ಅಂತರಾಷ್ಟ್ರೀಯ

ಬಾಂಗ್ಲಾ ಮೃಗಾಲಯದಲ್ಲಿ ಮಾಂಸದ ಕೇಕ್ ಕತ್ತರಿಸಿ ಸಿಂಹಗಳ ಮದುವೆ ! ಇದೇನು ವಿಷಯ ಅಂದು ಕೊಂಡರೆ ಮುಂದೆ ಓದಿ…

Pinterest LinkedIn Tumblr

2

ಢಾಕಾ: ಬಾಂಗ್ಲಾದೇಶದಲ್ಲಿ ಮೃಗಾಲಯವೊಂದರ ಸಿಬ್ಬಂದಿಗಳು 2 ಸಿಂಹಗಳಿಗೆ ಮದುವೆ ಮಾಡಿಸಿ ಅಚ್ಚರಿ ಮೂಡಿಸಿದ್ದಾರೆ.

ಬಾಂಗ್ಲಾದೇಶದ ಚಿತ್ತಗಾಂಗ್‍ನ ಮೃಗಾಲಯವೊಂದರಲ್ಲಿ ಸಿಂಹಗಳಿಗೆ ಮದುವೆ ಏರ್ಪಡಿಸಲಾಗಿತ್ತು. ಇದಕ್ಕಾಗಿ ಹೃದಯದ ಆಕಾರದಲ್ಲಿ ಮಾಂಸದ ಕೇಕ್ ತಯಾರಿಸಲಾಗಿತ್ತು. ಮೃಗಾಲಯಕ್ಕೆ ಹೆಚ್ಚಿನ ಪ್ರವಾಸಿಗರು ಬರಲಿ ಎಂಬ ಕಾರಣಕ್ಕೆ ಹಾಗೂ ಸಿಂಹಗಳ ಮಿಲನಕ್ರಿಯೆಗೆ ಪ್ರೋತ್ಸಾಹ ನೀಡುವ ಸಲುವಾಗಿ ಮದುವೆ ಪಾರ್ಟಿ ಏರ್ಪಡಿಸಲಾಗಿತ್ತು.

4

Lion and Lioness (Panthera leo) snuggle affectionately in the shade of a Camelthorn, Kalahari desert, South Africa

1

ಇದೊಂದು ವಿನೂತನ ಪಾರ್ಟಿ ಎಂಬುದರಲ್ಲಿ ಯಾವುದೇ ಸಂಶಯವಿಲ್ಲ. ಇದಕ್ಕೆ ಮತ್ತಷ್ಟು ಮೆರುಗು ನೀಡಲು ಮೃಗಾಲಯದ ತುಂಬಾ ಅಲಂಕಾರ ಮಾಡಿ ಸಿಂಹ ಹಾಗೂ ಸಿಂಹಿಣಿಯ ಸ್ವಾಗತ ಮಾಡಿದೆವು ಅಂತ ಚಿತ್ತಗಾಂಗ್ ಜಿಲ್ಲೆಯ ಸರ್ಕಾರಿ ಅಧಿಕಾರಿ ಮೆಸ್ಬಾ-ಉದ್ದೀನ್ ಪತ್ರಿಕೆಯೊಂದಕ್ಕೆ ತಿಳಿಸಿದ್ದಾರೆ.

ಸಂತಾನೋತ್ಪತ್ತಿಗಾಗಿ ಬಾದ್‍ಷಾ ಎಂಬ ಹೆಸರಿನ ಸಿಂಹವನ್ನ ರಂಗ್‍ಪುರ್ ಮೃಗಾಲಯದಿಂದ ತಂದು ಅದಕ್ಕೆ ನಭಾ ಅಂತ ಮರುನಾಮಕರಣ ಮಾಡಿ, ಹೆಣ್ಣು ಸಿಂಹ ನೋವಾದೊಂದಿಗೆ ಇರಿಸಲಾಗಿದೆ ಎಂದು ಮೆಸ್ಬಾ ಹೇಳಿದ್ದಾರೆ.

ಶಾಲಾ ಮಕ್ಕಳಿಗಾಗಿ ಈ ಸಿಂಹಗಳ ಪ್ರೀ ವೆಡ್ಡಿಂಗ್ ಪಾರ್ಟಿ ಕೂಡ ಆಯೋಜಿಸಲಾಗಿತ್ತು. ಮದುವೆ ದಿನದಂದು 10 ಕೆಜಿ ತೂಕದ ಮಾಂಸದ ಕೇಕ್ ತಯಾರಿಸಲಾಗಿತ್ತು. ಮೊಟ್ಟೆ, ಕೋಳಿ ಮಾಂಸ, ಬೀಫ್ ಮತ್ತು ಫ್ರೈ ಮಾಡಿದ ಲಿವರ್ ಬಳಸಿ ಮಾಂಸದ ಕೇಕ್ ತಯಾರಿಸಲಾಗಿತ್ತು. ಈ ಮದುವೆ ಸಮಾರಂಭಕ್ಕೆ ಸುಮಾರು 400 ಮಂದಿ ಅತಿಥಿಗಳು ಆಗಮಿಸಿದ್ದರು.

Comments are closed.