ಕ್ರೀಡೆ

ದ್ವಿಶತಕ ಸಿಡಿಸಿದ ವಿರಾಟ್‌ ಕೋಹ್ಲಿ

Pinterest LinkedIn Tumblr

virat-kohli_reuters_m3ಇಂದೋರ್: ಭಾರತ ಮತ್ತು ನ್ಯೂಜಿಲೆಂಡ್‌ ನಡುವಿನ ಮೂರನೇ ಟೆಸ್ಟ್‌ ಮೊದಲ ಇನಿಂಗ್ಸ್‌ನಲ್ಲಿ ವಿರಾಟ್‌ ಕೋಹ್ಲಿ ದ್ವಿಶತಕ ಗಳಿಸಿ ಮಿಂಚಿದ್ದಾರೆ.

ಭಾನುವಾರ ಎರಡನೇ ದಿನದಾಟ ಮುಂದುವರಿಸಿದ ವಿರಾಟ್‌ ಕೋಹ್ಲಿ – ರಹಾನೆ ಜೋಡಿ ವಿಕೆಟ್‌ ಒಪ್ಪಿಸದೇ ಚುರುಕಿನ ಆಟ ಆಡುವ ಮೂಲಕ ಬೃಹತ್‌ ಮೊತ್ತವನ್ನು ಕಲೆಹಾಕಿದ್ದಾರೆ.

ಎರಡನೇ ದಿನದ ಚಹಾ ವಿರಾಮದ ವೇಳೆ ಭಾರತ ಮೊದಲ ಇನಿಂಗ್ಸ್‌ 149 ಓವರ್‌ಗಳಲ್ಲಿ 467/4 ರನ್‌ ಗಳಿಸಿದೆ.

ಭಾರತದ ಪರ ಮುರಳಿ ವಿಜಯ್‌ 10, ಗೌತಮ್‌ ಗಂಭೀರ್‌ 29, ಪೂಜಾರ 41, ವಿರಾಟ್‌ ಕೋಹ್ಲಿ 211 , ರಹಾನೆ ಅಜೇಯ 167 , ರೋಹಿತ್‌ ಶರ್ಮ ಅಜೇಯ 1 ರನ್‌ ಗಳಿಸಿದ್ದಾರೆ.

ನ್ಯೂಜಿಲೆಂಡ್‌ ಪರ ಜೀತನ್ ಪಟೇಲ್ 2 , ಟ್ರೆಂಟ್ ಬೌಲ್ಟ್, ಷೆಲ್ ಸ್ಯಾಂಟನರ್ ತಲಾ ಒಂದು ವಿಕೆಟ್‌ ಪಡೆದಿದ್ದಾರೆ.

Comments are closed.