿಸ್ತಾನದ ಬಗ್ಗೆ ವಿರೇಂದ್ರ ಸೆಹ್ವಾಗ್ ಹೇಳಿದ್ದೇನು…?

Pinterest LinkedIn Tumblr

sehwag

ನವದೆಹಲಿ: ಸಾಮಾಜಿಕ ಜಾಲತಾಣದಲ್ಲಿ ಹೆಚ್ಚು ಸಕ್ರಿಯವಾಗಿರುವ ಭಾರತೀಯ ಕ್ರಿಕೆಟ್‌ತಂಡದ ಮಾಜಿ ಆಟಗಾರ ವಿರೇಂದ್ರ ಸೆಹ್ವಾಗ್‌ಪಾಕಿಸ್ತಾನದ ಕಾಲೆಳೆದಿದ್ದಾರೆ.

ಭಾನುವಾರ ನಡೆದ ಹಾಕಿ ಏಷ್ಯನ್‌ಚಾಂಪಿಯನ್ಸ್‌ಟ್ರೋಫಿಯಲ್ಲಿ ಬದ್ಧ ವೈರಿ ಪಾಕಿಸ್ತಾವನ್ನು ಟೀಂ ಇಂಡಿಯಾ ಸದೆಬಡಿದ ಬಳಿಕ ಸೆಹ್ವಾಗ್‌ಪಾಕಿಸ್ತಾನ ಹಾಕಿ ತಂಡದ ಕಾಲೆಳೆದಿದ್ದಾರೆ.

ನ್ಯೂಜಿಲೆಂಡ್‌ವಿರುದ್ಧದ ಮೂರನೇ ಏಕದಿನ ಪಂದ್ಯದಲ್ಲಿ ಗೆದ್ದ ಭಾರತ ತಂಡಕ್ಕೆ ಶುಭಾಶಯ ತಿಳಿಸಿದ್ದಾರೆ. ಇಂದಿನ ಎರಡೂ ಜಯಗಳು ಅದ್ಭುತ, ಭಾರತದ ಹಾಕಿ ಮತ್ತು ಕ್ರಿಕೆಟ್‌ತಂಡಗಳಿಗೆ ಶುಭಾಶಯ. ನ್ಯೂಜಿಲೆಂಡ್‌ಅನ್ನು ಸೋಲಿಸಿದ್ದೂ ನಿಜಕ್ಕೂ ಅತ್ಯದ್ಭುತ. ಆದರೆ ಹಾಕಿ ಏಷ್ಯನ್‌ಚಾಂಪಿಯನ್ಸ್‌ಟ್ರೋಫಿಯಲ್ಲಿ ಪಾಕಿಸ್ತಾನವನ್ನು ಮತ್ತೊಮ್ಮೆ ಭಾರತ ಸೋಲಿಸಿದೆ ಎಂದು ಟ್ವೀಟ್ ಮಾಡಿದ್ದಾರೆ.

ಭಾನುವಾರ ನಡೆದ ಹಾಕಿ ಏಷ್ಯನ್‌ಚಾಂಪಿಯನ್ಸ್‌ಟ್ರೋಫಿ ಟೂರ್ನಿಯಲ್ಲಿ ಟೀಂ ಇಂಡಿಯಾ ತಂಡ ಹಾಲಿ ಚಾಂಪಿಯನ್‌ಪಾಕಿಸ್ತಾನವನ್ನು 3-2 ಗೋಲುಗಳಿಂದ ಸೋಲಿಸಿದೆ.

Comments are closed.