ರಾಷ್ಟ್ರೀಯ

ಫೇಸ್ ಬುಕ್ ನಲ್ಲಿ ಮಮತಾರ ಟೀಕೆ: ಯುವತಿಗೆ ಸಾರ್ವಜನಿಕ ಅವಮಾನ

Pinterest LinkedIn Tumblr

%e0%b2%af%e0%b3%81ಕೋಲ್ಕತ: ಫೇಸ್ ಬುಕ್ ನಲ್ಲಿ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರನ್ನು ಟೀಕಿಸಿದ್ದ ಕೋಲ್ಕತಾದ ಯುವತಿಯೊಬ್ಬರಿಗೆ ಸಾರ್ವಜನಿಕವಾಗಿ ಅವಮಾನ ಮಾಡಲಾಗಿದೆ.
ರಾಜಶ್ರೀ ಚಟ್ಟೋಪಧ್ಯಾಯ ಎಂಬ ಯುತಿ ದುರ್ಗಾ ಪೂಜೆ ಸಂಬಂಧ ಹಾಕಿದ ಸ್ಟೇಟಸ್ನಿಂದಾಗಿ ಈಗ ಸಂಕಷ್ಟಕ್ಕೆ ಸಿಲುಕಿದ್ದಾರೆ.
ದುರ್ಗಾ ಪೂಜೆಗಾಗಿ ರಾಜ್ಯ ಸರ್ಕಾರ ಹಲವು ಸಂಘ ಸಂಸ್ಥೆಗಳಿಗೆ ಧನ ಸಹಾಯ ಮಾಡುತ್ತದೆ. ಇದನ್ನು ಪ್ರಶ್ನಿಸಿ ರಾಜಶ್ರೀ ಫೇಸ್ಬುಕ್ನಲ್ಲಿ ಸ್ಟೇಟಸ್ ಹಾಕಿದ್ದರು.
ಇದರಿಂದ ಸಿಟ್ಟಾಗಿರುವ ಕೆಲವರು ಇಂತಹ ಸ್ಟೇಟಸ್ ಹಾಕಿದ ನಿನಗೆ ನಾಚಿಕೆಯಾಬೇಕು ಎಂಬ ಸಂದೇಶವಿರುವ ಹೋರ್ಡಿಂಗ್ ಅನ್ನು ಆಕೆಯ ಮನೆ ಮುಂದೆ ಹಾಕಿದ್ದಾರೆ. ಜತೆಗೆ ಆ ಹೋರ್ಡಿಂಗ್ನಲ್ಲಿ ಆಕೆಯ ಫೇಸ್ಬುಕ್ ಸ್ಟೇಟಸ್ನ ಫೋಟೋ ಸಹ ಹಾಕಿದ ಘಟನೆ ಭಾನುವಾರ ನೆಡೆದಿದೆ, ಅಂದೇ ತೃಣಮೂಲ ಕಾಂಗ್ರೆಸ್ನ ಕೆಲವು ಮಹಿಳಾ ಸದಸ್ಯರು ಆಕೆಯ ಮನೆಗೆ ಬಂದು ಕ್ಷಮೆ ಕೇಳುವಂತೆ ಒತ್ತಾಯಿಸಿದ್ದಾರೆ.
ದುರ್ಗಾ ಪೂಜೆಗಾಗಿ ಸರ್ಕಾರ ಸಚಿವರುಗಳ ಮಾಲೀಕತ್ವದ ಕೆಲವು ಸಂಘಗಳಿಗೆ ಕೋಟ್ಯಾಂತರ ರೂ. ಧನ ಸಹಾಯ ಮಾಡುತ್ತದೆ. ಆದರೆ ಕಾರ್ಮಿಕರಿಗೆ ಭತ್ಯೆ ನೀಡಲು ಸರ್ಕಾರದ ಬಳಿ ಹಣವಿರುವುದಿಲ್ಲ. ಇದನ್ನು ಪ್ರಶ್ನಿಸಿ ನಾನು ಸ್ಟೇಟಸ್ ಹಾಕಿದ್ದೆ. ನಾನು ಏನೂ ತಪ್ಪು ಮಾಡಿಲ್ಲ ಎಂದು ಯುವತಿ ತಿಳಿಸಿದ್ದಾರೆ.

Comments are closed.