ರಾಷ್ಟ್ರೀಯ

ವಿದ್ಯಾರ್ಥಿನಿಯರಿಗೆ ಈ ಕಾಲೇಜಿನಲ್ಲಿ ಜೀನ್ಸ್ ನಿಷೇಧ

Pinterest LinkedIn Tumblr

ladiesತಿರುವನಂತಪುರ(ಅ.23): ವೈದ್ಯಕೀಯ ವಿದ್ಯಾರ್ಥಿನಿಯರು ಕಾಲೇಜಿನ ಆವರಣದಲ್ಲಿ ಜೀನ್ಸ್, ಟೀ-ಶರ್ಟ್ಸ್ ಹಾಗೂ ಲೆಗಿಂಗ್ಸ್‌ಗಳನ್ನು ಕಡ್ಡಾಯವಾಗಿ ಹಾಕುವಂತಿಲ್ಲ ಎಂದು ತಿರುವನಂತಪುರದ ಸರ್ಕಾರಿ ವೈದ್ಯಕೀಯ ಕಾಲೇಜು ವಿದ್ಯಾರ್ಥಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದೆ. ಕಾಲೇಜಿನಲ್ಲಿ ಬಿಳಿಯ ಕೋಟ್ ಹಾಗೂ ಐಡಿ ಕಾರ್ಡನ್ನು ಕಡ್ಡಾಯವಾಗಿ ಧರಿಸಬೇಕು ಎಂದು ಆಡಳಿತ ಮಂಡಳಿ ಆದೇಶ ನೀಡಿದೆ ಎಂದು ‘ದ ಟೈಮ್ಸ್ ಆಫ್ ಇಂಡಿಯಾ’ ವರದಿ ಮಾಡಿದೆ.
ವಿದ್ಯಾರ್ಥಿನಿಯರು ವಾರ್ಡ್‌ಗಳಿಗೆ ಭೇಟಿ ನೀಡಿದಾಗ ಅಲ್ಲಿ ಹಲವು ಮನಸ್ಥಿತಿಯ ಜನರಿರುತ್ತಾರೆ ಹಾಗೂ ಸೋಂಕು ತಗುಲಿದ ರೋಗಿಗಳಿರುತ್ತಾರೆ ಆದ್ದರಿಂದ ವಸ ಸಂಹಿತೆ ಅವರ ರಕ್ಷಣೆಗಾಗಿ ಅವಶ್ಯವಿದೆ ಎಂದು ಆಡಳಿತ ಮಂಡಳಿ ಸಮರ್ಥಿಸಿದೆ. ವಿದ್ಯಾರ್ಥಿನಿಯರು ಸೀರೆ ಹಾಗೂ ಚೂಡಿದಾರವನ್ನು ಧರಿಸಬೇಕು ಹಾಗೂ ಕೂದಲನ್ನು ಬಿಡುವಂತಿಲ್ಲ, ವಿವಿಧ ರೀತಿಯ ಕೇಶವಿನ್ಯಾಸ ಮಾಡುವಂತಿಲ್ಲ, ಕೂದಲನ್ನು ಕಟ್ಟಿ ಹಿಂಬದಿ ಗಂಟು ಹಾಕಬೇಕು, ಆಡಂಬರದ ಆಭರಣಗಳನ್ನು ಹಾಕುವಂತಿಲ್ಲ ಎಂಬೆಲ್ಲಾ ಸೂಚನೆಗಳನ್ನು ನೀಡಿದೆ. ಇದೇ ವೇಳೆ ಪುರುಷ ವಿದ್ಯಾರ್ಥಿಗಳು ಸಹ ಶೂ ಸಹಿತ ಫಾರ್ಮಲ್ ಉಡುಗೆ ಧರಿಸಬೇಕೆಂಬ ನಿಯಮಗಳನ್ನು ವಿಸಿದೆ. ಕಾಲೇಜಿನ ಎಲ್ಲಾ ವಿಭಾಗದ ಮುಖ್ಯಸ್ಥರ ಜತೆ ಚರ್ಚಿಸಿ ನಿರ್ಧಾರ ಕೈಗೊಳ್ಳಲಾಗಿದೆ, ಅಡಳಿತ ಮಂಡಳಿ ಹೇಳಿದೆ. ಈ ಕ್ರಮಕ್ಕೆ ವಿದ್ಯಾರ್ಥಿಗಳು ಆಕ್ಷೇಪಿಸಿದ್ದಾರೆ.

Comments are closed.