ಕ್ರೀಡೆ

ವಿರಾಟ್ ಕೊಹ್ಲಿ ಹೊಸ ದಾಖಲೆಗಳನ್ನು ಒಮ್ಮೆ ನೋಡಿ…

Pinterest LinkedIn Tumblr

virat-kolhi759

ಮೊಹಾಲಿ: ಮೊಹಾಲಿಯಲ್ಲಿ ನಡೆದ ಏಕದಿನ ಪಂದ್ಯ ಹಲವು ದಾಖಲೆಗಳಿಗೆ ಕಾರಣವಾಗಿದೆ. ಪ್ರಮುಖವಾಗಿ ಟೀಮ್ ಇಂಡಿಯಾದ ಮ್ಯಾಚ್ ವಿನ್ನರ್ ವಿರಾಟ್ ಕೊಹ್ಲಿ ಹೊಸ ದಾಖಲೆಗಳನ್ನ ಬರೆದಿದ್ದಾರೆ.

26 ಶತಕ: ಸದ್ಯ 166 ಏಕದಿನ ಇನ್ನಿಂಗ್ಸ್ ಆಡಿರುವ ಕೊಹ್ಲಿ 26 ಶತಕಗಳನ್ನ ಸಿಡಿಸಿದ್ದಾರೆ. ಸಚಿನೆ ತೆಂಡೂಲ್ಕರ್ 26 ಶತಕ ಸಿಡಿಸಲು 247 ಪಂದ್ಯ ಆಡಿದ್ದರು. ರಿಕಿ ಪಾಂಟಿಂಗ್ 286 ಪಂದ್ಯ ಮತ್ತು ಸನತ್ ಜಯಸೂರ್ಯ 408 ಪಂದ್ಯಗಳನ್ನ ತೆಗೆದುಕೊಂಡಿದ್ದರು.

ಮೊಹಾಲಿಯಲ್ಲಿ ಅತಿಹೆಚ್ಚು ಸ್ಕೋರ್: ಇನ್ನೂ ವಿರಾಟ್ ಕೊಹ್ಲಿ ಮೊಹಾಲಿ ಮೈದಾನದಲ್ಲಿ ಅತಿ ಹೆಚ್ಚು ವೈಯಕ್ತಿಕ ರನ್ ಮಾಡಿದ ಖ್ಯಾತಿಗೆ ಪಾತ್ರರಾಗಿದ್ದಾರೆ. ಈ ಹಿಂದೆ ಧೋನಿ ಗಳಿಸಿದ್ದ 139 ರನ್ ಇದುವರೆಗಿನ ದಾಖಲೆಯಾಗಿತ್ತು. ನಿನ್ನೆ 154 ರನ್ ಗಳಿಸಿದ ಕೊಹ್ಲಿ ಆ ದಾಖಲೆ ಮುರಿದಿದ್ದಾರೆ.

Comments are closed.