
ದುಬೈ : ಯುಎಇ ಸಂದರ್ಶನದಲ್ಲಿರುವ ಖ್ಯಾತ ವಾಗ್ಮಿ ಪುತ್ತೂರು ಬದ್ರಿಯಾ ಜುಮಾ ಮಸೀದಿಯ ಖತೀಬರು ಆದ ಬಹುಮಾನ್ಯ ಎಸ್ ಬಿ ದಾರಿಮಿ, ಬರಹಗಳಿಂದ ಜನ ಸಮಾನ್ಯರ ಮನಸ್ಸಿನಲ್ಲಿ ಬೇರೂರಿರುವ ಅಲ್ ಅಹ್ಸನ್ ಮಾಸಿಕ ಪತ್ರಿಕೆಯ ಸಂಪಾದಕರಾದ ಬಹುಮಾನ್ಯ ಕೆ ಎಂ ಎ ಕೊಡುಂಗಾಯಿ ಮತ್ತು ಕರಾವಳಿ ಕರ್ನಾಟಕದ ಸಾಮಾಜಿಕ ನೇತಾರರಾದ ಹಾಜಿ ಮುಸ್ತಫಾ ಕೆಂಪಿ ಯವರನ್ನು ಕೆಐಸಿ ಕೇಂದ್ರ ಸಮಿತಿಯ ವತಿಯಿಂದ ಸನ್ಮಾನ ಮಾಡಲಾಯಿತು.









ಅ.7ನೇ ಶುಕ್ರವಾರ ಜುಮುಅ ನಮಾಝಿನ ಬಳಿಕ ಬರ್ ದುಬೈ ಅಲ್ ಫರ್ಧಾನ್ ನಿವಾಸದಲ್ಲಿ ನಡೆದ ಕಾರ್ಯಕ್ರಮದಲ್ಲಿ ಕಐಸಿ ಕೇಂದ್ರ ಸಮಿತಿಯ ಅಧ್ಯಕ್ಷರಾದ ಮೊಯಿದೀನ್ ಕುಟ್ಟಿ ಹಾಜಿ ದಿಬ್ಬ ಅಧ್ಯಕ್ಷೆತೆ ವಹಿಸಿದರು. ಕೆಐಸಿ ಗಲ್ಫ್ ಪ್ರತಿನಿಧಿ ಬಹು! ಶಂಸುದ್ದೀನ್ ಹನೀಫಿ ಉಸ್ತಾದರು ಆತ್ಮೀಯವಾಗಿ ಸ್ವಾಗತಿಸಿದರು. ಗೌರವಾಧ್ಯಕ್ಷರಾದ ಸಯ್ಯದ್ ಅಸ್ಗರ್ ಅಲೀ ತಂಙಳ್ ದುವಾ ಮೂಲಕ ಪ್ರಸ್ತುತ ಸಮಾರಂಭಕ್ಕೆ ಚಾಲನೆ ನೀಡಿದರು.
ಬಳಿಕ ಸಯ್ಯದ್ ಅಸ್ಗರ್ ಅಲೀ ತಂಙಳ್, ಮೊಯಿದೀನ್ ಕುಟ್ಟಿ ಹಾಜಿ ದಿಬ್ಬ, ಅಶ್ರಫ್ ಖಾನ್ ಮಾಂತೂರು, ಅಬ್ದುಲ್ ಖಾದರ್ ಬೈತಡ್ಕ, ಸುಲೈಮಾನ್ ಉಸ್ತಾದ್, ಅಬ್ದುಲ್ ರಝಾಕ್ ಸೋಂಪಾಡಿ, ಹನೀಫ್ ಅರಿಯಮೂಲೆ, ಮಹಮ್ಮದ್ ಮಾಡಾವು ರವರು ಕೆಐಸಿ ಕೇಂದ್ರ ಸಮಿತಿ ವತಿಯಿಂದ ಬಹುಮಾನ್ಯ ಎಸ್ ಬಿ ದಾರಿಮಿ, ಕೆ ಎಂ ಎ ಕೊಡುಂಗಾಯಿ ಮತ್ತು ಹಾಜಿ ಮುಸ್ತಫಾ ಕೆಂಪಿಯವರಿಗೆ ಶಾಲು ಹೊದಿಸಿ ಸನ್ಮಾನಿಸಿದರು.
ಸನ್ಮಾನ ಸ್ವೀಕರಿಸಿದ ಬಹುಮಾನ್ಯ ಎಸ್ ಬಿ ದಾರಿಮಿಯವರು ಮಾತನಾಡಿ ಇಸ್ಲಾಮ್ ಒಂಟಿ ಜೀವನವನ್ನು ಕಲಿಸಲಿಲ್ಲ ಒಟ್ಟು ಸೇರಿ ಜೀವಿಸುವುದನ್ನು ಕಲಿಸಿದೆ ಇಮಾಂ ಜಮಾಅತ್ ಮತ್ತು ಜುಮಾ ನಮಾಜ್ ಗಳು ನಮಗೆ ಇದನ್ನು ತಿಲಿಸುತ್ತದೆ. ಸಮುದಾಯ ಸೇವೆಗಾಗಿ ಇಂತಹ ಒಟ್ಟು ಸೇರುವಿಕೆಯು ಬಹಳ ಪುಣ್ಯದ ಕೆಲಸ, ಕರ್ನಾಟಕದಲ್ಲಿ ಮೊತ್ತ ಮೊದಲನೆಯದಾಗಿ ಸಮಸ್ತ ಕೇರಳ ಜಮೀಯತುಲ್ ಉಲಮಾ ಅಧೀನದಲ್ಲಿ ರೂಪುಗೊಂಡ ಕೆಐಸಿ ವಿದ್ಯಾ ಸಂಸ್ಥೆಯ ಕುಟುಂಬದ ಭಾಗ ಇಲ್ಲಿ ಇಷ್ಟೊಂದು ವ್ಯವಸ್ಥಿತ ರೀತಿಯಲ್ಲಿ ಬೆಳೆದಿರುವುದರಲ್ಲಿ ತುಂಬಾ ಸಂತೋಷವಿದೆ ಎಂದು ಹೇಳಿದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಕೆ ಎಂ ಎ ಕೊಡುಂಗಾಯಿಯವರು ಕೆಐಸಿ ಕರ್ನಾಟಕದ ಐಸಿರಿ ಎಂದು ನಮ್ಮ ಮಾಸಿಕ ಪತ್ರಿಕೆಯಲ್ಲಿ ಬರೆದಿದ್ದೇನೆ ಅದರ ಪರಿಪೂರ್ಣತೆಯನ್ನು ಇಂದು ಇಲ್ಲಿ ಕಾಣುತ್ತಿದ್ದೇನೆ. ಮನೆ ಮಠ ಕುಟುಂಬವನ್ನು ತೊರೆದು ಕುಟುಂಬದ ಹೊಟ್ಟೆ ತುಂಬಿಸಲು ಇಲ್ಲಿ ಬಂದು ಅದರಲ್ಲಿ ಸಿಗುವ ಅಲ್ಪ ಸಮಯವನ್ನು ನಮ್ಮ ಸಮುದಾಯದ ಶೈಕ್ಷಣಿಕ ಅಭಿವೃದ್ಧಿಗೆ ಸಹಕರಿಸುವ ನೀವು ಧನ್ಯರು ಎಂದು ಕೆಐಸಿಯ ಗಲ್ಫ್ ರಾಷ್ಟ್ರಗಳ ಕಾರ್ಯಕರ್ತರ ಕೆಲಸಗಳನ್ನು ಕೊಂಡಾಡಿದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಮುಸ್ತಫಾ ಹಾಜಿ ಕೆಂಪಿ ನಾನೊಬ್ಬ ಕೆಐಸಿ ಹಿತೈಷಿ ನೀವು ಕೆಐಸಿಯ ಅಭಿವೃದ್ಧಿಗೆ ತ್ಯಾಗ ಮಾಡಿದ್ದೀರಿ. ಅದರಂತೆ ಸಮುದಾಯದ ಅಭಿವೃದ್ಧಿ ಗೆ ಮುಂದಿನ ಐವತ್ತು ವರ್ಷಗಳಲ್ಲಿ ಏನು ಆಗಬೇಕು ಅದರ ಬಗ್ಗೆ ಚಿಂತಿಸಿ ಕಾರ್ಯಯೋಜನೆ ರೂಪಿಸುವ ಕೆಲಸ ಆಗಬೇಕಿದೆ ಎಂದು ಹೇಳಿದರು.
ಕಾರ್ಯಕ್ರಮದ ಆಕರ್ಷಣೆಯಾದ ಪ್ರಖ್ಯಾತ ಯುವ ವಾಗ್ಮಿ ನೂರುಲ್ ಹುದಾ ಇಸ್ಲಾಮಿಕ್ ಅಕಾಡೆಮಿ ಮಾಡನ್ನೂರ್ ಇದರ ಪ್ರಾಂಶುಪಾಲರಾದ ಅಡ್ವೊಕೇಟ್ ಹನೀಫ್ ಹುದವಿ ದೇಲಂಪಾಡಿ ಯವರು ಮಾತನಾಡಿ ಒಗ್ಗಟ್ಟಾಗಿ ನಿಲ್ಲಲು ಕಳಿಸುತ್ತಿರುವ ಈ ಸ್ಥಾಪನೆಗಳು ನಮಗೆ ವಿಭಾಗಗಳಾಗಿ ಹಂಚಿ ಹೋಗಲು ಕಾರಣವಾಗದಿರಲಿ. ಅಲ್ಲಾಹನ ಆದೇಶ ನಾವು ಸತ್ಕಾರ್ಯಗಳನ್ನು ಮಾಡಬೇಕು ಎಂದು, ಆದ್ದರಿಂದ ನಾವು ಮಾಡಬೇಕಾದದ್ದು ಇಕ್ಲಾಸಿನಿಂದ ಕೂಡಿದ ಸತ್ಕಾರ್ಯಗಳು ಮಾತ್ರ ಅದರ ಫಲಿತಾಂಶವನ್ನು ಮಾಡಲು ನಮಗೆ ಸಾಧ್ಯವಿಲ್ಲ ಅದಕ್ಕೆ ಉತ್ತಮ ಫಲಿತಾಂಶವನ್ನು ಅಲ್ಲಾಹನು ಕೊಡುತ್ತಾನೆ ಎಂದು ಹೇಳಿದರು.
ಪ್ರಸ್ತುತ ಸಮಾರಂಭದಲ್ಲಿ ಕೆಐಸಿ ಕೇಂದ್ರ ಸಮಿತಿ ಪ್ರಮುಖರಾದ ಜನಾಬ್ ಶೆರೀಫ್ ಕಾವು, ರಫೀಕ್ ಆತೂರು, ಅಬ್ಬಾಸ್ ಕೇಕುಡೆ, ಅಬ್ದುಲ್ ಸಲಾಂ ಬಪ್ಪಲಿಗೆ, ಅನ್ವರ್ ಮಣಿಲ, ಬದ್ರುದ್ದೀನ್ ಹೆಂತಾರ್, ಮುಸ್ತಫಾ ಗೂನಡ್ಕ, ಹಮೀದ್ ಮಣಿಲ, ಅಶ್ರಫ್ ಆರ್ತಿಗೆರೆ, ನವಾಝ್ ಬಿಸಿ ರೋಡ್, ಜಬ್ಬಾರ್ ಬೈತಡ್ಕ, ಅಸೀಫ್ ಮರೀಲ್ , ಜಾಬೀರ್ ಬೆಟ್ಟಂಪಾಡಿ , ಅಝೀಝ್ ಸೊಂಪಾಡಿ ಮತ್ತು ಕೆಐಸಿಯ ಎಲ್ಲಾ ವಲಯಗಳ ನಾಯಕರು ಉಪಸ್ಥಿತರಿದ್ದರು. ಕೆಐಸಿ ಕೇಂದ್ರ ಸಮಿತಿ ಕಾರ್ಯದರ್ಶಿ ಅಶ್ರಫ್ ಪರ್ಲಡ್ಕರವರು ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.
Comments are closed.