*ಯೋಗೀಶ್ ಕುಂಭಾಸಿ
ಉಡುಪಿ: ಪ್ರಾಮಾಣಿಕ ಹಾಗೂ ದಕ್ಷ ಎಸ್.ಐ. ಎಂದು ಖ್ಯಾತರಾದ ಕೋಟ ಪೊಲೀಸ್ ಠಾಣೆ ಎಸ್.ಐ. ಕಬ್ಬಾಳರಾಜ್ ಅವರು ಬೆಳಿಗ್ಗೆನಿಂದ ಕರ್ತವ್ಯಕ್ಕೆ ಹಾಜಾರಾಗದಿದ್ದು ಠಾಣೆಯಲಿನ ಡೈರಿಯಲ್ಲಿ ತಾನು ರಾಜಿನಾಮೆ ನೀಡುವ ಬಗ್ಗೆ ಬರೆದು ಅಜ್ನಾತ ಸ್ಥಳಕ್ಕೆ ತೆರಳಿದ್ದಾರೆನ್ನಲಾಗಿದೆ.

ಸಾಸ್ಥಾನ ಸಮೀಪದ ಐರೋಡಿಯ ಜಾಗ ಸಂಬಂಧಿತ ವಿಚಾರದಲ್ಲಿ ಕರೆ ಮಾಡಲು ಬೆಳಿಗ್ಗೆ ಉಡುಪಿ ಜಿಲ್ಲಾ ಎಸ್ಪಿ ಅವರು ಸಂದೇಶ ನೀಡಿದ್ದು ಅದರಂತೆಯೇ ಬೆಳಿಗ್ಗೆ ಎಸ್.ಐ. ಕಬ್ಬಾಳರಾಜ್ ಅವರು ಎಸ್ಪಿ ಅವರಿಗೆ ಖುದ್ದು ಕರೆ ಮಾಡಿದ್ದಾರೆ. ಆದರೇ ಕರೆ ಮಾಡಿದ ಬಳಿಕ ಎಸ್ಪಿ ಅವರು ಪ್ರಕರಣದ ಬಗ್ಗೆ ಯಾವುದೇ ಸ್ಪಷ್ಟನೆ ಕೇಳದೇ ಬೈದಿದ್ದಾರೆ ಎಂದು ಆರೋಪಿಸಲಾಗಿದೆ. ಇದರಿಂದ ನೊಂದ ಎಸ್.ಐ ಅವರು ಡೈರಿಯಲ್ಲಿ ಈ ವಿಚಾರಗಳೆಲ್ಲವನ್ನೂ ಬರೆದಿಟ್ಟು ಸರ್ವೀಸ್ ರಿವಾಲ್ವರ್ ಹಾಗೂ ಇಲಾಖೆ ಸಿಮ್ ಠಾಣೆಯಲ್ಲಿಯೇ ಇಟ್ಟು ತನ್ನ ಖಾಸಗಿ ವಾಹನದಲ್ಲಿ ಅಲ್ಲಿಂದ ತೆರಳಿದ್ದಾರೆ. (ಕನ್ನಡಿಗ ವರ್ಲ್ಡ್)
ಮೊಬೈಲ್ ಸ್ವಿಚ್ಡ್ ಆಫ್..
ಇನ್ನು ಎಸ್.ಐ. ಅವರ ಮೊಬೈಲ್ ಸಂಖ್ಯೆಗೆ ಕರೆ ಮಾಡಿದರೇ ಸ್ವಿಚ್ಡ್ ಆಫ್ ಬರುತ್ತಿದ್ದು ಯಾರ ಸಂಪರ್ಕಕ್ಕೂ ಸಿಗುತ್ತಿಲ್ಲ. ಇನ್ನು ಯಾವುದೇ ಅಧಿಕಾರಿಗಳಿಗೆ ಮಾಹಿತಿ ನೀಡದೇ ತೆರಳಿರುವ ಎಸ್.ಐ. ಕಬ್ಬಾಳರಾಜ್ ಅವರನ್ನು ಹುಡುಕಲು ಇಲಾಖೆ ಮಟ್ಟದಲ್ಲಿ ಮೂರು ತಂಡಗಳನ್ನು ಮಾಡಿ ಹುಡುಕಾಟ ನಡೆಸುತ್ತಿರುವ ಬಗ್ಗೆ ‘ಕನ್ನಡಿಗ ವರ್ಲ್ಡ್’ಗೆ ನಂಬಲರ್ಹ ಮೂಲಗಳಿಂದ ಮಾಹಿತಿ ಸಿಕ್ಕಿದೆ.
ಇನ್ನು ಕಳೆದ ಮೂರು ತಿಂಗಳ ಹಿಂದಷ್ಟೇ ಪೊಲೀಸರ ಮುಷ್ಕರದ ವೇಳೆ ಪೊಲೀಸ್ ಸಿಬ್ಬಂದಿಗಳ ಕಷ್ಟದ ಬಗ್ಗೆ ಮಾತನಾಡಿದ್ದ ಎಸ್.ಐ. ಕಬ್ಬಾಳರಾಜ್ ಅವರು ತಾನು ಕೂಡ ರಾಜಿನಾಮೆ ನೀಡಲು ಮುಂದಾಗುವ ಮೂಲಕ ಸಿಬ್ಬಂದಿಗಳ ಬಗ್ಗೆ ತನಗಿರುವ ಕಾಳಜಿಯನ್ನು ವ್ಯಕ್ತಪಡಿಸಿದ್ದರು. ಕಬ್ಬಾಳರಾಜ್ ನೊಂದು ತೆರಳಿದ ಬಗ್ಗೆ ಕೋಟ ಜನತೆ ಆಕ್ರೋಷಗೊಂಡಿದ್ದು ರಾತ್ರಿಯೊಳಗೆ ಅವರು ವಾಪಾಸ್ ಕರ್ತವ್ಯಕ್ಕೆ ಹಾಜಾರಾಗಬೇಕು, ಇಲ್ಲವಾದಲ್ಲಿ ಇಲಾಖೆಯ ಅವ್ಯವಸ್ಥೆಯನ್ನು ಮುಂದಿಟ್ಟುಕೊಂಡು ಪ್ರತಿಭಟಿಸಲಾಗುವುದು ಎಂದಿದ್ದಾರೆ. (ಕನ್ನಡಿಗ ವರ್ಲ್ಡ್)
ಇನ್ನು ‘ಕನ್ನಡಿಗ ವರ್ಲ್ಡ್’ ಜೊತೆ ಮಾತನಾಡಿದ ಜಿ.ಪಂ. ಸದಸ್ಯ ರಾಘವೇಂದ್ರ ಕಾಂಚನ್ ಬಾರಿಕೆರೆ, ‘ಎಸ್.ಐ. ಅವರು ಕೋಟ ಠಾಣೆಗೆ ನೀಡಿರುವ ಸೇವೆಯ ಬಗ್ಗೆ ಗಮನಕ್ಕೆ ತರಲು ಎಸ್ಪಿ ಕಛೇರಿಗೆ ತೆರಳಿ ಮನವಿ ನೀಡಲಿದ್ದೇವೆ ಎಂದರು.
Comments are closed.