ಬೆಂಗಳೂರು: ಇದೇ ವಾರ ಬಿಡುಗಡೆಯಾಗ್ತಿರೋ ಬಹುನಿರೀಕ್ಷಿತ ನಾಗರಹಾವು ಚಿತ್ರಕ್ಕೆ ತಮಿಳುನಾಡಿನಲ್ಲಿ ಅಡ್ಡಿ ಎದುರಾಗಿದೆ. ಕಾವೇರಿ ನೀರಿನ ವಿವಾದದ ಹಿನ್ನೆಲೆಯಲ್ಲಿ ಈ ಅಡ್ಡಿ ಉಂಟಾಗಿದೆ.
ತಮಿಳಿಗೆ ಡಬ್ ಆಗಿರೋ ಕನ್ನಡ ಸಿನಿಮಾವನ್ನ ಯಾವುದೇ ಕಾರಣಕ್ಕೂ ತಮಿಳುನಾಡಲ್ಲಿ ರಿಲೀಸ್ ಮಾಡಬಾರದು ಎಂದು ತಮಿಳು ಸಂಘಟನೆಗಳು ಪಟ್ಟು ಹಿಡಿದಿವೆ. ಕನ್ನಡ, ತೆಲುಗು ಹಾಗೂ ತಮಿಳಿನಲ್ಲಿ ನಾಗರಹಾವು ಚಿತ್ರ ತಯಾರಾಗಿದ್ದು, ತಮಿಳು ಹಕ್ಕನ್ನು ಥೆಂಡಲ್ ಫಿಲ್ಮ್ಂ 15 ಕೋಟಿ ರೂಪಾಯಿಗೆ ಖರೀದಿಸಿತ್ತು. ಈಗ ಚಿತ್ರ ಬಿಡುಗಡೆಗೆ ವಿರೋಧ ವ್ಯಕ್ತವಾಗಿದ್ದರಿಂದ ಹಣವನ್ನ ವಾಪಸ್ ಕೊಡೋಕೆ ಹಂಚಿಕೆ ಪಡೆದಿರೋ ಸಂಸ್ಥೆ ನಿರ್ಮಾಪಕರನ್ನ ದುಂಬಾಲು ಬಿದ್ದಿದೆ.
ಈ ಬಗ್ಗೆ ಪ್ರತಿಕ್ರಿಯಿಸಿರೋ ನಟಿ ರಮ್ಯಾ, ಕಾವೇರಿ ವಿವಾದ ಹಾಗೂ ಸಿನಿಮಾ ಎರಡೂ ಪ್ರತ್ಯೇಕ. ಸಿನಿಮಾ ಮಾಡುವುದು ಮನರಂಜನೆಗಾಗಿ. ಎರಡನ್ನೂ ಮಿಕ್ಸ್ ಮಾಡುವುದು ಸರಿಯಲ್ಲ. ಆದರೂ ಅವರ ಅಭಿಪ್ರಾಯಗಳಿಗೆ ಬೆಲೆ ಕೊಡಬೇಕು. ಇಟ್ಸ್ ಓಕೆ ಎಂದಿದ್ದಾರೆ. ನಿರ್ಮಾಪಕ ಸಾಜಿದ್ ಖುರೇಶ್ ಈ ಬಗ್ಗೆ ಮಾತನಾಡಿ, ಸಿನಿಮಾ ಬಿಡುಗಡೆ ಮಾಡೋಕೆ ಒಪ್ಪಿಕೊಳ್ಳಬೇಕು ಎನ್ನುವುದು ನನ್ನ ಮನವಿ. ನಾನು ತಮಿಳು ಫಿಲಂ ಚೇಂಬರ್ ಜೊತೆಗೆ ಈ ಬಗ್ಗೆ ಮಾತನಾಡುತ್ತೇನೆ ಅಂತ ಹೇಳಿದ್ರು.
ನಾಗರಹಾವು ಸಿನಿಮಾದಲ್ಲಿ ವಿಷ್ಣುವರ್ಧನ್ ಅವರನ್ನ ಡಿಜಿಟಲ್ ಹೆಡ್ ರಿಪ್ಲೇಸ್ಮೆಂಟ್ ಟೆಕ್ನಾಲಜಿ ಮೂಲಕ ತೋರಿಸಲಾಗಿದೆ. ರಮ್ಯಾ ಸೇರಿದಂತೆ ಸ್ಯಾಂಡಲ್ವುಡ್ನ ಖ್ಯಾತ ನಟ ನಟಿಯರು ಕೂಡ ಚಿತ್ರದಲ್ಲಿದ್ದು ಇದೇ ಶುಕ್ರವಾರ ಸಿನಿಮಾ ರಿಲೀಸ್ ಆಗ್ತಿದೆ.
ಇನ್ನು ವಿಷ್ಣು ಆಪ್ತಗೆಳೆಯ ಸೂಪರ್ ಸ್ಟಾರ್ ರಜನಿಕಾಂತ್ ಇವತ್ತು ವಿಶೇಷ ಷೋನಲ್ಲಿ ನಾಗರಹಾವು ಚಿತ್ರ ವೀಕ್ಷಿಸಲಿದ್ದಾರೆ ಎಂದು ತಿಳಿದುಬಂದಿದೆ.
Comments are closed.