ಕೊಪ್ಪಳ: ಮಳೆಗಾಲದಲ್ಲೂ ಭೀಕರ ಬರಕ್ಕೆ ತುತ್ತಾಗಿದ್ದ ಕೊಪ್ಪಳದಲ್ಲಿ ಶುಕ್ರವಾರ ಸತತ 3 ಗಂಟೆ ಮಳೆರಾಯ ಭೋರ್ಗರೆದಿದ್ದಾನೆ. ಕಳೆದ ಎರಡು ತಿಂಗಳಿನಿಂದ ಕಾಣೆಯಾಗಿದ್ದ ಮಳೆ ಜೋರಾಗಿ ಸುರಿದ ಕಾರಣ ನಗರದ ತಗ್ಗು ಪ್ರದೇಶಗಳೆಲ್ಲ ಕಾಲುವೆಯಾಗಿ ಮಾರ್ಪಟ್ಟಿತ್ತು.
ಧಾರಾಕಾರ ಮಳೆಗೆ ಕೊಪ್ಪಳ ನಗರದ ವಾರ್ಡ್ ನಂಬರ್ 6ರ ಸೌಲಾನ್ಪೂರ್ ಬಡಾವಣೆಯಲ್ಲಿ 10ಕ್ಕೂ ಹೆಚ್ಚು ಮನೆಗಳಿಗೆ ನೀರು ನುಗ್ಗಿ ಮನೆಗಳಲ್ಲಿದ್ದ ದವಸಧಾನ್ಯಗಳು ನೀರಿನಲ್ಲಿ ಕೊಚ್ಚಿಹೋಗಿದೆ.
ಜವಾಹರ್ ರಸ್ತೆಯಲ್ಲಿ ಮಳೆಯಿಂದಾಗಿ ನೋಡು ನೋಡ್ತಿದ್ದಂತೇ ಮನೆ ಕುಸಿದುಬಿದ್ದಿದೆ. ಎಂ.ಎ.ಮುಜೀಬ್ ಸಿದ್ದೀಕಿ ಎಂಬುವರ ಮನೆ ಮಳೆಯ ಹೊಡೆತಕ್ಕೆ ನೋಡ ನೋಡುತ್ತಲೇ ಬಿದ್ದು ಹೋಯಿತು. ಆದರೆ ಮನೆಯಲ್ಲಿದ್ದವರು ಪ್ರಾರ್ಥನೆಗೆ ತೆರೆಳಿದ್ದರಿಂದ ಯಾವ ಪ್ರಾಣ ಹಾನಿ ಸಂಭವಿಸಿಲ್ಲ. ಕೊಪ್ಪಳ ಕೇಂದ್ರ ಬಸ್ ನಿಲ್ದಾಣ ಎದುರುಗಡೆ ಇರುವ ಮಾಲಿ ಪಾಟೀಲ್ ಕಾಂಪ್ಲೆಕ್ಸ್ನಲ್ಲಿರುವ ಅಂಗಡಿಗಳಿಗೆ ನೀರು ನುಗ್ಗಿತ್ತು.
ಚಿಕ್ಕಬಳ್ಳಾಪುರದ ಗೌರಿಬಿದನೂರಿನ ಗೌಡಗೆರೆ ಗ್ರಾಮದಲ್ಲಿ ಭಾರೀ ಗಾಳಿ ಸಹಿತ ಬಿದ್ದ ಮಳೆಗೆ ಮನೆಯ ಮೇಲ್ಛಾವಣಿ ಕುಸಿದು ಬಿದ್ದು ವ್ಯಕ್ತಿಯೊಬ್ಬರು ಸಾವನ್ನಪ್ಪಿದ್ದಾರೆ. ಮನೆಯಲ್ಲಿ ಮಲಗಿದ್ದ 60 ವರ್ಷ ಅಂಜಿನಪ್ಪ ಅವರ ಮೇಲೆ ಸಿಮೆಂಟಿನ ಶೀಟ್ ಬಿದ್ದಿದೆ.
Comments are closed.