ಮುಂಬೈ: ಸುಶಾಂತ್ ಸಿಂಗ್ ರಜಪೂತ್ ಅಭಿನಯದ ‘ಎಂ.ಎಸ್. ದೋನಿ: ದಿ ಅನ್ಟೋಲ್ಡ್ ಸ್ಟೋರಿ’ ಬಾಲಿವುಡ್ ಸಿನಿಮಾ ದೋನಿ ಅವರ ವೃತ್ತಿ ಬದುಕಿನ ಕಥೆಯನ್ನು ಒಳಗೊಂಡಿದೆ.
ಸೆ. 30 ರಂದು ವಿಶ್ವದದ್ಯಾಂತ 61 ರಾಷ್ಟ್ರಗಳಲ್ಲಿ ತೆರೆ ಕಂಡ ‘ಎಂ.ಎಸ್. ದೋನಿ: ದಿ ಅನ್ಟೋಲ್ಡ್ ಸ್ಟೋರಿ’ ಚಿತ್ರ ಇದುವರೆಗೂ 103.4 ಕೋಟಿ ಹಣ ಗಳಿಸಿದೆ ಎಂದು ಚಿತ್ರ ತಂಡ ತಿಳಿಸಿದೆ.
ದೋನಿ ಅವರ ಕ್ರಿಕೆಟ್ ಆಟ–ಹೋರಾಟ ಕ್ರಿಕೆಟ್ ಅಭಿಮಾನಿಗಳಿಗೆ ತಿಳಿದಿದೆ. ತಿಳಿದ ಕಥೆಯನ್ನು ತೆರೆ ಮೇಲೆ ರಸವತ್ತಾಗಿ ಅಭಿನಯಿಸುವುದು ದೊಡ್ಡ ಸವಾಲಗಿತ್ತು. ಚಿತ್ರ ಬಿಡುಗಡೆಯಾಗಿ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಗಳಿಸುವ ಮೂಲಕ ಯಶಸ್ಸುಗಳಿಸಿದೆ ಎಂದು ‘ಫಾಕ್ಸ್ ಸ್ಟಾರ್ ಸ್ಟುಡಿಯೋಸ್’ ಸಿನಿಮಾ ನಿರ್ಮಾಣ ಸಂಸ್ಥೆಯ ಸಿಇಒ ವಿಜಯ್ ಸಿಂಗ್ ತಿಳಿಸಿದ್ದಾರೆ.
‘ಎಂ.ಎಸ್. ದೋನಿ: ದಿ ಅನ್ಟೋಲ್ಡ್ ಸ್ಟೋರಿ’ ಚಿತ್ರವನ್ನು ನೀರಜ್ ಪಾಂಡೆ ನಿರ್ದೇಶಿಸಿದ್ದು, ಸುಶಾಂತ್ ಸಿಂಗ್ ರಜಪೂತ್, ಅನುಪಮ್ ಖೇರ್, ಭೂಮಿಕ ಚಾವ್ಲಾ, ಹಾಗೂ ದಿಶಾ ಪಟನಿ ಅವರು ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.