ಮುಂಬೈ

‘ಮೋಸ್ಟ್‌ಲೀ ಸನ್ನಿ ಇನ್‌ ಇಂಡಿಯಾ” ಸಾಕ್ಷ್ಯ ಚಿತ್ರ ಬಿಡುಗಡೆಗೆ ಸನ್ನಿ ನಿರಾಕರಣೆ

Pinterest LinkedIn Tumblr

sunny-leone

ಮುಂಬಯಿ: ಜೀವನ ಚರಿತ್ರೆ ಕುರಿತಾಗಿ ಹೊರ ಬರುತ್ತಿರುವತಂಹ ಸಾಕ್ಷ್ಯ ಚಿತ್ರ ‘ಮೋಸ್ಟ್‌ಲೀ ಸನ್ನಿ ಇನ್‌ ಇಂಡಿಯಾ’ವನ್ನು ಭಾರತದಲ್ಲಿ ಬಿಡುಗಡೆ ಮಾಡಲು ಬಾಲಿವುಡ್‌ನ‌ ಖ್ಯಾತ ನಟಿ ಸನ್ನಿ ಲಿಯೋನ್‌ ತೀವ್ರ ವಿರೋಧ ವ್ಯಕ್ತ ಪಡಿಸಲು  ಅಸಮಾಧಾನ ವ್ಯಕ್ತ ಪಡಿಸಿದ್ದಾರೆ.

“ಮೋಸ್ಟ್‌ಲೀ ಸನ್ನಿ ಇನ್‌ ಇಂಡಿಯಾ ” ಸಾಕ್ಷ್ಯ ಚಿತ್ರದಲ್ಲಿ ನನ್ನ ಜೀವನದ ಕುರಿತಾಗಿನ ವಿಚಾರಗಳನ್ನು ತಿರುಚಿ ತಮಗೆ ಬೇಕಾದ ರೀತಿಯಲ್ಲಿ ಚಿತ್ರಿಕರಿಸಿದ್ದಾರೆ. ಇದು ಒಬ್ಬರ ಜೀವನದ ಕಥೆ,ಹಾಗೂ ಇದು ನನ್ನ ಜೀವನದ ಕಥೆ ಆಧಾರೀತ ನಿರ್ಮಿಸಿದ ಚಿತ್ರವಾದ ಕಾರಣ ನಾನಿದನ್ನು ಗಂಭೀರವಾಗಿ ಪರಿಗಣಿಸುತ್ತೇನೆ’ ಎಂದು ಪಿಟಿಐ ಸುದ್ದಿ ಸಂಸ್ಥಗೆ ಹೇಳಿದ್ದಾರೆ.

‘ನಿಮ್ಮ ಕಥೆಯನ್ನು ನೀವು ಹೊರತುಪಡಿಸಿ ಬೇರೆಯವರಿಗೆ ಹೇಳುವ ಹಕ್ಕು ಇಲ್ಲ. ಇದರಲ್ಲಿ ನಾನು ಇಷ್ಟ ಪಡದ ,ಜನರು ನೋಡ ಬಯಸದ ಕೆಲವು ವಿಚಾರಗಳು ಒಳಗೊಂಡಿವೆ. ನನ್ನ ಕಥೆಯನ್ನು ದುಃಖ ಭರಿತವಾಗಿ ತೋರಿಸಲು ನಾನು ಇಷ್ಟ ಪಡುವುದಿಲ್ಲ ,ಇದರಲ್ಲಿ ಎನೋ ತಪ್ಪಾಗಿದೆ ‘ಎಂದರು.

ದಿಲೀಪ್‌ ಮೆಹ್ತಾ ನಿರ್ದೇಶನವಿರುವ ಸಾಕ್ಷ್ಯ ಚಿತ್ರ ಇತ್ತೀಚೆಗೆ ಟೊರೆಂಟೊ ಅಂತರಾಷ್ಟ್ರೀಯ ಸಿನಿಮಾ ಉತ್ಸವದಲ್ಲಿ ಪ್ರದರ್ಶಿಸಲಾಗಿತ್ತು. ಕಾರ್ಯಕ್ರಮಕ್ಕೆ ಸನ್ನಿ ಲಿಯೋನ್‌ ಕುಟುಂಬದ ಕಾರ್ಯಕ್ರಮದ ನಿಮಿತ್ತ ಹಾಜರಾಗಲು ಸಾಧ್ಯವಾಗಿರಲಿಲ್ಲ.

ಸಾಕ್ಷ್ಯ ಚಿತ್ರದಲ್ಲಿ ಕೆನಡಾದ ಓಂಟಾರಿಯೊದಲ್ಲಿ ಸಿಖ್‌ ಕುಟುಂಬದಲ್ಲಿ ಜನಿಸಿದ ಕರಣಜಿತ್‌ ವೋಹ್ರಾ (ಮೂಲ ಹೆಸರು ) ಬಾಲ್ಯ , ಆ ಬಳಿಕ ಲಾಸ್‌ ಎಂಜಲೀಸ್‌ಗೆ ವಲಸೆ ಬಂದಿರುವುದು, ನೀಲಿ ಚಿತ್ರಗಳ ಲೋಕಕ್ಕೆ ಪ್ರವೇಶ ಮತ್ತು ಈಗಿನ ಬಾಲಿವುಡ್‌ ಪಯಣದ ಅನೇಕ ವಿಚಾರಗಳನ್ನು ತೋರಿಸಲಾಗಿದೆ.

Comments are closed.