
ಲಖನೌ: ಮುಸ್ಲಿಂ ಸಮುದಾಯದಲ್ಲಿ ಮಹಿಳಾ ಸಮಾನ ಹಕ್ಕುಗಳ ಪರವಾಗಿ ಮಾತನಾಡಿರುವ ಪ್ರಧಾನಿ ನರೇಂದ್ರ ಮೋದಿ ಸೋಮವಾರ ತ್ರಿವಳಿ ತಲಾಖ್ (ವಿವಾಹ ವಿಚ್ಚೇಧನ) ಅನ್ನು ಖಂಡಿಸಿದ್ದಾರೆ.
ಬುಂದೇಲ್ ಖಂಡ್ ನಲ್ಲಿ ರ್ಯಾಲಿಯನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ಈ ಕಾರಣದಿಂದಾಗಿಯೇ, ಮತಧರ್ಮದ ಹೆಸರಿನಲ್ಲಿ ಅಸಮಾನತೆಗೆ ಅವಕಾಶ ಕೊಡಲು ಸಾಧ್ಯವಿಲ್ಲ ಎಂದು ಅವರ ಸರ್ಕಾರ ಸುಪ್ರೀಂ ಕೋರ್ಟ್ ಗೆ ತಿಳಿಸಿದೆ ಎಂದು ಕೂಡ ಹೇಳಿದ್ದಾರೆ.
ಸಂವಿಧಾನಕ್ಕೆ ತಕ್ಕಂತೆ ಸರ್ಕಾರ ಕೆಲಸ ಮಾಡಲಿದೆ ಮತ್ತು ನ್ಯಾಯಾಂಗ ಕೂಡ ಅದನ್ನೇ ಅಪೇಕ್ಷಿಸುತ್ತದೆ ಎಂದಿರುವ ಮೋದಿ ಎಲ್ಲರಿಗು ಲೈಂಗಿಕ ಸಮಾನತೆ ನೀಡಲು ತಾವು ಬದ್ಧ ಎಂದಿದ್ದಾರೆ.
ಲೈಂಗಿಕ ಸಮಾನತೆ ತರುವ ಬದಲು ಕೆಲವು ರಾಜಕೀಯ ಪಕ್ಷಗಳು ಮತ ಬ್ಯಾಂಕ್ ಬಗ್ಗೆ ಹೆಚ್ಚು ತಲೆಕೆಡಿಸಿಕೊಂಡಿವೆ ಎಂದು ವಾಗ್ದಾಳಿ ನಡೆಸಿರುವ ಅವರು “ದೂರವಾಣಿಯಲ್ಲಿ ಮೂರು ಬಾರಿ ತಲಾಖ್ ಎಂದು ಹೇಳಿ ನಮ್ಮ ಸಹೋದರಿಯರಿಗೆ ವಿವಾವ ವಿಚ್ಚೇಧನ ನೀಡುವ ವ್ಯವಸ್ಥೆಯನ್ನು ಒಪ್ಪಿಕೊಳ್ಳುವುದು ಹೇಗೆ” ಎಂದು ಕೂಡ ಅವರು ಹರಿಹಾಯ್ದಿದ್ದಾರೆ.
ಇದನ್ನು ಕೋಮಿನ ಕಣ್ಣಿನಲ್ಲಿ ನೋಡಬಾರದು ಆದರೆ ಎಲ್ಲರಿಗು ಸಮಾನತೆ ತರುವ ದೃಷ್ಟಿಯಿಂದ ಚಿಂತಿಸಬೇಕು ಎಂದು ಕೂಡ ಅವರು ಹೇಳಿದ್ದಾರೆ.
Comments are closed.