ಚಿಕ್ಕಮಗಳೂರು: ಎಷ್ಟೋ ಮಂದಿಗೆ ಡಾ. ರಾಜ್‍ಕುಮಾರ್ ಸತ್ತ ಮೇಲೆ ದೇವರಾದ್ರು. ಆದ್ರೆ ವೃದ್ಧೆಯೊಬ್ಬರಿಗೆ ಕಳೆದ 45 ವರ್ಷಗಳಿಂದ ಡಾ. ರಾಜ್ ದೇವರಾಗಿದ್ದಾರೆ. ಅವರಿಗೆ ಪೂಜೆ ಮಾಡಿದ್ರೆ ಕಷ್ಟ ಬರೋದಿಲ್ಲ ಅಂತಾ ಈ ತಾಯಿ 45 ವರ್ಷಗಳಿಂದ ರಾಜ್ ಕುಮಾರ್ ಅವರನ್ನ ಪೂಜೆ ಮಾಡ್ತಿದ್ದಾರೆ.
ಚಿಕ್ಕಮಗಳೂರು ಜಿಲ್ಲೆಯ ಮಳಲೂರಿ ನಿವಾಸಿಯಾದ 70 ವರ್ಷ ವಯಸ್ಸಿನ ಲಕ್ಷ್ಮಮ್ಮ ಡಾ. ರಾಜ್ ಅಗಲಿದ ಬಳಿಕ ಪೂಜೆ ಮಾಡ್ತಿಲ್ಲ. ಬದಲಾಗಿ ರಾಜ್‍ಕುಮಾರ್ ಅವರು ಬದುಕಿದ್ದಾಗಿನಿಂದಲೂ ದಿನನಿತ್ಯ ರಾಜ್ ಫೋಟೋಗೆ ಪೂಜೆ ಮಾಡ್ತಿದ್ದಾರೆ. ಲಕ್ಷ್ಮಮ್ಮ ಅವರಿಗೆ ಈ ಫೋಟೋವನ್ನ 45 ವರ್ಷಗಳ ಹಿಂದೆ ಬೆಂಗಳೂರಲ್ಲಿ ಯಾರೋ ಕೊಟ್ಟಿದ್ರಂತೆ. ಅದಾದ ಮೇಲೆ ರಾಜ್‍ಕುಮಾರ್ ಕನಸಿನಲ್ಲಿ ಬಂದಿದ್ರಂತೆ. ಅಂದಿನಿಂತ ರಾಜ್ ಫೋಟೋಗೆ ಪ್ರತಿದಿನ ಈ ವೃದ್ಧೆ ಆರತಿ ಬೆಳಗ್ತಿದ್ದಾರೆ. ರಾಜ್‍ಕುಮಾರ್ ಅವರನ್ನ ಅವರ ಕುಟುಂಬಕ್ಕಿಂತಲೂ ಹೆಚ್ಚಾಗಿ ಈ ತಾಯಿ ಪ್ರೀತಿಸಿ ಪೂಜಿಸ್ತಾರೆ ಅಂದ್ರೂ ತಪ್ಪಿಲ್ಲ. ಹಣ್ಣು-ಕಾಯಿ ತರೋದಕ್ಕೆ ದುಡ್ಡಿಲ್ಲದ್ದಿದ್ರೆ ಕಡೇ ಪಕ್ಷ ದಿನಂಪ್ರತಿ ರಾಜ್ ಫೋಟೋಗೆ ಒಂದು ಗಂಧದ ಕಡ್ಡಿಯಾನ್ನಾದ್ರು ಹಚ್ಚುತ್ತಾರೆ.
ವರನಟನ ಕಟ್ಟಾ ಅಭಿಮಾನಿಯಾಗಿರೋ ಲಕ್ಷ್ಮಮ್ಮ, ಅಣ್ಣಾವ್ರ ಸಾಕಷ್ಟು ಸಿನಿಮಾಗಳನ್ನ ನೋಡಿದ್ದಾರಂತೆ. ಕೂಲಿ ಮಾಡಿ ಜೀವನ ಸಾಗಿಸ್ತಿರೋ ಲಕ್ಷ್ಮಮ್ಮ ಅವರಿಗೆ ರಾಜ್ ಸಮಾಧಿಗೆ ಭೇಟಿ ನೀಡಿ ಅವರ ಪತ್ನಿ ಪಾರ್ವತಮ್ಮ ರಾಜ್ ಕುಮಾರ್ ಹಾಗೂ ಮಕ್ಕಳನ್ನ ಭೇಟಿಯಾಗೋ ಆಸೆಯಿದೆ. ಆದರೆ ವೃದ್ಧೆಯ ಆಸೆಗೆ ಬಡತನ ಅಡ್ಡಿಬಂದಿದೆ. ಒಟ್ಟಾರೆ ಡಾ.ರಾಜ್ ಒಂದು ದಂತಕಥೆ ಅನ್ನೋದಕ್ಕೆ ವರ್ಷದ 365 ದಿನವೂ ಅಣ್ಣಾವ್ರನ್ನ ಪೂಜಿಸ್ತಿರೋ ಈ ಭಕ್ತೆಯೇ ಸಾಕ್ಷಿ.
Comments are closed.