ಗಲ್ಫ್

ದುಬೈ: ಅನಿವಾಸಿ ಸ್ನೇಹಮಿಲನಕ್ಕೆ ಶಾಕ್ಷಿಯಾದ ಕೆಐಸಿ ಈದ್ ಸ್ನೇಹ ಮಿಲನ

Pinterest LinkedIn Tumblr

kcf-023

ದುಬೈ: ಕರ್ನಾಟಕ ಕಲ್ಚರಲ್ ಸೆಂಟರ್ ಮತ್ತು ಕರ್ನಾಟಕ ಇಸ್ಲಾಮಿಕ್ ಸೆಂಟರ್ ದುಬೈ ಸಹಯೋಗದಲ್ಲಿ ಕೆಐಸಿ ಈದ್ ಸ್ನೇಹ ಮಿಲನವು ಸಾಂಪ್ರದಾಯಕ ಕ್ರೀಡೆ ಮತ್ತು ಇತರ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ದುಬೈ ಝಬೀಲ್ ಪಾರ್ಕಿನಲ್ಲಿ ವಿಜ್ರಂಬಣೆಯಿಂದ ನಡೆಯಿತು.

kcf-001

kcf-002

kcf-003

kcf-004

kcf-005

kcf-006

kcf-007

kcf-008

kcf-009

kcf-010

kcf-011

kcf-012

ಕೆಐಸಿ ಕೇಂದ್ರ ಸಮಿತಿಯ ಗೌರವ ಅಧ್ಯಕ್ಷರಾದ ಬಹು! ಅಸ್ಗರ್ ಅಲೀ ತಂಙಳ್ ರವರ ದುವಾದೊಂದಿಗೆ ಆರಂಭವಾದ ಕಾರ್ಯಕ್ರಮವನ್ನು ಕೆಐಸಿ ಕೇಂದ್ರ ಸಮಿತಿಯ ಅಧ್ಯಕ್ಷರಾದ ಜನಾಬ್ ಮೊದೀನ್ ಕುಟ್ಟಿ ಹಾಜಿ ಕಕ್ಕಿಂಜೆ ದಿಬ್ಬ ರವರು ಉದ್ಘಾಟಿಸಿದರು. ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ ಕೆ ಐ ಸಿ ಸಂಸ್ಥೆಯು ತಾಯಿನಾಡಿನಲ್ಲಿ ಆರ್ಥಿಕವಾಗಿ ಹಿಂದಿಳಿದ ಬಡ ಮಕ್ಕಳಿಗೆ ಉಚಿತ ವಿಧ್ಯಾಭ್ಯಾಸವನ್ನು ನೀಡುತ್ತಿದ್ದು , ನಮ್ಮ ಸಂಸ್ಥೆಯಲ್ಲಿ ಕಲಿತ ವಿದ್ಯಾರ್ಥಿಗಳು ಇಂದು ವಿವಿಧ ಕ್ಷೇತ್ರಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದು , ಕೆಐಸಿ ವಿದ್ಯಾ ಸಂಸ್ಥೆಯು ಯಶಸ್ವಿಯಾಗಿ ಮುನ್ನಡೆಯುತ್ತಿದೆ. ಈ ಸಂಸ್ಥೆಯ ಪ್ರಚಾರಾರ್ಥ ಹಾಗೂ ಅನಿವಾಸಿ ಕನ್ನಡಿಗರನ್ನು ಒಂದುಗೂಡಿಸುವ ಸಲುವಾಗಿ ಕೆ ಐ ಸಿ ಯು ಇಂದು ಸ್ನೇಹ ಮಿಲನ ಎಂಬ ಬೃಹತ್ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ. ಅನಿವಾಸಿಗಳಾಗಿ ಕಡಲಾಚೆಗೆ ಪ್ರಯಾಣಿಸಿ ಬಂದ ನಾವು ಸಮುದಾಯದ ಏಳಿಗೆಗಾಗಿ , ಸುಶಿಕ್ಷಿತ ಸಮುದಾಯಕ್ಕಾಗಿ ಇಂತಹ ಸಂಸ್ಥೆಗಳಲ್ಲಿ ಭಾಗಿಗಳಾಗಿದ್ದು , ಸಹೋದರತೆ , ಪರಸ್ಪರ ಪರಿಚಯ , ಹಾಗೂ ಇಸ್ಲಾಮ್ ಕಳಿಸಿದ ಕುಟುಂಬ ಬಂದವನ್ನು ಗಟ್ಟಿಗೊಳಿಸುವ ಉದ್ದೇಶದಿಂದ ಸ್ನೇಹಮಿಲನ ಎಂಬ ನಾಮದಡಿಯಲ್ಲಿ ಇಸ್ಲಾಮಿಕ್ ಚೌಕಟ್ಟಿನಲ್ಲಿ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಿದ್ದು , ತಾವೆಲ್ಲರೂ ವಿನಯದಿಂದ ಸಹಕರಿಸುವಂತೆ ಕೇಳಿಕೊಂಡರು .

kcf-013

kcf-014

kcf-015

kcf-016

kcf-017

kcf-018

kcf-019

kcf-020

kcf-021

kcf-022

kcf-024

ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಕೆ ಐ ಸಿ ಈದ್ ಸ್ನೇಹಮಿಲನ ಕಾರ್ಯಕ್ರಮದ ಸ್ವಾಗತ ಸಮಿತಿ ಅಧ್ಯಕ್ಷರಾದ ಜನಾಬ್ ಝೈನುದ್ದೀನ್ ಮಾಂತೂರ್ ರವರು ಮಾತನಾಡಿ ತೆರೆದ ಪುಸ್ತಕದಂತಿರುವ ಈ ಪ್ರವಾಸಿ ಜೀವನದಲ್ಲಿ ಯುವ ಸಮೂಹಗಳು ಇಂದು ವಿವಿದ ರೀತಿಯ ಕಾರ್ಯ ಚಟುವಟಿಕೆಗಳಲ್ಲಿ ಹಂಚಿ ಹೋಗಿದ್ದು , ಇಂತಹ ಸಂಧರ್ಭದಲ್ಲಿ ನಮ್ಮ ಸಂಸ್ಥೆಯ ವತಿಯಿಂದ ಹಮ್ಮಿಕೊಂಡ ಈ ಕಾರ್ಯಕ್ರಮವು ಅರ್ಥಪೂರ್ಣವಾಗಿದೆ. ಪ್ರತಿಷ್ಠೆ ಪೈಪೋಟಿ ಗಾಗಿ ಇಂದು ಸಮಾಜದಲ್ಲಿ ವಿವಿಧ ಕ್ರೀಡಾ ಚಟುವಟಿಕೆಗಳು ಹುಟ್ಟಿಕೊಳ್ಳುತ್ತಿರುವಾಗ ಸಹೋದರತೆ , ಪರಸ್ಪರ ಪರಿಚಯ ವಿನಿಮಯಕ್ಕಾಗಿ ಈ ದಿನವನ್ನು ಮೀಸಲಿಟ್ಟು ಕಾರ್ಯಕ್ರಮದಲ್ಲಿ ಭಾಗಿಗಳಾದ ತಮಗೆಲ್ಲರಿಗೂ ನಾವು ಅಭಾರಿಯಾಗಿದ್ದು, ಮುಂದೆಯೂ ನಮ್ಮ ವಿದ್ಯಾಸಂಸ್ಥೆಯ ಕಾರ್ಯಕ್ರಮಗಳನ್ನು ಪ್ರೋತ್ಸಾಹಿಸಿ ಸಹಕರಿಸುವಂತೆ ಕೇಳಿಕೊಂಡು ಕಾರ್ಯಕ್ರಮಕ್ಕೆ ಶಭ ಹಾರೈಸಿದರು.

kcf-025

kcf-026

kcf-027

kcf-028

kcf-029

kcf-030

kcf-031

kcf-032

kcf-033

kcf-034

kcf-035

kcf-036

kcf-037

kcf-038

kcf-039

ಕಾರ್ಯಕ್ರಮದಲ್ಲಿ ಸಬ್ ಜೂನಿಯರ್, ಜೂನಿಯರ್ ಮತ್ತು ಸೀನಿಯರ್ ವಿಭಾಗಗಲ್ಲಿ ನೂರು ಮೀಟರ್ ಓಟ, ಗೋಣಿ ಚೀಲದ ಓಟ, ಮೂರು ಕಾಲಿನ ಓಟ ಮತ್ತು ಪುಟಾಣಿ ಮಕ್ಕಳ ಓಟ ಹೀಗೆ ವಿವಿಧ ಶ್ರೇಣಿಗಳಲ್ಲಿ ಹಲವು ಸುತ್ತಿನ ಓಟದ ಸ್ಪರ್ಧೆಗಳು ನಡೆಯಿತು. ಎದ್ದು ಬಿದ್ದು ಓಡುವ ಗೋಣಿ ಚೀಲದ ಓಟ ಮತ್ತು ಮೂರು ಕಾಲಿನ ಓಟಗಳು ನೋಡುಗರಿಗೆ ನಗುವಿನ ಹಬ್ಬವನ್ನು ತಂದು ಕೊಟ್ಟಿತ್ತು.

ಮುಂದೆ ಕಬಡ್ಡಿ ಪಂದ್ಯಾವಳಿಗೆ ಸುಮಾರು ನಲವತ್ತಕ್ಕಿಂತ ಹೆಚ್ಚು ಸದಸ್ಯರು ಹೆಸರು ನೋಂದಾಯಿಸಿದರು. ಇವರನ್ನು ಏಳು ತಂಡಗಳಾಗಿ ವಿಭಜಿಸಲಾಯಿತು ಮತ್ತು ಈ ತಂಡಗಳಿಂದ ಹಲವು ಸುತ್ತಿನ ಪಂದ್ಯ ನಡೆಯಿತು. ನೆರೆದವರು ಪ್ರತಿಯೊಂದು ಕಬಡ್ಡಿ ಪಂದ್ಯಾವಳಿಯನ್ನು ಕಣ್ಣು ಬಿಡದೆ ಕೊನೆಯವರೆಗೆ ನೋಡಿ ಆನಂದಿಸಿದರು. ಪ್ರತಿಯೊಂದು ಹಂತದ ಆಟಗಳು ನೋಡಲು ಉತ್ಸಾಹಬರಿತವಾಗಿತ್ತು.

ಹಗ್ಗ ಜಗ್ಗಾಟಕ್ಕೆ ನೊಂದಾಯಿಸಿದ ಸುಮಾರು ಹನ್ನೆರಡು ತಂಡಗಳು ತಂಡೋಪ ತಂಡವಾಗಿ ಪೈಪೋಟಿ ನೀಡಿತು. ಮಕ್ಕಳ ಪೈಂಟಿಂಗ್, ಓಟ ಮತ್ತು ಬಲೂನ್ ಒಡೆಯುವ ಸ್ಪರ್ಧೆಗಳು ನೋಡುಗರಿಗೆ ಆಕರ್ಷಣೀಯವಾಗಿತ್ತು. ಮಹಿಳೆಯರಿಗಾಗಿ ವಿವಿಧ ಸ್ಪರ್ಧೆಗಳನ್ನು ನಡೆಸಲಾಯಿತು.

ಸಮಾರೋಪ ಸಮಾರಂಭದಲ್ಲಿ ಪುರುಷರ ಕ್ವಿಝ್ ಸ್ಪರ್ಧೆ ಯು ಹಲವು ರಸಭರಿತ ಪ್ರಸ್ನೆಗಳೂಂದಿಗೆ ಕಿಕ್ಕಿರಿದ ಜನರ ಮುಂದೆ ನಡೆಯಿತು. ಕಾರ್ಯಕ್ರಮದಲ್ಲಿ 2.00 ರಿಂದ 4.00 ಮೊದಲಾಗಿ ಆಗಮಿಸಿದವರಿಗಾಗಿ ಅರ್ಲಿ ಬರ್ಡ್ ಮತ್ತು ಕೆ ಐ ಸಿ ಅದೃಷ್ಟ ಶಾಲಿ ರಾಫೆಲ್ ಡ್ರಾ ವಿಮಾನ ಟಿಕೆಟ್ ಗಳ ಬಂಪರ್ ಬಹುಮಾನಕ್ಕೆ ಚೀಟಿ ಎತ್ತುವ ಮೂಲಕ ಅದೃಷ್ಟರನ್ನು ಆರಿಸಲಾಯಿತು. ಅರ್ಲಿ ಬರ್ಡ್ ಅದೃಷ್ಟಶಾಲಿಯಾಗಿ ಅಝೀಝ್ ಸೋಂಪಾಡಿ ಮತ್ತು ರಾಫೆಲ್ ಡ್ರಾ ವಿಮಾನ ಟಿಕೆಟ್ ನ ಅದೃಷ್ಟವು ಇರ್ಫಾನ್ ತಿಂಗಲಾಡಿಗೆ ಒಲಿದು ಬಂತು.

ಕಾರ್ಯಕ್ರಮದಲ್ಲಿ ಆನ್‌ಲೈನ್ ಕವನ ಮತ್ತು ಗಾಯನ ಸ್ಪರ್ಧೆಯ ವಿಜಯಶಾಲಿಗಳನ್ನು ಪ್ರಕಟಿಸಲಾಯಿತು ಅದರಂತೆ ಕವನ ಪ್ರಥಮ ಜನಾಬ್ ಸಿನಾನ್ ಪರ್ಲಡ್ಕ ಮತ್ತು ದ್ವಿತೀಯ ಜನಾಬ್ ಸುಲೈಮಾನ್ ಬೈತಡ್ಕ, ಗಾಯನ ಪ್ರಥಮ ಜನಾಬ್ ರಫೀಕ್ ಮುಕ್ವೆ ಇವರುಗಳು ಪ್ರಶಸ್ತಿಗಳನ್ನು ತನ್ನದಾಗಿಸಿಕೊಂಡರು

ಕ್ರೀಡೆ, ಕ್ವಿಝ್ ಮತ್ತು ಇತರ ಸ್ಪರ್ಧೆಗಳಲ್ಲಿ ವಿಜೇತರ ವಿವರಗಳು.

? ಮಕ್ಕಳ ವಿಭಾಗದ ಸ್ಪರ್ಧೆಯ ವಿಜೇತರು.

? ಸ್ಪರ್ಧೆ: ಮ್ಯೂಸಿಕಲ್ ಚಯರ್ – ಪ್ರಥಮ: ಕತೀಜ ಸಮೀಬ, ದ್ವಿತೀಯ: ಪಾತಿಮತ್ ಝಹ್ ರಾ.

? ಸ್ಪರ್ಧೆ: ನೂರು ಮೀಟರ್ ಓಟ ಬಾಯ್ಸ್ – ಪ್ರಥಮ: ಅಯ್ ಮನ್ ಅಶ್ರಫ್, ದ್ವಿತೀಯ: ಸಯ್ಯದ್ ಅಸ್ಲಂ ಅಲಿ.

? ಸ್ಪರ್ಧೆ: ನೂರು ಮೀಟರ್ ಓಟ ಗರ್ಲ್ಸ್ – ಪ್ರಥಮ: ಸನಾ ರಝಾಕ್ ಸೊಂಪಾಡಿ, ದ್ವಿತೀಯ: ಅಲೀಮ ಅಬ್ದುಲ್ ಲತೀಫ್.

? ಸ್ಪರ್ಧೆ: ಪೈಂಟಿಂಗ್ – ಪ್ರಥಮ: ಕತೀಜ ಸಮೀಬ, ದ್ವಿತೀಯ: ಪಾತಿಮ ಸನಾ.

? ಪುರುಷರ ವಿಭಾಗದ ಸ್ಪರ್ಧೆಯ ವಿಜೇತರು.

? ಸ್ಪರ್ಧೆ: ನೂರು ಮೀಟರ್ ಓಟ – ಪ್ರಥಮ: ರಾಝಿಕ್, ದ್ವಿತೀಯ: ಶಾಕಿರ್.

? ಸ್ಪರ್ಧೆ: ಮೂರು ಕಾಲಿನ ಓಟ – ಪ್ರಥಮ: ಅರ್ ಫಾಝ್, ದ್ವಿತೀಯ: ರಿಝ್ ವಾನ್.

? ಸ್ಪರ್ಧೆ: ಗೋಣಿ ಚೀಲ ಓಟ – ಪ್ರಥಮ: ಇಸ್ಮಾಯಿಲ್, ದ್ವಿತೀಯ: ನವಾಫ್.

? ಸ್ಪರ್ಧೆ: ಸೀನಿಯರ್ಸ್ ಒಟ – ಪ್ರಥಮ: ಮುಸ್ತಾಫ ಗೂನಡ್ಕ, ದ್ವಿತೀಯ ಅಸ್ಗರ್ ಅಲೀ ತಂಙಳ್.

? ಸೀನಿಯರ್ ವಿಭಾಗದ ನೂರ್ ಮೀಟರ್ ಓಟದಲ್ಲಿ ಮುಸ್ತಾಫ ಗೂನಡ್ಕರವರು ಪ್ರಥಮ ಸ್ಥಾನವನ್ನು ಪಡೆದರೆ ಅಸ್ಗರ್ ಅಲೀ ತಂಙಳ್ ರವರು ದ್ವಿತೀಯ ಸ್ಥಾನವನ್ನು ಪಡೆದರು.

? ಕಬಡ್ಡಿ ಪಂದ್ಯಾವಳಿಯಲ್ಲಿ ಗ್ರೀನ್ ಗಯ್ಸ್ ಅಲಿಫ್ ತಂಡವು ಪ್ರಥಮ ಸ್ಥಾನವನ್ನು ಪಡೆದರೆ, ದ್ವಿತೀಯ ಸ್ಥಾನವನ್ನು ಬ್ಲೂ ಗಯ್ಸ್ ಸಮದ್ ತಂಡದವರು ಪಡೆದರು

? ಹಗ್ಗ ಜಗ್ಗಾಟ ಸ್ಪರ್ಧೆಯಲ್ಲಿ ಕೆಐಸಿ ಸೀನಿಯರ್ ತಂಡವು ಪ್ರಥಮ ಸ್ಥಾನವನ್ನು ಪಡೆದರೆ, ದ್ವಿತೀಯ ಸ್ಥಾನವನ್ನು ವಾಟ್ ನೆಸ್ಟ್ ಮಂಗಳೂರು ತಂಡದವರು ಪಡೆದರು

ಅಶ್ರಫ್ ಅಮ್ಜದಿ , ಅಶ್ರಫ್ ಪರ್ಲಡ್ಕ , ಮುಸ್ತಫಾ ಗೂನಡ್ಕ ರವರ ನೇತೃತ್ವದಲ್ಲಿ ನಡೆದ ಕ್ವಿಝ್ ಸ್ಪರ್ಧೆಯಲ್ಲಿ ವಿಜೇತರಿಗೆ ಸ್ಥಳದಲ್ಲಿಯೇ ಬಹುಮಾನಗಳನ್ನು ವಿತರಿಸಲಾಯಿತು.

ಹೀಗೆ ಅತ್ಯಂತ ಆಕರ್ಷಣೀಯವಾಗಿಯೂ ರಸ ಭರಿತವಾಗಿಯೂ ನಡೆದ ವಿವಿಧ ಸ್ಪರ್ಧೆಗಳಲ್ಲಿ ಬಹುತೇಕ ಮಂದಿ ಭಾಗವಹಿಸಿ ತಮ್ಮ ತಮ್ಮ ಪ್ರತಿಭೆಗಳನ್ನು ತೋರ್ಪಡಿಸಿದ್ದು , ಉತ್ಸಾಹದಿಂದ ಒಬ್ಬರಿಗೊಬ್ಬರು ಪೈಪೋಟಿ ನೀಡಿದರು.

ಬಳಿಕ ಕಾರ್ಯಕ್ರಮದ ಚಯರ್ ಮೇನ್ ಜನಾಬ್ ಝೈನುದ್ದೀನ್ ಮಾಂತೂರು ರವರ ಅಧ್ಯಕ್ಷತೆಯಲ್ಲಿ ಕಾರ್ಯಕ್ರಮದ ಸಮಾರೋಪ ಸಮಾರಂಭದೊಂದಿಗೆ ವಿಜೇತರಿಗೆ ಬಹುಮಾನ ಮತ್ತು ಪ್ರಶಸ್ತಿಗಳನ್ನು ವಿತರಿಸಲಾಯಿತು. ಕೆಐಸಿ ನೇತಾರರಾದ ಕೆಐಸಿ ದುಬೈ ಸಮಿತಿ ಅಧ್ಯಕ್ಷ ಜನಾಬ್ ಅಶ್ರಫ್ ಖಾನ್ ಮಾಂತೂರು, ಕೆ ಐ ಸಿ ಕೇಂದ್ರ ಸಮಿತಿ ಕಾರ್ಯಆಧ್ಯಕ್ಷರಾದ ಜ! ಷರೀಫ್ ಕಾವು , ಕೆ ಐ ಸಿ ಅಲ್ ಕೌಸರ್ ಯೂತ್ ವಿಂಗ್ ಗೌರವಾಧ್ಯಕ್ಷರಾದ ಜ! ರಫೀಕ್ ಆತೂರ್ , ಕೆ ಐ ಸಿ ಅಲ್ ಕೌಸರ್ ಯೂತ್ ವಿಂಗ್ ಅಧ್ಯಕ್ಷರಾದ ಜ! ನವಾಜ್ ಬಿಸಿ ರೋಡ್ , ಕೆ ಐ ಸಿ ಅಲ್ ಐನ್ ಸಮಿತಿ ಕೋಶಾಧಿಕಾರಿ ಜ!ಸುಲೈಮಾನ್ ಬೈತಡ್ಕ , ದುಬೈ ಸಮಿತಿ ಗೌರವಾಧ್ಯಕ್ಷರಾದ ಜ! ಅಬ್ದುಲ್ ಖಾದರ್ ಬೈತಡ್ಕ , ಕೆ ಐ ಸಿ ಕೇಂದ್ರ ಸಮಿತಿ ಉಪಾಧ್ಯಕ್ಷರಾದ ಜ! ಅಬ್ಬಾಸ್ ಕೇಕುಡೆ , ಜ! ಅಬ್ದುಲ್ ರಝಾಕ್ ಸೊಂಪಾಡಿ, ಜ! ಯೂಸುಫ್ ಹಾಜಿ ಬೇರಿಕೆ ಶಾರ್ಜಾ , ಕೆ ಐ ಸಿ ಈದ್ ಸ್ನೇಹಮಿಲನ ಕಾರ್ಯದರ್ಶಿ ಜ!ಉಮರ್ ರೆಂಜಲಾಡಿ , ಕೆ ಐ ಸಿ ಸ್ಥಾಪಕ ಸದಸ್ಯರಾದ ಜ! ಲತೀಫ್ ಕೌಡಿಚ್ಚಾರ್ ಮೊದಲಾದವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಈದ್ ಸ್ನೇಹ ಮಿಲನದ ಮುಖ್ಯ ಸಲಹೆಗಾರರಾದ ಬಹುಮಾನ್ಯ ಅಸ್ಗರ್ ಅಲೀ ತಂಙಳ್ ರವರ ನಿರ್ದೇಶನದೊಂದಿಗೆ ಕಾರ್ಯಕ್ರಮವು ಧಾರ್ಮಿಕ ಚೌಕಟ್ಟಿನಲ್ಲಿ ನಡೆಯಿತು.

ಕ್ರೀಡಾ ತೀರ್ಪುಗಾರರಾಗಿ ಜನಾಬ್ ಆಸಿಫ್ ಸಿಬಾರ, ಜ! ಜಬ್ಬಾರ್ ಬೈತಡ್ಕ, ಜ! ರಫೀಕ್ ಮುಕ್ವೆ, ಜ! ಹಾರಿಸ್ ಪಾಪೆತಡ್ಕ, ಜ! ಆಸಿಫ್ ಮರೀಲ್, ಜ! ರಹಮಾನ್ ಪೆರಾಜೆ, ಜ! ಅಶ್ರಫ್ ಅಂಜದಿ ಉಸ್ತಾದ್, ಜ! ಜಾಬಿರ್ ಬೆಟ್ಟಂಪಾಡಿ ಮತ್ತು ಜ! ಅಶ್ರಫ್ ಪರ್ಲಡ್ಕ ರವರು ಸಹಕರಿಸಿದರು.

ನೂರ ಐವತ್ತಕ್ಕಿಂತ ಹೆಚ್ಚಿನ ಸ್ಪರ್ಧಾರ್ತಿಗಳು ಭಾಗವಹಿಸಿದ್ದ ಈ ಕಾರ್ಯಕ್ರಮದಲ್ಲಿ ಸುಮಾರು ಐನೂರು ಜನರು ಪಾಲ್ಗೊಂಡಿದ್ದರು. ಕಾರ್ಯಕ್ರಮದ ಕೊನೆಯಲ್ಲಿ ಸುಮಾರು ಐನೂರು ಜನರಿಗೆ ಸಲೀಂ ಬರೆಪ್ಪಾಡಿ ಮತ್ತು ಮುಂಝೀರ್ ನೇತೃತ್ವದಲ್ಲಿ ಹಾಗೂ ಅವರೊದಿಗೆ ನವಾಝ್ ಬಿ ಸಿ ರೋಡ್ ಶಾಹುಲ್ ಬಿ ಸಿ ರೋಡ್ ನಾಸೀರ್ ಬಪ್ಪಳಿಗೆ , ಇಸಾಕ್ ಸಾಲೆತ್ತೂರ್ , ಅಬ್ಬಾಸ್ ಕೇಕುಡೆ , ಬಷೀರ್ ಸಂಟ್ಯಾರ್ , ರವರ ಸಹಕಾರದೊಂದಿಗ ರುಚಿಕರವಾದ ಬಾರ್ಬಿಕ್ಯ್ ಡಿನ್ನರ್ ವ್ಯವಸ್ಥೆಯನ್ನು ಮಾಡಲಾಗಿತ್ತು , ನೆರೆದವರಿಗೆ ಬಡಿಸಿ ಆಹಾರದ ಉಸ್ತುವಾರಿ ತಂಡದವರು ಪ್ರಶಂಸಗೆ ಪಾತ್ರರಾದರು

ಕಾರ್ಯಕ್ರಮವನ್ನು ಸುಸೂತ್ರವಾಗಿ ಮುನ್ನಡೆಸಲು ಪ್ರಚಾರದ ಉಸ್ತುವಾರಿ ತಂಡ , ಕ್ರೀಡಾ ಉಸ್ತುವಾರಿ ತಂಡ, ಕ್ವಿಝ್ ಮತ್ತು ಇತರ ಚಟುವಟಿಕೆಗಳ ಉಸ್ತುವಾರಿ ತಂಡ, ಹಣಕಾಸು ಮತ್ತು ಆಹಾರದ ಉಸ್ತುವಾರಿ ತಂಡಗಳು, ಕೆಐಸಿ ಅಲ್ ಕೌಸರ್ ಯೂತ್ ವಿಂಗ್ ಮತ್ತು ಕೆಐಸಿಯ ನೇತಾರರು ವಿಶೇಷ ಶ್ರಮ ವಹಿಸಿದ್ದರು.

Comments are closed.