https://youtu.be/CCdzZRkM2SE
ಉರಿ ದಾಳಿ ಬಳಿಕ ಪಾಕಿಸ್ತಾನ ಹಾಗೂ ಭಾರತದಲ್ಲಿ ಟ್ವೀಟ್ ವಾರ್ ಗಳು ಶುರವಾಗಿದ್ದು. ಈ ಮಧ್ಯೆ ತಂದೆಯ ಕೈಯಲ್ಲಿದ್ದ ಎಕೆ-47 ಗನ್ ನಿಂದ ಮಗಳು ಗುಂಡು ಹಾರಿಸಿ ಪ್ರಧಾನಮಂತ್ರಿ ನರೇಂದ್ರ ಮೋದಿಗೆ ಎಚ್ಚರಿಕೆ ನೀಡುವಂತ ಮಾತುಗಳನ್ನಾಡಿದ್ದಾಳೆ.
ಈ ವಿಡಿಯೋದಲ್ಲಿ ಬಾಲಕಿಯ ಮಾತುಗಳು ಸ್ಪಷ್ಟವಾಗಿಲ್ಲ. ಆದರೆ ಆಕೆಯ ಮಾತಿನ ಮಧ್ಯದಲ್ಲಿ ಮೋದಿ ಮತ್ತು ಭಾರತ ಎಂಬ ಪದಗಳು ವ್ಯಕ್ತವಾಗಿರುವುದು ಗಮನಿಸಬಹುದು. ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಇತ್ತೀಚೆಗಷ್ಟೇ ಜಮ್ಮು ಮತ್ತು ಕಾಶ್ಮೀರದ ಉರಿ ಸೇನಾ ಶಿಬಿರದ ಮೇಲೆ ಉಗ್ರರು ದಾಳಿ ನಡೆಸಿ 19 ಯೋಧರ ಸಾವಿಗೆ ಕಾರಣರಾಗಿದ್ದರು. ಇದಾದ ಬಳಿಕ ಪಾಕಿಸ್ತಾನ ಮತ್ತು ಭಾರತದಲ್ಲಿ ನಡುವಿನ ಬಾಂಧವ್ಯ ಅಳಸಿದ್ದು ಒಬ್ಬರ ಮೇಲೊಬ್ಬರು ಕೆಸರೆರೆಚಾಡಿಕೊಳ್ಳುತ್ತಿದ್ದಾರೆ.
ಭಾರತ ಹಾಗೂ ಪ್ರಧಾನಿ ಬಗ್ಗೆ ಮಾತನಾಡಿರುವ ಈ ವಿಡಿಯೋವನ್ನು ಹಾಕಿಕೊಂಡಿದ್ದಾರೆ. ಜತೆಗೆ ಬಾಲಕಿಯ ತಂದೆ ಮಕ್ಕಳಲ್ಲಿ ಇಂತಹ ದ್ವೇಷ ಭಾವನೆ ತುಂಬುವುದಕ್ಕಿಂತ ಅವರ ಕೈಗೆ ಗನ್ ಬದಲಾಗಿ ಪೇನ್ ನೀಡಿ ಎಂದು ಬರೆದುಕೊಂದಿದ್ದಾರೆ.
Comments are closed.