ಕ್ರೀಡೆ

ಕಾಂಗ್ರೆಸ್​ ನಾಯಕ ಜೈ ಭಗವಾನ್ ಶರ್ಮಾ ಅವರ ಪುತ್ರಿ ಶೀತಲ್ ಜೊತೆ ಯೋಗೇಶ್ವರ್ ದತ್ ನಿಶ್ಚಿತಾರ್ಥ

Pinterest LinkedIn Tumblr

congreನವದೆಹಲಿ(ಅ.11): 2012ರ ಲಂಡನ್ ಒಲಿಂಪಿಕ್ಸ್ನಲ್ಲಿ ಕಂಚಿನ ಪದಕ ಗೆದ್ದಿದ್ದ ಭಾರತದ ಭರವಸೆಯ ಕುಸ್ತಿ ಪಟು ಯೋಗೇಶ್ವರ್ ದತ್ ಅವರ ನಿಶ್ಚಿತಾರ್ಥ ಕಾಂಗ್ರೆಸ್ ನಾಯಕನ ಪುತ್ರಿಯೊಂದಿಗೆ ನೆರವೆರಿದೆ.
ಕಾಂಗ್ರೆಸ್ ನಾಯಕ ಜೈ ಭಗವಾನ್ ಶರ್ಮಾ ಅವರ ಪುತ್ರಿ ಶೀತಲ್ ಜೊತೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ದತ್ ಕುಟುಂಬದ ಆಪ್ತರು ಹಾಗೂ ಕೆಲವು ಕಾಂಗ್ರೆಸ್ ನಾಯಕರು ಭಾಗವಹಿಸಿದ್ದರು.
ಭಾರತೀಯ ಕುಸ್ತಿ ಒಕ್ಕೂಟದ ಅಧ್ಯಕ್ಷ ಬ್ರಿಜಿ ಭೂಷಣ್ ಶರಣ್ , ಎಎಪಿ ಹರಿಯಾಣ್ ರಾಜ್ಯ ಮುಖ್ಯಸ್ಥ ನವೀನ್ ಜೈಹಿಂದ್ ಸಹ ನಿಶ್ಚಿತಾರ್ಥ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಈ ಯುವ ಜೋಡಿ ಮುಂದಿನ ವರ್ಷ ಜನವರಿ 16ರಂದು ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದೆ.

Comments are closed.