
ಚೆನ್ನೈ: ಎಂಎಸ್ ಧೋನಿ: ದಿ ಅನ್ ಟೋಲ್ಡ್ ಸ್ಟೋರಿ ಚಿತ್ರದ ಪ್ರಚಾರದಲ್ಲಿ ಮಗ್ನರಾಗಿರುವ ಟೀಂ ಇಂಡಿಯಾ ಸೀಮಿತ ಓವರ್ ಗಳ ನಾಯಕ ಎಂಎಸ್ ಧೋನಿ ತಮಿಳು ಚಿತ್ರರಂಗದ ಸೂಪರ್ ಸ್ಟಾರ್ ರಜನಿಕಾಂತ್ ರನ್ನು ಭೇಟಿಯಾಗಿದ್ದಾರೆ.
ರಜನಿಕಾಂತ್ ರನ್ನು ಭೇಟಿ ಮಾಡಿದ ಧೋನಿ ಹಾಗೂ ಚಿತ್ರದಲ್ಲಿ ಧೋನಿ ಪಾತ್ರ ಮಾಡಿರುವ ನಟ ಸುಶಾಂತ್ ಸಿಂಗ್ ರಜಪೂತ್ ಎಂಎಸ್ ಧೋನಿ ತಮಿಳು ಅವತರಣಿಕೆಯನ್ನು ಪರಿಚಯಿಸಿದರು.
ಎಂಎಸ್ ಧೋನಿ: ದಿ ಅನ್ ಟೋಲ್ಡ್ ಸ್ಟೋರಿ ಚಿತ್ರ ತೆರೆಗೆ ಬರಲು ಸಿದ್ಧವಾಗಿದೆ. ಚಿತ್ರದ ಟ್ರೈಲರ್ ಬಿಡುಗಡೆಯಾಗಿದ್ದು ಕುತೂಹಲ ಕೆರಳಿಸಿದೆ.
Comments are closed.