ಕರಾವಳಿ

ಡಿಕೆಎಸ್ಸಿ 20ನೇ ವಾರ್ಷಿಕೋತ್ಸವ : 20 ಮಂದಿ ಮಹಿಳೆಯರಿಗೆ ಹೊಲಿಗೆ ಯಂತ್ರ ಹಾಗೂ ಐದು ಮಂದಿಗೆ ತಳ್ಳು ಗಾಡಿ ವಿತರಣೆ

Pinterest LinkedIn Tumblr

sunni-center_progrm_1

ಮಂಗಳೂರು, ಸೆ. 22: ದಕ್ಷಿಣ ಕರ್ನಾಟಕ ಸುನ್ನೀ ಸೆಂಟರ್ (ಡಿಕೆಎಸ್ಸಿ) 20ನೇ ವಾರ್ಷಿಕೋತ್ಸವ ಸಮಾರಂಭ ಇಂದು ಮಂಗಳೂರಿನ ಪುರಭವನದಲ್ಲಿ ನಡೆಯಿತು. ಉಡುಪಿ ಖಾಝಿ ಬೇಕಲ್ ಪಿ.ಎಂ. ಇಬ್ರಾಹೀಂ ಮುಸ್ಲಿಯಾರ್ ಸಮಾರಂಭವನ್ನು ಉದ್ಘಾಟಿಸಿ,ಆಶೀರ್ವಚನ ನೀಡಿದರು.

ಮುಸ್ಲಿಂ ಸಮುದಾಯವು ಮಕ್ಕಳಿಗೆ ಶಿಕ್ಷಣ ನೀಡುವ ಬಗ್ಗೆ ಹೆಚ್ಚಿನ ಮುತುವರ್ಜಿ ವಹಿಸಬೇಕು ಎಂಬ ನೆಲೆಯಲ್ಲಿ ದಕ್ಷಿಣ ಕರ್ನಾಟಕ ಸುನ್ನಿ ಸೆಂಟರ್ ನೇತೃತ್ವದಲ್ಲಿ ಆರಂಭಗೊಂಡ ಶಿಕ್ಷಣ ಸಂಸ್ಥೆಗಳು ಕಳೆದ 20 ವರ್ಷಗಳಲ್ಲಿ ತನ್ನ ಉದ್ದೇಶವನ್ನು ಈಡೇರಿಸುವಲ್ಲಿ ಸಫಲತೆಯ ಹೆಜ್ಜೆಯನ್ನಿರಿಸಿದೆ.ಮಾನವನೊಬ್ಬ ಧಾರ್ಮಿಕ ಶಿಕ್ಷಣದ ಜತೆ ಲೌಕಿಕ ಶಿಕ್ಷಣವನ್ನು ಪಡೆದಾಗ ಮಾತ್ರ ಸಮಾಜದಲ್ಲಿ ನೈಜ ಮಾನವನಾಗಲು ಸಾಧ್ಯ ಎಂದು ಅವರು ಹೇಳಿದರು.

sunni-center_progrm_2 sunni-center_progrm_3 sunni-center_progrm_4 sunni-center_progrm_5 sunni-center_progrm_6 sunni-center_progrm_7

ಮುಖ್ಯ ಭಾಷಣಕಾರರಾಗಿ ಭಾಗವಹಿಸಿದ್ದ ಚೊಕ್ಕಬೆಟ್ಟು ಮಸೀದಿಯ ಖತೀಬ್ ಅಬ್ದುಲ್ ಅಝೀಝ್ ದಾರಿಮಿ ಅವರು, ಡಿಕೆಎಸ್ಸಿ ನಿರ್ವಾಹಿಸುತ್ತಿರುವ ಉತ್ತಮ ಕೆಲ್ಸಗಳ ಬಗ್ಗೆ ಮೆಚ್ಚುಗೆ ವ್ಯಕ್ತ ಪಡಿಸಿ ಡಿಕೆಎಸ್ಸಿ ಕಾರ್ಯಾ ವೈಕರಿಯನ್ನು ಶ್ಲಾಘಿಸಿದರು.

ಇನ್ನೋರ್ವ ಮುಖ್ಯ ಭಾಷಣಕಾರರಾಗಿ ಮರ್ಕಝುಲ್ ಹುದಾ ಕುಂಬ್ರದ ಪ್ರಧಾನ ಕಾರ್ಯದರ್ಶಿ ಅಬ್ದುಲ್ ರಶೀದ್ ಝೈನಿ ಸಂದೇಶ ನೀಡಿದರು.

sunni-center_progrm_8 sunni-center_progrm_9 sunni-center_progrm_12 sunni-center_progrm_13 sunni-center_progrm_14

ಕಾರ್ಯಕ್ರಮದಲ್ಲಿ ಇತ್ತೀಚೆಗೆ ಪ್ರತಿಷ್ಠಿತ ದೇವರಾಜ ಅರಸು ಪ್ರಶಸ್ತಿ ಸ್ವೀಕರಿಸಿದ ಅಲ್ಹಾಜ್ ಬಿ.ಎ. ಮೊಹಿದಿನ್ರಿಗೆ ‘ಡಿಕೆಎಸ್ಸಿ ಜೀವಮಾನ ಸಾಧನಾ’ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಸಮಾಜದಲ್ಲಿ ಶಾಂತಿ ಮತ್ತು ಸೌಹಾರ್ದಕ್ಕಾಗಿ ಶ್ರಮಿಸುತ್ತಿರುವವರಿಗೆ ನೀಡಲಾದ ಡಿಕೆಎಸ್ಸಿ ಸದ್ಭಾವನಾ ಪ್ರಶಸ್ತಿಯನ್ನು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಡಾ.ಎಂ. ಮೋಹನ್ ಆಳ್ವರ ಪರವಾಗಿ ಅವರ ಪುತ್ರ ವಿವೇಕ್ ಆಳ್ವ, ಟ್ಯಾಲೆಂಟ್ ರಿಸರ್ಚ್ ಫೌಂಡೇಶನ್ನ ಮುಖ್ಯಸ್ಥ ಅಬ್ದುರ್ರವೂಫ್ ಪುತ್ತಿಗೆ ಹಾಗೂ ಯು.ಸಿ ಪೌಲೋಸ್ ಸ್ವೀಕರಿಸಿದರು.

ಕಾರ್ಯಕ್ರಮದಲ್ಲಿ 20 ಮಂದಿ ಮಹಿಳೆಯರಿಗೆ ಹೊಲಿಗೆ ಯಂತ್ರಗಳನ್ನು ವಿತರಿಸಿಲಾಯಿತು. ಇದೇ ವೇಳೆ ಐದು ಮಂದಿಗೆ ತಳ್ಳು ಗಾಡಿ ವಿತರಣೆ ಕಾರ್ಯಕ್ರಮ ನಡೆಯಿತು. 20 ಶಿಕ್ಷಣ ಸಂಸ್ಥೆಗಳಿಗೆ ಪ್ರಶಸ್ತಿ ಪ್ರದಾನ ಹಾಗೂ ಒಂದೇ ಮಸೀದಿಯಲ್ಲಿ ಕನಿಷ್ಠ 20 ವರ್ಷ ನಿರಂತರ ಸೇವೆ ಸಲ್ಲಿಸುತ್ತಿರುವ 20 ಮಂದಿ ಉಲಮಾಗಳಿಗೆ ಸನ್ಮಾನ ನೆರವೇರಿಸಲಾಯಿತು.

sunni-center_progrm_15 sunni-center_progrm_16 sunni-center_progrm_17 sunni-center_progrm_18 sunni-center_progrm_19

ದ.ಕ. ಜಿಲ್ಲಾ ಖಾಝಿ ತ್ವಾಕಾ ಅಹ್ಮದ್ ಮುಸ್ಲಿಯಾರ್ ದುಆ ನೆರವೇರಿಸಿದರು. ಡಿಕೆಎಸ್ಸಿಯ ಅಧ್ಯಕ್ಷ ಅಸೈಯದ್ ಆಟಕೋಯ ತಂಙಳ್ ಕುಂಬೋಳ್ ಅಧ್ಯಕ್ಷತೆ ವಹಿಸಿದ್ದರು. ಮರ್ಕಝ್ ತಅಲೀಮುಲ್ ಇಹ್ಸಾನ್ ಸಂಸ್ಥೆಯ ಮ್ಯಾನೇಜರ್ ಮುಸ್ತಫಾ ಸಅದಿ ಸ್ವಾಗತಿಸಿದರು.

sunni-center_progrm_20 sunni-center_progrm_23 sunni-center_progrm_24

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಅರಣ್ಯ ಹಾಗೂ ದ.ಕ. ಜಿಲ್ಲಾ ಉಸ್ತುವಾರಿ ಸಚಿವ ಬಿ. ರಮಾನಾಥ ರೈ, ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಯು.ಟಿ.ಖಾದರ್, ಅಲ್ ಮುಝೈನ್ ಗ್ರೂಪ್ನ ಝಕರಿಯಾ ಜೋಕಟ್ಟೆ, ಮುಹಮ್ಮದ್ ಫಾಝಿಲ್ ರಝ್ವಿ ಕಾವಳಕಟ್ಟೆ, ಜಿಲ್ಲಾ ವಕ್ಫ್ ಸಲಹಾ ಸಮಿತಿಯ ಅಧ್ಯಕ್ಷ ಎಸ್.ಎಂ.ರಶೀದ್ ಹಾಜಿ, ಅಲ್ಹಾಜ್ ಯೆನೆಪೊಯ ಮುಹಮ್ಮದ್ ಕುಂಞಿ, ದ.ಕ. ಹಾಗೂ ಉಡುಪಿ ಜಿಲ್ಲೆಯ ಮುಸ್ಲಿಂ ಸೆಂಟ್ರಲ್ ಕಮಿಟಿಯ ಅಧ್ಯಕ್ಷ ಕೆ.ಎಸ್.ಮುಹಮ್ಮದ್ ಮಸೂದ್, ಉಳ್ಳಾಲ ದರ್ಗಾ ಸಮಿತಿಯ ಅಧ್ಯಕ್ಷ ಅಬ್ದುರ್ರಶೀದ್ ಹಾಜಿ, ಡಿಕೆಎಸ್ಸಿ ಸ್ಥಾಪಕಾಧ್ಯಕ್ಷ ಹಸನುಲ್ ಫೈಝಿ, ಸುನ್ನಿ ಜಂಇಯ್ಯತುಲ್ ಮುಅಲ್ಲಿಮೀನ್ನ ಅಧ್ಯಕ್ಷ ಸಅದ್ ಮುಸ್ಲಿಯಾರ್ ಆತೂರು, ಜಂ ಇಯ್ಯತುಲ್ ಮುಅಲ್ಲಿಮೀನ್ ಜಿಲ್ಲಾಧ್ಯಕ್ಷ ಕೆ.ಎಲ್.ಉಮರ್ ದಾರಿಮಿ ಪಟ್ಟೋರಿ, ಉಡುಪಿ ಜಿಲ್ಲಾ ಸಂಯುಕ್ತ ಜಮಾಅತ್ ಅಧ್ಯಕ್ಷ ಹಾಜಿ ಅಬ್ದುಲ್ಲಾ ತೌಫೀಕ್ ನಾವುಂದ, ಡಿಕೆಎಸ್ಸಿ ಕೇಂದ್ರ ಸಮಿತಿಯ ಕಾರ್ಯಾಧ್ಯಕ್ಷ ಯು.ಡಿ.ಅಬ್ದುಲ್ ಹಮೀದ್ ಉಳ್ಳಾಲ, ಕೇಂದ್ರ ಸಮಿತಿಯ ಪ್ರಧಾನ ಕಾರ್ಯದರ್ಶಿ ಕೆ.ಸಿ.ಇಸ್ಮಾಯೀಲ್ ಹಾಜಿ ಕಿನ್ಯ, ಅಲ್ ಇಹ್ಸಾನ್ ಎಜುಕೇಶನ್ ಸೆಂಟರ್ನ ವ್ಯವಸ್ಥಾಪಕ ಯು.ಕೆ.ಮುಸ್ತಫಾ ಸಅದಿ, ಎಂ.ಇ. ಮೂಳೂರು, ಮೂಡಾ ಅಧ್ಯಕ್ಷ ಇಬ್ರಾಹೀಂ ಕೋಡಿಜಾಲ್, ಬಿ.ಎಚ್. ಖಾದರ್, ಇಕ್ಬಾಲ್ ಮರವಂತೆ ಕತಾರ್, ನಝೀರ್ ಹುಸೈನ್ ಅಲ್ ಫಲಾ ಜುಬೇಲ್, ಇಕ್ಬಾಲ್ ನಾವುಂದ ಕತಾರ್, ಮುಹಮ್ಮದ್ ಮುಬೀನ್ ಅಲ್ ಜುಬೇಲ್ ಮೊದಲಾದವರು ಉಪಸ್ಥಿತರಿದ್ದರು.

ಕಾರ್ಯಕ್ರಮದ ಉದ್ಘಾಟನಾ ಸಮಾರಂಭಕ್ಕೆ ಮೊದಲು ಅಲ್ ಇಹ್ಸಾನ್ ಮೂಳೂರು ಸಂಸ್ಥೆಯ ಕುರಿತಂತೆ ಸಾಕ್ಷಚಿತ್ರ ಪ್ರದರ್ಶನಗೊಂಡಿತು.

ಸ್ವಾಗತ ಸಮಿತಿಯ ಅಧ್ಯಕ್ಷ ಮಮ್ತಾಝ್ ಅಲಿ ಸ್ವಾಗತಿಸಿದರು. ಹಿಪ್ಲುಲ್ ಕುರ್‌ಆನ್ ಕಾಲೇಜಿನ ವಿದ್ಯಾರ್ಥಿ ಸೈಯದ್ ಅನಸ್ ತಂಙಳ್ ಕಿರಾಅತ್ ಪಠಿಸಿದರು. ಡಿಕೆಎಸ್ಸಿಯ ಕಾರ್ಯಾಧ್ಯಕ್ಷ ಯು.ಡಿ. ಅಬ್ದುಲ್ ಹಮೀದ್ ವಂದಿಸಿದರು. ಟ್ಯಾಲೆಂಟ್ ರಿಸರ್ಚ್ ಫೌಂಡೇಶನ್ನ ರಫೀಕ್ ಮಾಸ್ಟರ್ ಕಾರ್ಯಕ್ರಮ ನಿರೂಪಿಸಿದರು.

Comments are closed.