ಮುಂಬೈ: ಅಸ್ವಾಭಾವಿಕ ಸಂಭೋಗ ಬೇಡವೆಂದಿದಕ್ಕೆ ದುರುಳ ಪತಿಯೊಬ್ಬ ಗರ್ಭಿಣಿ ಪತ್ನಿಯ ಮೇಲೆ ಹಲ್ಲೆ ಮಾಡಿದ ಹೇಯ ಘಟನೆ ಮುಂಬೈನಲ್ಲಿ ನಡೆದಿದೆ.
ಪೂರ್ವ ಕಲ್ಯಾಣ್ನ ರಾಘವನಗರದಲ್ಲಿ ಈ ಕೃತ್ಯವನ್ನೆಸಗಲಾಗಿದ್ದು 29 ವರ್ಷದ ಪೀಡಿತೆ ತನ್ನ ಪತಿ ಗಜಾನನ ಬಂಗಾರ್ ವಿರುದ್ಧ ಕೊಲ್ಸೆವಾಡಿ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದ್ದಾಳೆ.
ವರದಿಗಳ ಪ್ರಕಾರ ಮಹಿಳೆ ಗರ್ಭಿಣಿಯಾಗಿದ್ದು ಆಕೆಯ ಪತಿ ಅಸ್ವಾಭಾವಿಕ ಲೈಂಗಿಕ ಕ್ರಿಯೆಗಾಗಿ ಬಲವಂತ ಮಾಡುತ್ತಿದ್ದ. ಆಕೆ ವಿರೋಧಿಸಿದ್ದಕ್ಕೆ ಆತ ತನ್ನ ಸಂಬಂಧಿಗಳಾದ ಭಾಗ್ಯಶ್ರಿ ಮತ್ತು ಓಂಪ್ರಕಾಶ್ ಜತೆ ಸೇರಿ ಹಲ್ಲೆ ನಡೆಸಿದ್ದಾನೆ.
ಕೋಪದ ಭರದಲ್ಲಿ ಪತಿ ನನ್ನ ತಲೆಯನ್ನು ಗೋಡೆಗೆ ಬಲವಾಗಿ ಗುದ್ದಿದ ಎಂದಾಕೆ ದೂರಿನಲ್ಲಿ ತಿಳಿಸಿದ್ದಾಳೆ. ಆತನ ದಾಳಿಯಿಂದ ತತ್ತರಿಸಿದ ಆಕೆಯ ತಲೆ ಮತ್ತು ಮೂಗಿಗೆ ಗಾಯಗಳಾಗಿವೆ. ನಿರಂತರ ಹಲ್ಲೆಯನ್ನು ಸಹಿಸಿಕೊಂಡ ಆಕೆ ಇತ್ತೀಚಿಗೆ ತನ್ನ ಸಂಬಂಧಿಕರ ಬಳಿ ಎಲ್ಲವನ್ನು ಹೇಳಿಕೊಂಡಿದ್ದಾಳೆ
ಆತನ ಲೈಂಗಿಕ ಆಕಾಂಕ್ಷೆಗಳನ್ನು ಈಡೇರಿಸದಿದ್ದರೆ ಇನ್ನೊಂದು ಹುಡುಗಿಯ ಜತೆ ಮದುವೆ ಮಾಡಿಸುವುದಾಗಿ ಸಹ ಅವರು ಆಕೆಗೆ ಬೆದರಿಕೆ ಒಡ್ಡಿದ್ದಾರೆ. ಮೂವರು ಆರೋಪಿಗಳ ವಿರುದ್ಧ ಪ್ರಕರಣ ದಾಖಲಾಗಿದ್ದು ತನಿಖೆಯನ್ನು ಆರಂಭಿಸಲಾಗಿದೆ. ಅವರ ಹಿಂಸೆಯಿಂದ ಆಕೆಗೆ ಗರ್ಭಪಾತವಾಗುವ ಸಾಧ್ಯತೆಗಳು ಸಹ ಇದ್ದವು ಎಂದು ಅಧಿಕಾರಿ ತಿಳಿಸಿದ್ದಾರೆ.
Comments are closed.